ETV Bharat / state

ಶಿವಮೊಗ್ಗ ಜಿಲ್ಲೆಯ ಜನ ಲಾಕ್​ಡೌನ್​ಗೆ ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ: ಈಶ್ವರಪ್ಪ - latest eshwarappa news

ಶಿವಮೊಗ್ಗ ಜಿಲ್ಲೆಯಲ್ಲಿ ಜನರ ಸಹಕಾರದಿಂದಾಗಿ ಇಲ್ಲಿಯವರೆಗೂ ಒಂದೂ ಕೊರೊನಾ ಪಾಸಿಟಿವ್​ ಕೇಸ್​ ಪತ್ತಯಾಗಿಲ್ಲ. ಮೆಗ್ಗಾನ್​ ಹೆರಿಗೆ ವಾರ್ಡ್​ಅನ್ನು ಹೆರಿಗೆ ವಾರ್ಡ್​ ಆಗಿಯೇ ಬಳಸಲಾಗುತ್ತಿದೆ ಎಂದು ಸಚಿವ ಕೆ.ಎಸ್​.ಈಶ್ವರಪ್ಪ ತಿಳಿಸಿದ್ದಾರೆ.

eshwarappa
ಸಚಿವ ಕೆ.ಎಸ್​. ಏಶ್ವರಪ್ಪ
author img

By

Published : Apr 8, 2020, 5:10 PM IST

ಶಿವಮೊಗ್ಗ: ಜಿಲ್ಲೆಯಲ್ಲಿ ಒಂದೂ ಕೊರೊನಾ ಪಾಸಿಟಿವ್ ಪ್ರಕರಣ ಕಂಡು ಬಂದಿಲ್ಲ. ಜನ ಲಾಕ್​ಡೌನ್​ಗೆ ಉತ್ತಮವಾಗಿ ಸಹಕರಿಸಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.

ಕೊರೊನಾ ಸ್ಥಿತಿಗತಿಯ ಕುರಿತು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಅಧಿಕಾರಿಗಳ ಜೊತೆ ‍ಚರ್ಚೆ ನಡೆಸಿದ ಬಳಿಕ ಮಾತನಾಡಿದ ಅವರು, ಕೊರೊನಾ ಲಾಕ್​ಡೌನ್​ಗೆ ಜಿಲ್ಲೆಯ ಜನರು ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ. ಕೆಲವರು ರಸ್ತೆಯಲ್ಲಿ ಓಡಾಡುತ್ತಿದ್ದಾರೆ. ಅವರಿಗೆ ಪೊಲೀಸ್ ಇಲಾಖೆಯವರು ಸೂಕ್ತ ಕ್ರಮ ಕೈಗೊಳ್ಳುತ್ತಿದ್ದಾರೆ. ನಮ್ಮ ಜಿಲ್ಲೆಗೆ ಬೇರೆ ಜಿಲ್ಲೆಯವರನ್ನು ಸೇರಿಸುತ್ತಿಲ್ಲ. ಅದೇ ರೀತಿ ನಮ್ಮ ಜಿಲ್ಲೆಯವರನ್ನು ಬೇರೆ ಜಿಲ್ಲೆಗೆ ಬಿಡುತ್ತಿಲ್ಲ ಎಂದರು.

ಸಚಿವ ಕೆ.ಎಸ್​.ಈಶ್ವರಪ್ಪ

ನಗರದ ಪ್ರಸಿದ್ಧ ಮೆಗ್ಗಾನ್ ಆಸ್ಪತ್ರೆಯ ಮಕ್ಕಳ ವಾರ್ಡ್​ನಲ್ಲಿಯೇ ಹೆರಿಗೆ ಕೂಡ ನಡೆಯುತ್ತಿದೆ. ಇದರಿಂದ ಹೆರಿಗೆ ವಾರ್ಡ್​ನಲ್ಲಿ ಆಗಬೇಕಾಗಿರುವ ಕೆಲಸಗಳ ಬಗ್ಗೆ ಪಟ್ಟಿ ಮಾಡಲಾಗಿದೆ. ಅವರು ಪಟ್ಟಿ ನೀಡಿದ ನಂತರ ಕಾಮಗಾರಿ ನಡೆಸಲಾಗುವುದು ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.