ETV Bharat / state

ಎರಡು ಪ್ರತ್ಯೇಕ ಪ್ರಕರಣ: ಶಿವಮೊಗ್ಗದಲ್ಲಿ ಪುರುಷ , ಮಹಿಳೆ ಕೊಲೆ - thirthalli lady murder case

ಶಿವಮೊಗ್ಗ ಜಿಲ್ಲೆಯಲ್ಲಿ ಎರಡು ಪ್ರತ್ಯೇಕ ಕೊಲೆ ಪ್ರಕರಣ ಸೊರಬದಲ್ಲಿ ನಡೆದಿದ್ದು, ನಾಪತ್ತೆಯಾದವನು ಶವವಾಗಿ ಪತ್ತೆ. ಹಣದ ಆಸೆಗೆ ಕೆಲಸಗಾರನಿಂದಲೇ ಕೊಲೆಯಾದ ಮಹಿಳೆ.

shimoga-two-separate-cases-of-murder-of-a-man-and-a-woman
ಶಿವಮೊಗ್ಗ : ಎರಡು ಪ್ರತ್ಯೇಕ ಪ್ರಕರಣ ಪುರುಷ , ಮಹಿಳೆ ಕೊಲೆ
author img

By

Published : Dec 18, 2022, 10:35 PM IST

ಶಿವಮೊಗ್ಗ: ಎರಡು ಪ್ರತ್ಯೇಕ ಪ್ರಕರಣದಲ್ಲಿ ಮಹಿಳೆ ಹಾಗೂ ಯುವಕನ ಕೊಲೆ ನಡೆದಿದೆ. ಶಿವಮೊಗ್ಗ ಜಿಲ್ಲೆ ಸೊರಬ ತಾಲೂಕು ಆನವಟ್ಟಿ ಪೊಲೀಸ್ ಠಾಣಾ ವ್ಯಾಪ್ತಿಯ ತುಡಿನೂರು ಗ್ರಾಮದ ಜಮೀನಿನಲ್ಲಿ ಸಲೀಂ ಮೊಹಮ್ಮದ್(26) ಎಂಬ ಯುವಕನ ಶವ ಪತ್ತೆಯಾಗಿದೆ. ಸಲೀಂ ತಲೆ ಹಾಗೂ ದೇಹದ ಮೇಲೆ ಗಾಯದ ಗುರುತುಗಳು ಪತ್ತೆಯಾಗಿದೆ.

ಕಾಣೆಯಾದವ ಶವವಾಗಿ ಪತ್ತೆ: ಸಲೀಂ ಕಳೆದ ಮೂರು ದಿನಗಳಿಂದ ನಾಪತ್ತೆಯಾಗಿದ್ದ. ಈತ ಮನೆಗೆ ಕಳೆದ ಮೂರು ದಿನಗಳ ಹಿಂದೆ ಹೊಲಕ್ಕೆ ಹೋಗುತ್ತೇನೆ ಎಂದು ಹೇಳಿ ಹೋದವ ನಾಪತ್ತೆಯಾಗಿದ್ದನು. ಹುಡುಕಾಟ ನಡೆಸಿದ ಪೋಷಕರು, ಸಂಬಂಧಿಕರು ನಂತರ ಆನವಟ್ಟಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಭಾನುವಾರ ಆತ ಶವವಾಗಿ ಪತ್ತೆಯಾಗಿದ್ಧಾನೆ. ಯಾರೋ ಕೊಲೆ ಮಾಡಿ ಶವವನ್ನು ಅವರದೇ ಜಮೀನಿನದಲ್ಲಿ ಬಿಸಾಡಿ ಹೋಗಿದ್ದಾರೆ ಎಂಬ ಅನುಮಾನವನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.

ಹಣದ ಆಸೆಗೆ ಮಹಿಳೆ ಕೊಲೆ ಮಾಡಿ ಬಾವಿಗೆ ಬಿಸಾಡಿದವ ಅಂದರ್: ತೀರ್ಥಹಳ್ಳಿ ತಾಲೂಕು ಬಿದರಗೋಡು ಗ್ರಾಮದ ಡಾಕಮ್ಮ ಎಂಬುವರ ತೋಟದಲ್ಲಿ ಮಹಿಳೆಯ ಶವ ಪತ್ತೆಯಾಗಿದೆ. ಪಾರ್ವತಿ(45)ಎಂಬ ಮಹಿಳೆಯನ್ನು ಕೊಲೆ‌ ಮಾಡಿ ತೋಟದ ಹಾಳು ಬಾವಿಗೆ ಬಿಸಾಕಲಾಗಿತ್ತು.

