ETV Bharat / state

ಶ್ರಮಿಕ ಮಹಿಳೆಯರ ಸ್ವಾಭಿಮಾನಿ ಸಂಕೇತ ಈ ಚರಕ - shivamogga Charaka is internationally renowned

ಗ್ರಾಮೀಣಾಭಿವೃದ್ಧಿ ಹಾಗೂ ದೇಶಿ ಚಿಂತನೆಯೊಂದಿಗೆ ಪ್ರಾರಂಭವಾದ ಚರಕ‌ ಸಂಸ್ಥೆಯು ಅಪ್ಪಟ ದೇಶಿ ಬಟ್ಟೆಗಳನ್ನು ತಯಾರು ಮಾಡುತ್ತಿದೆ. ಇದು ಪ್ರತಿ ತಿಂಗಳು 30 ಸಾವಿರ ಮೀಟರ್ ನೈಸರ್ಗಿಕ ಬಣ್ಣದ ಬಟ್ಟೆ ಉತ್ಪಾದಿಸುವ ದೇಶದ ಅಗ್ರಗಣ್ಯ ಸಂಸ್ಥೆಯಾಗಿದ್ದು, 800 ಮಹಿಳೆಯರು ವಿವಿಧ ವಿಭಾಗಗಳಲ್ಲಿ ಕೆಲಸ ಮಾಡುತ್ತಿದ್ದಾರೆ.

ಚರಕ
ಚರಕ
author img

By

Published : Mar 2, 2022, 2:28 PM IST

Updated : Mar 2, 2022, 3:40 PM IST

ಶಿವಮೊಗ್ಗ: ಗ್ರಾಮೀಣಾಭಿವೃದ್ಧಿ ಹಾಗೂ ದೇಶಿ ಚಿಂತನೆಯೊಂದಿಗೆ ಪ್ರಾರಂಭವಾದ ಚರಕ‌ ಸಂಸ್ಥೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧಿ ಪಡೆದಿದೆ. ಇಲ್ಲಿ ತಯಾರಾಗುವ ಬಟ್ಟೆಗಳು ನೈಸರ್ಗಿಕ ಬಣ್ಣದಿಂದ ಕೂಡಿರುವುದರಿಂದ ಉತ್ತಮ ಮಾರುಕಟ್ಟೆಯನ್ನ ಹೊಂದಿದ್ದು, ಬೇಡಿಕೆಯೂ ಸಹ ಹೆಚ್ಚಿದೆ.

ಚರಕ ಹಾಗೂ ಕೈ‌ಮಗ್ಗದಲ್ಲಿ ಅಪ್ಪಟ ದೇಶಿ ಬಟ್ಟೆಗಳನ್ನು ತಯಾರು ಮಾಡುವ ಚರಕ ಸಂಸ್ಥೆಯಲ್ಲಿ ಶೇ 99.99 ರಷ್ಟು ಮಹಿಳೆಯರೇ ಉದ್ಯೋಗಿಗಳಾಗಿರುವುದು ವಿಶೇಷ. ಚರಕ ಸಂಸ್ಥೆಯು ಪ್ರತಿ ತಿಂಗಳು 30 ಸಾವಿರ ಮೀಟರ್ ನೈಸರ್ಗಿಕ ಬಣ್ಣದ ಬಟ್ಟೆ ಉತ್ಪಾದಿಸುವ ದೇಶದ ಅಗ್ರಗಣ್ಯ ಸಂಸ್ಥೆಯಾಗಿದೆ. ಇಂತಹ ಸಂಸ್ಥೆಯಲ್ಲಿ 800 ಮಹಿಳೆಯರು ವಿವಿಧ ವಿಭಾಗಗಳಲ್ಲಿ ಕೆಲಸ ಮಾಡುತ್ತಿದ್ದಾರೆ.

ಚರಕ ಸಂಸ್ಥೆ ತನ್ನ ಉತ್ಪಾದನೆ ಜಾಗಕ್ಕೆ 'ಶ್ರಮಜೀವಿ ಆಶ್ರಮ' ಎಂದು ಹೆಸರು‌ ಕೊಟ್ಟಿದೆ. ಕಚೇರಿ ನಿರ್ವಹಣೆ ಬೇರೆ ಕಡೆ‌ ನಡೆಯುತ್ತದೆ. ಅದೇ ರೀತಿ ಮಾರಾಟಕ್ಕೆ ಚರಕದ 'ಅಂಗಡಿ'ಯನ್ನು ತೆರೆದಿದೆ. ಚರಕ‌ದ‌ ನೈಸರ್ಗಿಕ‌ ಬಟ್ಟೆಗೆ ಬೇಡಿಕೆ ಇದ್ದು, ಪ್ರಪಂಚದಾದ್ಯಂತ ಗ್ರಾಹಕರಿದ್ದಾರೆ.

