ETV Bharat / state

ಶಿವಮೊಗ್ಗ: ರೋಟರಿ ಚಿತಾಗಾರಕ್ಕೆ ಸಚಿವ ಈಶ್ವರಪ್ಪ ಭೇಟಿ, ಪರಿಶೀಲನೆ - ರೋಟರಿ ಚಿತಗಾರ

ಶಿವಮೊಗ್ಗದ ರೋಟರಿ ಚಿತಾಗಾರಕ್ಕೆ ಸಚಿವ ಈಶ್ವರಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Minister Eshwarappa visit Rotary Cemetery
ರೋಟರಿ ಚಿತಾಗಾರಕ್ಕೆ ಸಚಿವ ಈಶ್ವರಪ್ಪ ಭೇಟಿ, ಪರಿಶೀಲನೆ
author img

By

Published : May 12, 2021, 8:47 AM IST

ಶಿವಮೊಗ್ಗ: ಕೋವಿಡ್​​ನಿಂದ ಮೃತರಾದವರ ಶವ ಸಂಸ್ಕಾರ ನಡೆಸುವ ರೋಟರಿ ಚಿತಾಗಾರಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಭೇಟಿ ನೀಡಿ ಪರಿಶೀಲಿಸಿದರು.

ಶಿವಮೊಗ್ಗ ಬಿಜೆಪಿ ಮುಖಂಡರ ಜೊತೆ ಭೇಟಿ ನೀಡಿದ ಅವರು, ಕೋವಿಡ್​ನಿಂದ ಮೃತರಾದವರ ಶವ ದಹನ ಮಾಡುವ ಒಲೆಗಳ ಸ್ಥಿತಿಗತಿ, ಶವ ಸುಡಲು ಬೇಕಾಗುವ ಕಟ್ಟಿಗೆ ಎಷ್ಟಿದೆ?. ಹಾಗೂ ಅನಿಲ ಚಿತಾಗಾರದಲ್ಲಿ ಶವ ದಹನ ಪ್ರಕ್ರಿಯೆಯನ್ನು ವೀಕ್ಷಿಸಿದರು.

ರೋಟರಿ ಚಿತಾಗಾರಕ್ಕೆ ಸಚಿವ ಈಶ್ವರಪ್ಪ ಭೇಟಿ, ಪರಿಶೀಲನೆ

ಪ್ರತಿನಿತ್ಯ ಬೇಕಾಗುವ ‌ಸಿಲಿಂಡರ್​ಗಳ ಮಾಹಿತಿ ಪಡೆದ ಸಚಿವರು, ಶವ ದಹನಕ್ಕೆ ಯಾವುದೇ ತೂಂದರೆ ಆಗದಂತೆ ನೋಡಿಕೊಳ್ಳಬೇಕೆಂದು ಪಾಲಿಕೆ ಅಧಿಕಾರಿಗಳಿಗೆ ಸೂಚಿಸಿದರು. ಈ ವೇಳೆ ಜಿಪಂ ಸದಸ್ಯ ಕೆ.ಈ.ಕಾಂತೇಶ್, ಸಣ್ಣ ಕೈಗಾರಿಕಾ ರಾಜ್ಯ ಉಪಾಧ್ಯಕ್ಷ ಎಸ್.ದತ್ತಾತ್ರಿ, ಮೇಯರ್ ಸುನೀತ ಅಣ್ಣಪ್ಪ ಹಾಜರಿದ್ದರು.

350 ವಾಹನ ಜಪ್ತಿ, 1 ಲಕ್ಷ ರೂಪಾಯಿಗೂ ಅಧಿಕ ದಂಡ ವಸೂಲಿ:

ರಾಜ್ಯದಲ್ಲಿ ಕೊರೊನಾ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆ ರಾಜ್ಯ ಸರ್ಕಾರ ಕಟ್ಟುನಿಟ್ಟಿನ ಲಾಕ್​​ಡೌನ್ ಜಾರಿ ಮಾಡಿ ಆದೇಶಿಸಿದೆ. ಸರ್ಕಾರದ ಆದೇಶವನ್ನು ಲೆಕ್ಕಿಸದೆ ಅನಗತ್ಯವಾಗಿ ಓಡಾಡುತ್ತಿದ್ದ ಒಟ್ಟು 350 ವಾಹನಗಳನ್ನು (326 ದ್ವಿ ಚಕ್ರ ವಾಹನ, 8 ಆಟೋ ಹಾಗೂ 16 ಕಾರುಗಳನ್ನು) ಪೊಲೀಸರು ವಶಪಡಿಸಿಕೊಂಡಿದ್ದಾರೆ. IMV ಕಾಯ್ದೆ ಅಡಿಯಲ್ಲಿ ಒಟ್ಟು 240 ಪ್ರಕರಣಗಳನ್ನು ದಾಖಲಿಸಿ 1,15,600 ರೂ. ದಂಡ ವಸೂಲಿ ಮಾಡಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.