ETV Bharat / state

ಗಲಾಟೆ-ಗದ್ದಲದಲ್ಲೇ ಮುಂದುವರಿದ ಶಿವಮೊಗ್ಗ ಮಹಾನಗರ ಪಾಲಿಕೆ ಸಭೆ - ಶಿವಮೊಗ್ಗ ಮಹಾನಗರ ಪಾಳಿಕೆ ಉಪಮೇಯರ್​

ನಿನ್ನೆ ನಡೆದ ಶಿವಮೊಗ್ಗ ಮಹಾನಗರ ಪಾಲಿಕೆ ಸಭೆಯಲ್ಲಿ ಕಡತ ವಿಲೇವಾರಿ ಸಮಸ್ಯೆಗೆ ತ್ವರಿತ ಪರಿಹಾರ ಸೂಚಿಸುವುದಾಗಿ ಮೇಯರ್​ ಹಾಗೂ ಉಪಮೇಯರ್​ ತಿಳಿಸಿದ್ದಾರೆ.

ಸಭೆ
author img

By

Published : Nov 5, 2019, 3:19 AM IST

ಶಿವಮೊಗ್ಗ: ಮಹಾನಗರ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಪಕ್ಷಾತೀತವಾಗಿ ಬಹುತೇಕ ಸದಸ್ಯರು ಪಾಲಿಕೆಯಲ್ಲಿ ಕಡತಗಳ ವಿಲೇವಾರಿ ವಿಳಂಬವಾಗುತ್ತಿರುವುದರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಪಾಲಿಕೆ ಆಯುಕ್ತ ಚಿದಾನಂದ್ ಹಾಗೂ ಉಪಮೇಯರ್ ಚನ್ನಬಸಪ್ಪ, ಸಕಾಲ ವ್ಯವಸ್ಥೆಯನ್ನು ಹತ್ತು ದಿನದಲ್ಲಿ ಜಾರಿ ಮಾಡಿ ಕಡತ ವಿಲೇವಾರಿ ಸಮಸ್ಯೆಗೆ ಪರಿಹಾರ ಮಾಡುವುದಾಗಿ ಘೋಷಿಸಿದ್ದಾರೆ.

ಶಿವಮೊಗ್ಗ ಮಹಾನಗರ ಪಾಲಿಕೆ ಸಭೆ

ಸೋಮವಾರ ನಡೆದ ಮಹಾನಗರ ಪಾಲಿಕೆ ಸಭೆಯಲ್ಲಿ ಮಾತನಾಡಿದ ಪಾಲಿಕೆ ಆಯುಕ್ತ ಚಿದಾನಂದ್​, ಸಕಾಲ ಪ್ರಾರಂಭಕ್ಕೆ ಕೆಲ ತಾಂತ್ರಿಕ ಸಮಸ್ಯೆಗಳಿದ್ದು, ಅವುಗಳನ್ನು ನಿವಾರಣೆ ಮಾಡಿಕೊಂಡು ಕಾಲ ಮಿತಿಯೊಳಗೆ ಸಾರ್ವಜನಿಕರ ಅರ್ಜಿಗಳ ವಿಲೇವಾರಿಗೆ ಕ್ರಮ ಕೈಗೊಳ್ಳಲಾಗುವುದು ಎಂದರು.

ಸಭೆ ಆರಂಭದಲ್ಲೇ ಪ್ರತಿಪಕ್ಷದ ನಾಯಕ ರಮೇಶ್ ಹೆಗ್ಡೆ ಈ ಕುರಿತು ವಿಷಯ ಪ್ರಸ್ತಾಪಿಸಿ, ಪಾಲಿಕೆ ಆಡಳಿತ ನಿಷ್ಕ್ರಿಯವಾಗಿದೆ. ಸಾರ್ವಜನಿಕರ ಅರ್ಜಿಗಳ ವಿಲೇವಾರಿ ವಿಳಂಬವಾಗುತ್ತಿದೆ. ಎಲ್ಲಾ ಅಧಿಕಾರಿಗಳಲ್ಲಿ 3200 ಕಡತಗಳು ಬಾಕಿ ಇದ್ದು, ಸಾರ್ವಜನಿಕರು ಪಾಲಿಕೆಗೆ ನಿತ್ಯ ಅಲೆದಾಡುತ್ತಿದ್ದಾರೆ ಎಂದು ದೂರಿದರು. ಪೌತಿಖಾತೆ, ತೆರಿಗೆ ನಿರ್ಧಾರಣೆ, ಪರವಾನಿಗೆ ನೀಡುವುದು ಸೇರಿದಂತೆ ಯಾವುದೇ ಅರ್ಜಿಗಳು ವಿಲೇವಾರಿ ಆಗುತ್ತಿಲ್ಲ ಎಂದು ಆರೋಪಿಸಿದರು.

