ETV Bharat / state

ಅಪ್ರಾಪ್ತ ಮಗನ ಕೈಗೆ ಕಾರು ಕೊಟ್ಟ ತಂದೆ.. 25 ಸಾವಿರ ರೂ. ದಂಡ ವಿಧಿಸಿದ ಶಿವಮೊಗ್ಗ ಕೋರ್ಟ್ - ಲೈಸೆನ್ಸ್

ಲೈಸೆನ್ಸ್​ ಹೊಂದಿದ 18 ವರ್ಷ ಮೇಲ್ಪಟ್ಟವರು ಮಾತ್ರ ಡ್ರೈವಿಂಗ್ ಮಾಡಬಹುದು ಅನ್ನೋದು ಕಾನೂನಿನಲ್ಲಿದೆ. ಆದ್ರೆ ಅಪ್ರಾಪ್ತನ ವಯಸ್ಸಿನ ಮಗನ ಕೈಗೆ ಕಾರು ಕೊಟ್ಟು ತಂದೆಯೊಬ್ಬರು ಇಕ್ಕಟ್ಟಿಗೆ ಸಿಲುಕಿದ್ದಾರೆ. ​

Shivamogga court
ಶಿವಮೊಗ್ಗ ಕೋರ್ಟ್
author img

By ETV Bharat Karnataka Team

Published : Sep 13, 2023, 1:50 PM IST

Updated : Sep 13, 2023, 3:30 PM IST

ಶಿವಮೊಗ್ಗ: ತನ್ನ ಅಪ್ರಾಪ್ತ ವಯಸ್ಸಿನ ಮಗನ ಕೈಗೆ ಓಮ್ನಿ ಕಾರನ್ನು ಚಲಾಯಿಸಲು ನೀಡಿದ ತಂದೆಗೆ ಶಿವಮೊಗ್ಗ ಕೋರ್ಟ್ 25 ಸಾವಿರ ರೂಪಾಯಿ ದಂಡ ವಿಧಿಸಿದೆ. ಸೆಪ್ಟಂಬರ್ 9 ರಂದು ಶಿವಮೊಗ್ಗ ಕರ್ನಾಟಕ ಸಂಘದ ಬಳಿ ಸಂಚಾರಿ ಪೊಲೀಸ್ ಠಾಣೆಯ ಪಿಸಿಐ ಹೆಚ್ ಎಸ್ ಶಿವಣ್ಣನವರ್ ವಾಹನ ತಪಾಸಣೆ ನಡೆಸುವಾಗ ಓಮ್ನಿ ಕಾರನ್ನು ತಪಾಸಣೆ ನಡೆಸಿದಾಗ ವಾಹನವನ್ನು 17 ವರ್ಷದ ಬಾಲಕ ಚಲಾಯಿಸುತ್ತಿರುವುದು ಕಂಡು ಬರುತ್ತದೆ. ನಂತರ ವಾಹನದ ದಾಖಲಾತಿ ಪರಿಶೀಲಿಸಿದಾಗ ವಾಹನವು ಚಿಕ್ಕಮಗಳೂರು ಜಿಲ್ಲೆ ಎನ್ ಆರ್ ಪುರದ ಏಲಿಯಾಸ್(41) ಅವರಿಗೆ ಸೇರಿದ್ದು ಅನ್ನೋದು ಗೊತ್ತಾಗಿತ್ತು.

ಏಲಿಯಾಸ್ ತಮ್ಮ ಅಪ್ರಾಪ್ತ ವಯಸ್ಸಿನ ಮಗನಿಗ ವಾಹನವನ್ನು ಚಾಲನೆಗೆ ನೀಡಿ ಸಂಚಾರಿ ನಿಯಮದ ಕಾನೂನು ಉಲ್ಲಂಘನೆ ಮಾಡಿದ್ದಾರೆ ಎಂದು ಪೂರ್ವ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿತ್ತು. ಈ ಕುರಿತು ನ್ಯಾಯಾಲಯಕ್ಕೆ ದೋಷಾರೋಪಣಾ ವರದಿಯನ್ನು ಪೊಲೀಸರು ಸಲ್ಲಿಸಿದ್ದರು. 3ನೇ ಎ.ಸಿ.ಜೆ & ಜೆ.ಎಂ.ಎಫ್.ಸಿ ನ್ಯಾಯಾಲಯ ಶಿವಮೊಗ್ಗ ಕೋರ್ಟ್​ ನ್ಯಾಯಾಧೀಶರು ಓಮ್ನಿ ವಾಹನದ ಮಾಲೀಕರಾದ ಬಾಲಕನ ತಂದೆ ಏಲಿಯಾಸ್ ಅವರಿಗೆ ರೂ. 25 ಸಾವಿರ ರೂ. ದಂಡ ವಿಧಿಸಿ ಆದೇಶ ನೀಡಿದ್ದಾರೆ.

ಕಳೆದ ವಾರ ಪೂರ್ವ ಸಂಚಾರ ಪೊಲೀಸರು ಬೈಕ್ ತಪಾಸಣೆ ನಡೆಸುವಾಗ 17 ವರ್ಷದ ಬಾಲಕ ಬೈಕ್ ಚಲಾಯಿಸಿದ್ದು ಕಂಡುಬಂದಿತ್ತು. ಈ ಪ್ರಕರಣದ ದೋಷಾರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಕಳುಹಿಸಿದಾಗ ನ್ಯಾಯಾಧೀಶರು ಬೈಕ್ ನೀಡಿದ ತಂದೆಗೆ 25 ಸಾವಿರ ರೂಪಾಯಿ ದಂಡ ವಿಧಿಸಿ ಆದೇಶ ಹೊರಡಿಸಿದ್ದರು.

Last Updated : Sep 13, 2023, 3:30 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.