ETV Bharat / state

ರಂಜದಕಟ್ಟೆ ಸೇತುವೆ ಕುಸಿತ: ರಾಷ್ಟ್ರೀಯ ಹೆದ್ದಾರಿ ಸಂಚಾರ ಬಂದ್​​ - ಮಂಗಳೂರು ಸೊಲ್ಲಾಪುರ ರಾಷ್ಟ್ರೀಯ ಹೆದ್ದಾರಿ ಬಂದ್​

ರಂಜದಕಟ್ಟೆ ಬಳಿ ಸೇತುವೆ ಬಲ ಭಾಗದಲ್ಲಿ ಕುಸಿತವಾಗಿದ್ದು, ಮಲೆನಾಡು ಹಾಗೂ ಕರಾವಳಿ ಭಾಗಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆ ಬಂದ್​ ಆಗಿದೆ.

Shimogga: Ranjadakatte bridge collapsed
ರಂಜದಕಟ್ಟೆ ಸೇತುವೆ ಕುಸಿತ: ರಾಷ್ಟ್ರೀಯ ಹೆದ್ದಾರಿ ಸಂಚಾರ ಬಂದ್
author img

By

Published : Sep 24, 2020, 11:05 AM IST

ಶಿವಮೊಗ್ಗ: ತೀರ್ಥಹಳ್ಳಿ ತಾಲೂಕಿನ ರಂಜದಕಟ್ಟೆ ಬಳಿ ಸೇತುವೆ ಬಲ ಭಾಗದಲ್ಲಿ ಕುಸಿತವಾಗಿದ್ದು, ಮಂಗಳೂರು-ಸೊಲ್ಲಾಪುರ ರಾಷ್ಟ್ರೀಯ ಹೆದ್ದಾರಿ 196(ಎ) ಸಂಚಾರ ಬಂದ್ ಆಗಿದೆ.

ಇದು ಮಲೆನಾಡು ಹಾಗೂ ಕರಾವಳಿ ಭಾಗಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯಾಗಿದೆ. ಈಗಾಗಲೇ ಈ ಭಾಗದಲ್ಲಿ ರಸ್ತೆ ಉನ್ನತೀಕರಣ ನಡೆಯುತ್ತಿದೆ. ಆದರೆ ಸೇತುವೆ ನಿರ್ಮಾಣ ಮಾಡುವಲ್ಲಿ ಲೋಕೋಪಯೋಗಿ ಇಲಾಖೆ ನಿರ್ಲಕ್ಷ್ಯದ ಪರಿಣಾಮ ರಸ್ತೆ ಸಂಚಾರ ಬಂದ್ ಆಗಿದೆ ಎನ್ನಲಾಗಿದೆ.

ರಂಜದಕಟ್ಟೆ ಸೇತುವೆ ಕುಸಿತ

ಈ ಭಾಗದಲ್ಲಿ ಮಳೆ ಸುರಿಯುತ್ತಿರುವುದು ಹಾಗೂ ಸೇತುವೆ ಹಳೆಯದಾಗಿರುವುದೇ ಕುಸಿತಕ್ಕೆ ಕಾರಣವಾಗಿದೆ. ಇದರಿಂದ ಸೇತುವೆಯ ಎರಡು ಭಾಗಗಲ್ಲಿ ಪೊಲೀಸರು ಟೇಪ್ ಕಟ್ಟಿ ರಸ್ತೆ ಸಂಚಾರಕ್ಕೆ ಬ್ರೇಕ್ ಹಾಕಿದ್ದಾರೆ.

ಪರ್ಯಾಯ ರಸ್ತೆ ಸಂಚಾರ: ಉಡುಪಿ ಕಡೆ ಪ್ರಯಾಣ ಬೆಳೆಸುವವರು, ತೀರ್ಥಹಳ್ಳಿಯಿಂದ ಕಲ್ಮನೆ, ಉಂಟೂರುಕಟ್ಟೆ, ಕೈಮರದ ಬಳಿ ಸಿಗುವ ಬಿಳುಕೊಪ್ಪದ ಶಾಲೆಯ ಪಕ್ಕದಲ್ಲಿ ಚಲಿಸಿ, ಸಾತ್ಗೋಡು ಮಾರ್ಗವಾಗಿ ಚಲಿಸಿ, ಅಲ್ಲಿಂದ ಬಲಭಾಗದಿಂದ ಮುಕ್ತಿಪುರ, ಬೊಬ್ನಿ ಮಾರ್ಗವಾಗಿ ಸಂಪರ್ಕಿಸಬಹುದಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.