ETV Bharat / state

ಕೋಣಂದೂರು ಗ್ರಾಮ ಪಂಚಾಯಿತಿಯಲ್ಲಿ ಡಿಶುಂ..ಡಿಶುಂ.. ಸದಸ್ಯರ ಹೊಡೆದಾಟದ ವಿಡಿಯೋ ವೈರಲ್...! - ಕೋಣಂದೂರು ಗ್ರಾಮ ಪಂಚಾಯತಿ ಸದಸ್ಯರ ಹೋಡೆದಾಟ ವಿಡಿಯೋ ವೈರಲ್​

ಶಿವಮೊಗ್ಗದ ತೀರ್ಥಹಳ್ಳಿಯ ಕೋಣಂದೂರು ಗ್ರಾಮ ಪಂಚಾಯಿತಿಯಲ್ಲಿ ಸದಸ್ಯರ ನಡುವೆ ನಡೆದ ಹೊಡೆದಾಟದ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದೆ.

Konandur Gram Panchayat members fighting, Konandur Gram Panchayat members fighting video viral, Shivamogga news, ಕೋಣಂದೂರು ಗ್ರಾಮ ಪಂಚಾಯತಿ ಸದಸ್ಯರ ಹೋಡೆದಾಟ, ಕೋಣಂದೂರು ಗ್ರಾಮ ಪಂಚಾಯತಿ ಸದಸ್ಯರ ಹೋಡೆದಾಟ ವಿಡಿಯೋ ವೈರಲ್​, ಶಿವಮೊಗ್ಗ ಸುದ್ದಿ,
ಗ್ರಾಮ ಪಂಚಾಯತಿಯಲ್ಲಿ ಸದಸ್ಯರ ಹೊಡೆದಾಟ
author img

By

Published : Jan 15, 2022, 11:51 AM IST

ಶಿವಮೊಗ್ಗ: ಸ್ಥಳೀಯ ಸರ್ಕಾರ ಎಂದೇ ಕರೆಯಲ್ಪಡುವ ಗ್ರಾಮ ಪಂಚಾಯತ್ ಸಭೆಯಲ್ಲಿ ಸದಸ್ಯರು ಹೊಡೆದಾಡಿಕೊಂಡ ವಿಡಿಯೋ ವೈರಲ್ ಆಗಿದೆ. ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಕೋಣಂದೂರು ಗ್ರಾಮ ಪಂಚಾಯತ್​ನಲ್ಲಿ ನಡೆದ ಸಭೆಯಲ್ಲಿ ಸದಸ್ಯರಿಬ್ಬರು ಹೊಡೆದಾಡಿಕೊಂಡಿದ್ದಾರೆ.

ಕೋಣಂದೂರು ಗ್ರಾಮ ಪಂಚಾಯಿತಿಯಲ್ಲಿ ಡಿಶುಂ.. ಡಿಶುಂ..

ಸುರೇಶ್ ಕಾಂಗ್ರೆಸ್ ಬೆಂಬಲಿತ ಸದಸ್ಯರಾಗಿದ್ದು, ಪೂರ್ಣೇಶ್ ಬಿಜೆಪಿ ಬೆಂಬಲಿತ ಸದಸ್ಯರಾಗಿದ್ದಾರೆ. ಹೊಡೆದಾಟದಲ್ಲಿ ಸುರೇಶ್ ತನಗೆ ಗಾಯಗಳಾಗಿವೆ ಎಂದ ತೀರ್ಥಹಳ್ಳಿಯ ತಾಲೂಕು ಆಸ್ಪತ್ರೆಗೆ ದಾಖಲಾಗಿದ್ದಾರೆ. ಅದೇ ರೀತಿ ಪೂರ್ಣೇಶ್ ಕೋಣಂದೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ದಾಖಲಾಗಿ ಚಿಕಿತ್ಸೆ ಪಡೆದು ಕೊಂಡಿದ್ದಾರೆ.

ಓದಿ: ತಾಲಿಬಾನ್​ ಆಡಳಿತದಿಂದ ಪಾತಾಳಕ್ಕಿಳಿದ ಆಫ್ಘನ್: ಕುಟುಂಬ ಪೋಷಣೆಗಾಗಿ ಕೆಲಸಕ್ಕಿಳಿದ ಬಾಲಕರು

ಈ ಕುರಿತು ತೀರ್ಥಹಳ್ಳಿ ‌ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇಷ್ಟು ದಿನ ವಿಧಾನಸಭೆಯಲ್ಲಿ ಗದ್ದಲ ನೋಡಿದ್ದ ಜನ ಈಗ ಪಂಚಾಯತ್​ನಲ್ಲೂ ಡಿಶುಂ... ಡಿಶುಂ.. ನೋಡಬೇಕಾದ ಸ್ಥಿತಿ ಬಂದೊದಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.