ಶಿವಮೊಗ್ಗ: ಮಹಾಮಾರಿ ಕೊರೊನಾಗೆ ಇಲ್ಲಿನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಸಿಬ್ಬಂದಿಯೊಬ್ಬರು ಬಲಿಯಾಗಿದ್ದಾರೆ.
ಎಸ್ಪಿ ಕಚೇರಿಯ ತಿಮ್ಮಪ್ಪ (51) ಕೋವಿಡ್ ಗೆ ಬಲಿಯಾದವರು. ತಿಮ್ಮಪ್ಪ ಎಸ್ಪಿ ಕಚೇರಿಯಲ್ಲಿ ಶಾಖಾಧೀಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದರು.
ಕಳೆದ ಎರಡು ದಿನದ ಹಿಂದೆ ಕೋವಿಡ್ ಪಾಸಿಟಿವ್ ಬಂದಿತ್ತು. ನಂತರ ಮನೆಯಲ್ಲಿಯೇ ಐಸೋಲೇಷನ್ ಆಗಿದ್ದರು. ತಿಮ್ಮಪ್ಪ ಹೋಂ ಐಸೋಲೇಷನ್ ಆಗಿದ್ದಾಗಲೇ ಸಾವನ್ನಪ್ಪಿದ್ದಾರೆ.