ಶಿವಮೊಗ್ಗ : ಬರೋಬ್ಬರಿ 3 ಕೋಟಿ ಮೌಲ್ಯದ ಕಳುವಾದ ವಸ್ತುಗಳನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಿಪ್ರಸಾದ್ರವರು ಇಂದು ವಾರಸುದಾರರಿಗೆ ಹಸ್ತಾಂತರಿಸಿದರು.
2021ರ ಜನವರಿಯಿಂದ ನವೆಂಬರ್ ತಿಂಗಳವರೆಗೆ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಯಲ್ಲಿ ಒಟ್ಟು 518 ಸ್ವತ್ತು ಕಳವು, 6 ದರೋಡೆ, 54 ಸುಲಿಗೆ, 151 ಕನ್ನ, ಕಳವು ಪ್ರಕರಣ ದಾಖಲಾಗಿವೆ. ಅದರಲ್ಲಿ 231 ಪ್ರಕರಣಗಳನ್ನು ಪತ್ತೆ ಮಾಡಲಾಗಿದೆ.
ಅದರಲ್ಲಿ ಸುಮಾರು 6, 23,91,214 ರೂ. ಮೌಲ್ಯದ ವಸ್ತುಗಳು ಕಳವಾಗಿದ್ದವು. ಅದರಲ್ಲಿ 3,03,59,176 ರೂ. ಮೌಲ್ಯದ ವಸ್ತುಗಳನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಡಿಎಆರ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಾರಸುದಾರರಿಗೆ ವಸ್ತುಗಳನ್ನ ಮರಳಿ ಹಸ್ತಾಂತರಿಸಲಾಯಿತು.
ಪ್ರಕಣಗಳಲ್ಲಿ ಅಂದಾಜು ಮೌಲ್ಯ 1, 22,10,959 ರೂ. ಮೌಲ್ಯದ ವಸ್ತುಗಳು ಪತ್ತೆಯಾಗಿವೆ. ಇದರಲ್ಲಿ 2 ಕೆಜಿ 879 ಗ್ರಾಂ ಚಿನ್ನದ ಆಭರಣಗಳು, 14,379 ಗ್ರಾಂ ಬೆಳ್ಳಿ ಆಭರಣಗಳು, 73 ವಾಹನಗಳು, 27 ಮೊಬೈಲ್ ಫೋನ್ಗಳು, 6 ಜಾನುವಾರುಗಳು, 39 ಕ್ವಿಂಟಾಲ್ ಅಡಿಕೆ, ಎಲೆಕ್ಟ್ರಾನಿಕ್ ಹಾಗೂ ಇತರೆ ವಸ್ತುಗಳು ಸೇರಿ ಒಟ್ಟು 3,03,59 ರೂ. ಮೌಲ್ಯದ ಮಾಲನ್ನು ಪತ್ತೆ ಮಾಡಲಾಗಿದೆ.
ಜಿಲ್ಲಾ ಪೊಲೀಸ್ ಕಳವು ಪ್ರಕರಣಗಳಲ್ಲಿ ಕೊಡಲೇ ಸ್ಪಂದಿಸಿ ಹಲವು ತಂಡಗಳ ರಚನೆ ಮಾಡಿ ಕಾರ್ಯಾಚರಣೆ ನಡೆಸಿ ರಿಕವರಿ ಮಾಡಲು ಯಶಸ್ವಿಯಾಗಿದೆ. ಇತ್ತೀಚೆಗೆ ಅಡಿಕೆ ಕಳವು ಪ್ರಕರಣಗಳು ಹೆಚ್ಚಾಗಿವೆ.
ಈವರೆಗೆ ಒಟ್ಟು 928 ಪ್ರಕರಣ ದಾಖಲಾಗಿವೆ. ಕಳ್ಳತನ ಪುನರಾವರ್ತನೆ ಮಾಡಿದ ಕೆಲವು ಆರೋಪಿಗಳನ್ನು ಬಂಧಿಸಲಾಗಿದೆ. ಅದರಲ್ಲಿ ಹೊರ ರಾಜ್ಯದವರು ಇದ್ದಾರೆ. ಇನ್ನೂ ಕೆಲವು ಪ್ರಕರಣ ಪತ್ತೆಯಾಗಬೇಕಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ಇದೇ ವೇಳೆ ಕಳೆದುಕೊಂಡ ವಸ್ತುಗಳನ್ನು ಪುನಾಃ ಪಡೆದ ವಾರಸುದಾರರು ಪೊಲೀಸರಿಗೆ ಧನ್ಯವಾದ ಅರ್ಪಿಸಿದರು.
ಇದನ್ನೂ ಓದಿ: ಮೂರು ವರ್ಷದ ನಂತರ ಬೆಳಗಾವಿಯಲ್ಲಿ ಅಧಿವೇಶನ, ಡಿ.13ರಿಂದ ಶುರು