ಶಿವಮೊಗ್ಗ : ಕೋವಿಡ್-19 ಹಾವಳಿಯಲ್ಲೂ ರಾಜ್ಯ ಸರ್ಕಾರ ನಾಲ್ವರು ತಹಶೀಲ್ದಾರ್ರನ್ನ ವರ್ಗಾವಣೆ ಮಾಡಿ ಆದೇಶಿಸಿದೆ.
ಶಿವಮೊಗ್ಗ ತಹಶೀಲ್ದಾರ್ ಬಿ ಎನ್ ಗಿರೀಶ್ ಅವರನ್ನು ದಾವಣಗೆರೆ ಜಿಲ್ಲೆ ಚನ್ನಗಿರಿಗೆ ತಹಶೀಲ್ದಾರ್ ಆಗಿ ವರ್ಗಾವಣೆ ಮಾಡಲಾಗಿದೆ. ಅದೇ ರೀತಿ ಚನ್ನಗಿರಿ ತಹಶೀಲ್ದಾರ್ ಆಗಿದ್ದ ಎನ್ ಜೆ ನಾಗರಾಜ್ ಅವರನ್ನು ಶಿವಮೊಗ್ಗಕ್ಕೆ ವರ್ಗಾವಣೆ ಮಾಡಲಾಗಿದೆ. ಶಿವಮೊಗ್ಗ ಜಿಲ್ಲಾಧಿಕಾರಿಗಳ ಕಚೇರಿಯ ಸಹಾಯಕರಾಗಿದ್ದ ನಫೀಜಾ ಬೇಗಂ ಅವರನ್ನು ಜಿಲ್ಲಾಧಿಕಾರಿ ಕಚೇರಿಯ ಮುನ್ಸಿಪಲ್ ತಹಶೀಲ್ದಾರ್, ನಗರಾಭಿವೃದ್ದಿ ಕೋಶಕ್ಕೆ ವರ್ಗಾವಣೆ ಮಾಡಲಾಗಿದೆ.
ನಫೀಜಾ ಬೇಗಂ ಅವರ ಜಾಗಕ್ಕೆ ಮೈಸೂರಿನಲ್ಲಿ ಪ್ರಾದೇಶಿಕ ಆಯುಕ್ತರ ಕಚೇರಿಯಲ್ಲಿ ತಹಶೀಲ್ದಾರ್ ಆಗಿದ್ದ ಬಿ ಎಸ್ ಕಡಕಭಾವಿ ಅವರನ್ನು ವರ್ಗಾಯಿಸಿ ಸರ್ಕಾರ ಆದೇಶ ಹೊರಡಿಸಿದೆ.