ETV Bharat / state

ಶಿವಮೊಗ್ಗದಲ್ಲಿ ಏಕಾಏಕಿ ಅಂಗಡಿ - ಮುಂಗಟ್ಟು ಬಂದ್, ಸರ್ಕಾರದ ವಿರುದ್ಧ ಆಕ್ರೋಶ

ಪೊಲೀಸರು ಏಕಾಏಕಿ ಅಂಗಡಿ, ಮುಗ್ಗಟ್ಟುಗಳನ್ನು ಬಂದ್ ಮಾಡಿಸಿದರು. ಸರಿಯಾದ ರೀತಿಯಲ್ಲಿ ಜನರಿಗೆ ಮಾಹಿತಿ ನೀಡದೇ ಸರ್ಕಾರ ದಿನಕ್ಕೊಂದು ಆದೇಶ ಮಾಡುತ್ತಿದೆ.

Shimogga
Shimogga
author img

By

Published : Apr 22, 2021, 9:59 PM IST

Updated : Apr 23, 2021, 1:43 AM IST

ಶಿವಮೊಗ್ಗ: ನಗರದ ಪ್ರಮುಖ ವ್ಯಾಪಾರ ಕೇಂದ್ರವಾದ ಗಾಂಧಿ ಬಜಾರ್ ನಲ್ಲಿ ಪೊಲೀಸರು ಬಂದ್ ಮಾಡುವಂತೆ ಪ್ರಕಟಣೆ ಮಾಡಿದರು. ಹಾಗಾಗಿ ವ್ಯಾಪಾರಸ್ಥರು ಸಹ ಅಂಗಡಿಗಳನ್ನು ಬಂದ್ ಮಾಡಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಕೊರೊನಾ ಎರಡನೇ ಅಲೆ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಅಗತ್ಯ ವಸ್ತುಗಳ ಸೇವೆಯನ್ನು ಹೊರತು ಪಡಿಸಿ ಉಳಿದೆಲ್ಲವನ್ನು ಬಂದ್ ಮಾಡುವಂತೆ ಹೊಸ ಮಾರ್ಗಸೂಚಿಯಲ್ಲಿ ಆದೇಶ ಹೊರಡಿಸಿದೆ.

ಈ ಹಿನ್ನೆಲೆಯಲ್ಲಿ ಇಂದು ಪೊಲೀಸರು ಏಕಾಏಕಿ ಅಂಗಡಿ, ಮುಗ್ಗಟ್ಟುಗಳನ್ನು ಬಂದ್ ಮಾಡಿಸಿದರು. ಸರಿಯಾದ ರೀತಿಯಲ್ಲಿ ಜನರಿಗೆ ಮಾಹಿತಿ ನೀಡದೇ ಸರ್ಕಾರ ದಿನಕ್ಕೊಂದು ಆದೇಶ ಮಾಡುತ್ತಿದೆ.

ಇದರಿಂದ ಮೊದಲೇ ಕೊರೊನಾ ದಿಂದ ಸಂಕಷ್ಟಕ್ಕೆ ಸಿಲುಕಿರುವ ವ್ಯಾಪಾರಸ್ಥರು ಮತ್ತೆ ಸಂಕಷ್ಟಕ್ಕೆ ಸಿಲುಕುವ ಪರಿಸ್ಥಿತಿ ಎದುರಾಗಿದೆ. ಹಾಗಾಗಿ ರಾಜ್ಯದ ಜನರಿಗೆ ಸರಿಯಾದ ರೀತಿಯಲ್ಲಿ ಮಾಹಿತಿ ನೀಡಬೇಕು ಹಾಗೂ ವ್ಯಾಪಾರಸ್ಥರಿಗೆ ಇಂತಿಷ್ಟು ಸಮಯ ವ್ಯಾಪಾರಕ್ಕೆ ಎಂದು ಮಾರ್ಗಸೂಚಿ ಹೊರಡಿಸುವ ಮೂಲಕ ಅನುಕೂಲ ಮಾಡಿಕೊಡಬೇಕು ಎಂದು ಆಗ್ರಹಿಸಿದರು.

Last Updated : Apr 23, 2021, 1:43 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.