ಸದಸ್ಯ ನಾಗರಾಜ್ ಕಂಕಾರಿ ಮಾತನಾಡಿ, ಪಾಲಿಕೆ ಆಯುಕ್ತರು ನಗರಕ್ಕೆ ಬಂದು 1 ತಿಂಗಳಾಗಿದೆ. ಅವರು ಸಹ ಒಂದು ಅರ್ಜಿ ವಿಲೇವಾರಿ ಮಾಡಿಲ್ಲ. ಕೆಲ ಅಧಿಕಾರಿಗಳು ಕಚೇರಿ ಅವಧಿ ಬಿಟ್ಟು ಸಂಜೆ ಪಾಲಿಕೆಗೆ ಬಂದು ಕೂರುತ್ತಾರೆ. ಹೀಗಾದರೆ ಜನರ ಕೆಲಸ ಹೇಗೆ ಆಗುತ್ತದೆ ಎಂದು ಆರೋಪಿಸಿದ್ದಾರೆ

Intro:ಶಿವಮೊಗ್ಗ,
ಗಲಾಟೆ ಗದ್ದಲಗಳ ಮದ್ಯೆ ಮಹಾನಗರ ಪಾಲಿಕೆ ಮಿಟಿಂಗ್

ಮಹಾನಗರ ಪಾಲಿಕೆಯಲ್ಲಿ ಇನ್ನು
ಹತ್ತು ದಿನಗಳಲ್ಲಿ ಸಕಾಲ ಸೇವೆ
ಲಿದೆ
. ಇಂದು ನಡೆದ ಮಹಾನಗರ ಪಾಲಿಕೆ
ಸಾಮಾನ್ಯಸಭೆಯಲ್ಲಿ ಪಕ್ಷಾತೀತವಾಗಿ
ಬಹುತೇಕ ಸದಸ್ಯರು ಪಾಲಿಕೆಯಲ್ಲಿ
ಕಡತಗಳ ವಿಲೇವಾರಿ ವಿಳಂಬವಾಗುತ್ತಿರು
ವುದರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದಾಗ
ಪಾಲಿಕೆ ಆಯುಕ್ತ ಚಿದಾನಂದ್ ಹಾಗೂ
ಉಪ ಮೇಯರ್ ಚನ್ನಬಸಪ್ಪ ರವರು
ಸಕಾಲ ವ್ಯವಸ್ಥೆಯನ್ನು ಹತ್ತು ದಿನದಲ್ಲಿ ಜಾರಿ
ಮಾಡಿ ಕಡತ ವಿಲೇವಾರಿ ಸಮಸ್ಯೆಗೆ
ಅಂತಿಮ ಹಾಡುವುದಾಗಿ ಘೋಷಿಸಿದರು.
ಸಕಾಲ ಪ್ರಾರಂಭಕ್ಕೆ ಕೆಲ ತಾಂತ್ರಿಕ
ಸಮಸ್ಯೆ ಇದ್ದು ಅವುಗಳ ನಿವಾರಣೆ
ಮಾಡಿಕೊಂಡು ಕಾಲ ಮಿತಿಯೊಳಗೆ
ಸಾರ್ವಜನಿಕರ ಅರ್ಜಿಗಳ ವಿಲೇವಾರಿಗೆ
ಕ್ರಮ ಕೈಗೊಳ್ಳಲಾಗುವುದು ಎಂದರು.
ಸಭೆ ಆರಂಭದಲ್ಲೇ ವಿರೋಧ ಪಕ್ಷದ
ನಾಯಕ ರಮೇಶ್ ಹೆಗ್ಡೆ ಈ ಕುರಿತು
ವಿಷಯ ಪ್ರಸ್ತಾಪಿಸಿ, ಪಾಲಿಕೆ ಆಡಳಿತ
