ETV Bharat / state

ಶಿವಮೊಗ್ಗ: ಲೌಕ್​​ಡೌನ್​ ಅವಧಿಯಲ್ಲಿ 54 ಬಾಲ್ಯ ವಿವಾಹಗಳಿಗೆ ಬ್ರೇಕ್​ ಹಾಕಿದ ಅಧಿಕಾರಿಗಳು

2020-21ನೇ ಸಾಲಿನಲ್ಲಿ ಅಕ್ಟೋಬರ್ 10ರ ಅಂತ್ಯಕ್ಕೆ ಜಿಲ್ಲೆಯಲ್ಲಿ 14 ಬಾಲ್ಯ ವಿವಾಹಗಳು ನಡೆದಿವೆ. ಈ ಸಂಬಂಧ ಪೋಷಕರ ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ. ಒಟ್ಟು 67 ಬಾಲ್ಯ ವಿವಾಹ ಪ್ರಕರಣಗಳನ್ನು ತಡೆಯಲಾಗಿದೆ. ಕಳೆದ ವರ್ಷ ಅಂದರೇ 2019-20ನೇ ಸಾಲಿನಲ್ಲಿ ಜಿಲ್ಲೆಯಲ್ಲಿ 16 ಬಾಲ್ಯ ವಿವಾಹಗಳು ನಡೆದಿದ್ದರೆ, 54 ಬಾಲ್ಯ ವಿವಾಹಗಳನ್ನು ಅಧಿಕಾರಿಗಳು ತಡೆದಿದ್ದಾರೆ.

Officer
ಅಧಿಕಾರಿ
author img

By

Published : Oct 12, 2020, 4:51 PM IST

ಶಿವಮೊಗ್ಗ: ಲಾಕ್‌ಡೌನ್ ಜಾರಿಯಾದ ದಿನದಿಂದ ಈವರೆಗೆ ಜಿಲ್ಲೆಯಲ್ಲಿ ಅತೀ ಹೆಚ್ಚು ಬಾಲ್ಯವಿವಾಹಗಳು ವರದಿಯಾಗಿದ್ದು, ಮದುವೆ ಸಮಾರಂಭಗಳಿಗೆ ಪೊಲೀಸರ ಅನುಮತಿ ಪಡೆಯುವುದು ಕಡ್ಡಾಯವಾಗಿದ್ದರಿಂದ ಅನೇಕ ಪ್ರಕರಣಗಳು ಬೆಳಕಿಗೆ ಬಂದಿವೆ.

ಜಿಲ್ಲೆಯಲ್ಲಿ ಮಾರ್ಚ್​ನಿಂದ ಆಗಸ್ಟ್​ವರೆಗೆ 9 ಬಾಲಕಿಯರ ಬಾಲ್ಯವಿವಾಹಗಳು ನಡೆದಿವೆ. 6 ಬಾಲಕರು ಹಾಗೂ 48 ಬಾಲಕಿಯರು ಸೇರಿದಂತೆ 54 ವಿವಾಹಗಳನ್ನು ತಡೆಯುವಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರು ಯಶಸ್ವಿಯಾಗಿದ್ದಾರೆ. 2020-21ನೇ ಸಾಲಿನಲ್ಲಿ ಅಕ್ಟೋಬರ್ 10ರ ಅಂತ್ಯಕ್ಕೆ ಜಿಲ್ಲೆಯಲ್ಲಿ 14 ಬಾಲ್ಯ ವಿವಾಹಗಳು ನಡೆದಿವೆ. ಈ ಸಂಬಂಧ ಪೋಷಕರ ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ. ಒಟ್ಟು 67 ಬಾಲ್ಯ ವಿವಾಹ ಪ್ರಕರಣಗಳನ್ನು ತಡೆಯಲಾಗಿದೆ. ಕಳೆದ ವರ್ಷ ಅಂದ್ರೆ, 2019-20ನೇ ಸಾಲಿನಲ್ಲಿ ಜಿಲ್ಲೆಯಲ್ಲಿ 16 ಬಾಲ್ಯ ವಿವಾಹಗಳು ನಡೆದಿದ್ದರೆ, 54 ಬಾಲ್ಯ ವಿವಾಹಗಳನ್ನು ಅಧಿಕಾರಿಗಳು ತಡೆದಿದ್ದಾರೆ.

ಈಟಿವಿ ಭಾರತದೊಂದಿಗೆ ಮಾತನಾಡಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಸುರೇಶ್ .ಜಿ

ಕಳೆದ ವರ್ಷದ ಅಂಕಿ-ಅಂಶಕ್ಕೆ ಹೋಲಿಸಿದರೆ ಕೊರೊನಾ ಲಾಕ್‌ಡೌನ್ ಅವಧಿಯಲ್ಲಿ ಬಾಲ್ಯ ವಿವಾಹ ಪ್ರಕರಣಗಳು ಭಾರೀ ಏರಿಕೆ ಕಂಡಿವೆ. ಜಿಲ್ಲೆಯಲ್ಲಿ ಈ ಅವಧಿಯಲ್ಲಿ ಪತ್ತೆಯಾಗಿರುವ ಪ್ರಕರಣಗಳಲ್ಲಿ ಶೇ.50ರಷ್ಟು ವಿವಾಹಗಳು ಆರ್ಥಿಕ ಸಂಕಷ್ಟದಿಂದ ನಡೆದಿದ್ದರೆ, ಬಾಕಿ ಪ್ರಕರಣಗಳು ಪ್ರೀತಿ-ಪ್ರೇಮ ಪ್ರಕರಣಗಳು, ಲೈಂಗಿಕ ದೌರ್ಜನ್ಯಕ್ಕೆ ಹೆದರಿ, ಯುವತಿ ಇತರೆ ಜಾತಿ, ಧರ್ಮದ ಯುವಕನ ಜತೆಪರಾರಿಯಾಗುವ ಆತಂಕದಿಂದ ವಿವಾಹ ನಡೆಸಲು ಮುಂದಾಗಿದ್ದರು ಎಂಬ ಮಾಹಿತಿ ಹೊರಬಿದ್ದಿದೆ.

ಜಿಲ್ಲೆಯ ಪ್ರತಿ ಹಳ್ಳಿಗಳಲ್ಲೂ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲಾಗಿದ್ದು, ಇಲಾಖೆಯ 1098 ಸಹಾಯವಾಣಿಗೆ ಅನೇಕ ದೂರುಗಳು ಬಂದಿವೆ. ಆಶಾ ಕಾರ್ಯಕರ್ತೆಯರು ಮನೆ ಮನೆ ಭೇಟಿ ಕೊಡುತ್ತಿರುವ ಕಾರಣ ಅವರಿಗೇ ಅನೇಕ ಮಂದಿ ಮಾಹಿತಿ ಕೊಟ್ಟಿದ್ದಾರೆ. ಮದುವೆ ಮಂಟಪದ ಮಾಲೀಕರಿಗೂ ಜಾಗೃತಿ ಮೂಡಿಸಲಾಗಿದ್ದು, ಹುಡುಗ-ಹುಡುಗಿಯ ವಯಸ್ಸು ಪರಿಶೀಲಿಸಿ ಅನುಮತಿ ನೀಡಿದರೆ ಇನ್ನಷ್ಟು ಬಾಲ್ಯ ವಿವಾಹಗಳನ್ನು ತಡೆಯಬಹುದು ಎಂಬುದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಸುರೇಶ್​ ಜಿ ಅವರ ಮಾತಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.