ಹಿನ್ನೆಲೆ: ಪಾರ್ವತಿ ಮೂಲತಃ ಚಿತ್ರದುರ್ಗ ಜಿಲ್ಲೆ ಹೊಳಲ್ಕರೆ ತಾಲೂಕಿನ ಗ್ರಾಮದವರು. ಇವರು ಬಿದರಗೋಡು ಗ್ರಾಮದ ಡಾಕಮ್ಮ ಎಂಬುವರ ತೋಟದಲ್ಲಿ ಕೆಲಸ ಮಾಡಿ‌ಕೊಂಡಿದ್ದರು. ಶನಿವಾರ ತೋಟಕ್ಕೆ ಆರು ಜನರ ತಂಡ ಕೆಲಸಕ್ಕೆ ಬಂದಿತ್ತು.

ಸೋಮವಾರ ಈ ಭಾಗದಲ್ಲಿ ಸಂತೆ ಇರುವುದರಿಂದ ಎಲ್ಲಾರಿಗೂ ಬಟವಾಡೆ ಮಾಡಲು ಪಾರ್ವತಿ ಬಳಿ 20 ಸಾವಿರ ರೂ. ನಗದು ಇರುತ್ತದೆ. ಇದನ್ನು ಕಂಡ ಕೆಲಸದವನು ಯಾರೂ ಇಲ್ಲದ ಸಮಯದಲ್ಲಿ ಪಾರ್ವತಿಯನ್ನು ಹಾರೆಕೋಲಿನಿಂದ ಹೊಡೆದು ಕೊಂದು ಬಾವಿಗೆ ಹಾಕಿ ಸೀದಾ ಊರಿಗೆ ತೆರಳಲು ಸಿದ್ಧನಾಗಿ ಶಿವಮೊಗ್ಗಕ್ಕೆ ಬಂದು ಕಂಠ ಪೂರ್ತಿ ಕುಡಿದಿದ್ದಾನೆ.

ಇತ್ತ ಪಾರ್ವತಿ ಮನೆಯಲ್ಲಿ ಯಾರು ಕಾಣದ ವೇಳೆಯಲ್ಲಿ ಇತರೆ ಕೆಲಸಗಾರರು ಹುಡುಕಾಟ ನಡೆಸಿದಾಗ ಬಾವಿಯಲ್ಲಿ ಶವ ಪತ್ತೆಯಾಗಿದೆ. ಕೆಲಸಕ್ಕೆ ಬಂದವರನ್ನು ಗಮನಿಸಿದಾಗ ಐದು ಜನ ಇದ್ದು, ಓರ್ವ ಕಾಣೆಯಾಗಿರುತ್ತಾನೆ. ಆತ ಶಿವಮೊಗ್ಗದಲ್ಲಿರುವ ಬಗ್ಗೆ ತಿಳಿದು ಆಗುಂಬೆ ಪೊಲೀಸರು ಆತನನ್ನು ಶಿವಮೊಗ್ಗದಿಂದ ಕರೆತಂದು ವಿಚಾರಣೆ ನಡೆಸಿದಾಗ ಕೊಲೆಯ ಬಗ್ಗೆ ಬಾಯ್ಬಿಟ್ಟಿದ್ದಾನೆ. ಈ ಪ್ರಕರಣದ ತನಿಖೆ ನಡೆಯುತ್ತಿರುವುದರಿಂದ ಕೊಲೆಗಾರನ ಹೆಸರನ್ನು ಪೊಲೀಸರು ಬಹಿರಂಗ ಪಡಿಸಿಲ್ಲ.

ಇದನ್ನೂ ಓದಿ: ಮದುವೆಯಾದ 3 ತಿಂಗಳಿಗೆ ವ್ಯಕ್ತಿ ಆತ್ಯಹತ್ಯೆ; ಹೆಂಡತಿ ಕಿರುಕುಳ ಕಾರಣವೆಂದ ಪೋಷಕರು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.