ಶ್ರಮಿಕ ಮಹಿಳೆಯರ ಸ್ವಾಭಿಮಾನಿ ಸಂಕೇತ ಈ ಚರಕ

ಗಾಂಧಿ ಕನಸು ನನಸು ಮಾಡುತ್ತಿರುವ ಚರಕ ಸಂಸ್ಥೆಯ ಮಹಿಳೆಯರು: ಗಾಂಧಿಜೀಯವರು ಗ್ರಾಮಾಭಿವೃದ್ಧಿ ಕನಸನ್ನು ಕಂಡಿದ್ದರು. ಇದಕ್ಕಾಗಿ ಗಾಂಧಿ ಅವರೇ ಸ್ವಂತಃ ಚರಕದಿಂದ ಬಟ್ಟೆ ನೇಯ್ದು ವಿದೇಶಿ ಬಟ್ಟೆಗಳನ್ನು ಬಹಿಷ್ಕರಿಸಿದ್ದರು. ಇದನ್ನೇ ಸ್ಪೂರ್ತಿಯಾಗಿ ಪಡೆದ ಚರಕದ ಸಂಸ್ಥಾಪಕರಾದ ಪ್ರಸನ್ನ ಅವರು ಸಾಗರ ತಾಲೂಕು ಹೊನ್ನೇಸರ ಎಂಬ ಗ್ರಾಮದಲ್ಲಿ ಚರಕ ಮಹಿಳಾ ವಿವಿದೋದ್ದೇಶ ಸಂಘವನ್ನು ಕಳೆದ 25 ವರ್ಷಗಳ ಹಿಂದೆ ಸ್ಥಾಪಿದ್ದಾರೆ. ಪ್ರಸನ್ನ ಅವರು ರಂಗಕರ್ಮಿಗಳಾಗಿದ್ದು, ಇವರು ಗ್ರಾಮೀಣ ಕೈಗಾರಿಕೆ ಸ್ಥಾಪಿಸಿ, ದುಡಿಯುವ ಮಹಿಳೆಯರಿಗೆ ಉದ್ಯೋಗ ನೀಡಿದ್ದಾರೆ. ಇಲ್ಲಿ ಬಟ್ಟೆ ತಯಾರಿಕೆಯ ಎಲ್ಲ ವಿಭಾಗದಲ್ಲೂ ಸಹ ಮಹಿಳೆಯರು ಕಾರ್ಯ ನಿರ್ವಹಿಸುತ್ತಿದ್ದಾರೆ.

ಹಿಂದೆ ನೇರಳೆಯಲ್ಲಿ ಬಟ್ಟೆಯನ್ನು‌ ನೇಯುವ, ಬಟ್ಟೆ ಕತ್ತರಿಸುವ, ಬಣ್ಣ ಹಾಕುವ, ಅಚ್ಚು ಹಾಕುವ, ಹೋಲಿಯುವ ಹಾಗೂ ಪ್ಯಾಕ್‌ ಮಾಡುವ ಕೆಲಸವನ್ನು ಮಾಡುತ್ತಿದ್ದರು. ಚರಕ ಸಂಸ್ಥೆಯು ದೇಶಿ ಅಂಗಡಿಗಳ ಮೂಲಕ ಗ್ರಾಹಕರನ್ನು ತಲುಪುತ್ತಿದೆ. ಇಲ್ಲಿನ ಬಟ್ಟೆಗೆ ಪ್ರಪಂಚದಾದ್ಯಂತ ಗ್ರಾಹಕರಿದ್ದಾರೆ. ‌ಅತ್ಯಂತ ಅಚ್ಚುಕಟ್ಟಾಗಿ, ಶ್ರದ್ಧೆಯಿಂದ ಪರಿಶ್ರಮ ಹಾಕಿ ಇಲ್ಲಿನ ಮಹಿಳೆಯರು ಕೆಲಸ ನಿರ್ವಹಿಸುತ್ತಿದ್ದಾರೆ. ಅಷ್ಟೇ ಅಲ್ಲದೆ ಮಲೆನಾಡಿಗೆ ಈಗ ವಿವಿಧ ಕಂಪನಿಯ ಗಾರ್ಮೆಂಟ್ಸ್​ಗಳು ಬರುತ್ತಿರುವುದು ಹೆಮ್ಮೆಯ ವಿಚಾರ.

Last Updated : Mar 2, 2022, 3:40 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.