ಶಿವಮೊಗ್ಗ : ಬುಟ್ಟಿಯಲ್ಲಿ ಮೀನು ಮಾರುವ ಮಹಿಳೆಯರಿಗೆ ಮಾರುಕಟ್ಟೆ ಪಕ್ಕದಲ್ಲಿ ಅವಕಾಶ ನೀಡಬೇಕು ಎಂದು ಮಹಾನಗರ ಪಾಲಿಕೆ ಪ್ರತಿಪಕ್ಷದ ನಾಯಕ ಹೆಚ್.ಸಿ. ಯೋಗೇಶ್ ಆಗ್ರಹಿಸಿದ್ದಾರೆ.
![Shivamogga Palike members Visit Fish Market](https://etvbharatimages.akamaized.net/etvbharat/prod-images/kn-smg-03-palike-members-visit-fish-market-ka10011_13102020182708_1310f_02835_16.jpg)
ನಗರದ ಲಷ್ಕರ್ ಮೊಹಲ್ಲದಲ್ಲಿರುವ ಮೀನು, ಮಾಂಸ ಮಾರುಕಟ್ಟೆಗೆ ಮಹಾನಗರ ಪಾಲಿಕೆಯ ಕಾಂಗ್ರೆಸ್ ಸದಸ್ಯರುಗಳ ಜೊತೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು ಸುಮಾರು 40 ವರ್ಷಗಳಿಂದ ಬುಟ್ಟಿಯಲ್ಲಿ ಮೀನು ಮಾರಾಟ ಮಾಡುತ್ತಿರುವ ಹೆಣ್ಣುಮಕ್ಕಳಿಗೆ ಮಾರುಕಟ್ಟೆ ಒಳಗಡೆ ಮೀನು ಮಾರಾಟ ಮಾಡಲು ಅವಕಾಶ ಸಿಗುತ್ತಿಲ್ಲ. ನಗರ ಪಾಲಿಕೆಯಿಂದ 21 ಮಳಿಗೆಗೆ ಇ- ಪ್ರಕ್ಯೂರ್ಮೆಂಟ್ ಮುಖಾಂತರ ಹರಾಜು ಟೆಂಡರ್ ಕರೆಯುತ್ತಿದ್ದಾರೆ.
![Shivamogga Palike members Visit Fish Market](https://etvbharatimages.akamaized.net/etvbharat/prod-images/kn-smg-03-palike-members-visit-fish-market-ka10011_13102020182708_1310f_02835_861.jpg)
ಟೆಂಡರ್ ವಿವರದಲ್ಲಿ ಪ್ರತಿ ಮಳಿಗೆಗೆ ಕನಿಷ್ಠ ಬಾಡಿಗೆ ದರ 3,313 ರಿಂದ 4,042 ರೂ. ಆಗಿದೆ. ಇ- ಪ್ರಕ್ಯೂರ್ಮೆಂಟ್ ಆದುದರಿಂದ ಬಂಡವಾಳಶಾಹಿಗಳು ಟೆಂಡರ್ ಪ್ರಕ್ರಿಯೆಯಲ್ಲಿ ಭಾಗವಹಿಸುವ ಸಂಭವವಿರುತ್ತದೆ. ತದನಂತರ ಒಳ ಬಾಡಿಗೆ ಮುಖಾಂತರ ಹೆಚ್ಚಿನ ಹಣಕ್ಕೆ ಬಾಡಿಗೆ ಕೊಡುವ ಸಂಭವವಿದೆ. ಆದ್ದರಿಂದ ಈ ಮಹಿಳೆಯರು ಮೀನು ಮಾರಾಟದಿಂದ ವಂಚಿತರಾಗುತ್ತಾರೆ. ಹಾಗಾಗಿ, ಮಹಾನಗರ ಪಾಲಿಕೆಯಿಂದ ಇವರಿಗೆ ಮಾರುಕಟ್ಟೆ ಪಕ್ಕದಲ್ಲಿ ಮೀನು ಮಾರಾಟ ಮಾಡಲು ಅವಕಾಶ ನೀಡಬೇಕು ಎಂದು ಪಾಲಿಕೆಗೆ ಆಗ್ರಹಿಸಿ ಅವರ ಸಮಸ್ಯೆ ಆಲಿಸಿದರು.
![Shivamogga Palike members Visit Fish Market](https://etvbharatimages.akamaized.net/etvbharat/prod-images/kn-smg-03-palike-members-visit-fish-market-ka10011_13102020182708_1310f_02835_867.jpg)
ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯರಾದ ಯಮುನಾ ರಂಗೇಗೌಡ, ರೇಖಾ ರಂಗನಾಥ್, ಆರ್.ಸಿ ನಾಯ್ಕ್, ಸೇರಿದಂತೆ ಇತರರು ಉಪಸ್ಥಿತರಿದ್ದರು.