ನಿಷ್ಕಿಯವಾಗಿದೆ. ಸಾರ್ವಜನಿಕರ ಅರ್ಜಿಗಳ
ವಿಲೇವಾರಿ ವಿಳಂಬವಾಗುತ್ತಿದೆ. ಎಲ್ಲಾ
ಅಧಿಕಾರಿಗಳಲ್ಲಿ ೩೨೦೦ ಕಡತಗಳು ಬಾಕಿ
ಇದ್ದು, ಸಾರ್ವಜನಿಕರು ಪಾಲಿಕೆಗೆ ನಿತ್ಯ
ಅಲೆದಾಡುತ್ತಿದ್ದಾರೆ ಎಂದು ದೂರಿದರು.
ಪೌತಿಖಾತೆ, ತೆರಿಗೆ ನಿರ್ಧಾರಣೆ,
ಪರವಾನಿಗೆ ನೀಡುವುದು ಸೇರಿದಂತೆ
ಯಾವುದೇ ಅರ್ಜಿಗಳು ವಿಲೇವಾರಿ
ಆಗುತ್ತಿಲ್ಲ ಎಂದು ಆರೋಪಿಸಿದರು.
ಸದಸ್ಯ ನಾಗರಾಜ್ ಕಂಕಾರಿ
ಮಾತನಾಡಿ, ಪಾಲಿಕೆ ಆಯುಕ್ತರು ನಗರಕ್ಕೆ
ಬಂದು ೧ ತಿಂಗಳಾಗಿದೆ ಅವರು ಸಹ
ಒಂದು ಅರ್ಜಿ ವಿಲೇವಾರಿ ಮಾಡಿಲ್ಲ ಕೆಲ
ಅಧಿಕಾರಿಗಳು ಕಛೇರಿ ಅವಧಿ ಬಿಟ್ಟು ಸಂಜೆ
ಪಾಲಿಕೆಗೆ ಬಂದು ಕೂರುತ್ತಾರೆ ಹೀಗಾದರೆ
ಜನರ ಕೆಲಸ ಹೇಗೆ ಆಗುತ್ತದೆ ಎಂದರು.
ಬಹುತೇಕ ಸದಸ್ಯರು ಪಾಲಿಕೆ
ಅಧಿಕಾರಿಗಳು ಕೆಲಸ ಮಾಡುತ್ತಿಲ್ಲ ಎಂದು
ಆಕ್ರೋಷ ವ್ಯಕ್ತಪಡಿಸಿದರು. ಪ್ರತಿ ತಿಂಗಳು
ಪಾಲಿಕೆ ಸಭೆ ನಡೆಸುತ್ತಿಲ್ಲ, ಜನರ ಸಮಸ್ಯೆ
ಪರಿಹರಿಸಲು ಅಧಿಕಾರಿಗಳು ಸ್ಪಂದಿಸುತ್ತಿಲ್ಲ
ಎಂದು ಟೀಕಿಸಿದರು.
ಪಾಲಿಕೆಯಲ್ಲಿ ಟೌನ್ ಪ್ಲಾನಿಕೆ ಅಧಿಕಾರಿ
ಇಲ್ಲದೆ ಕಟ್ಟಡ ನಿರ್ಮಾಣಕ್ಕೆ ಪರವಾನಿಗೆ
ಪಡೆಯಲು ಸಾರ್ವಜನಿಕರಿಗೆ ಕಷ್ಟವಾಗಿದೆ.
ವಾಹನಗಳ ಖರೀದಿಯಾಗದೆ ಕಸ ವಿಲೇವಾರಿ
ಕೆಲಸ ಸಮರ್ಪಕವಾಗಿ ಆಗುತ್ತಿಲ್ಲ ನಗರದ
ರಸ್ತೆಗಳು ಹಾಳಾಗಿವೆ, ಬೀಡಾಡಿ ದನಗಳ
ಹಾವಳಿ ಹೆಚ್ಚಾಗಿದೆ, ಕುಡಿಯುವ ನೀರಿನ
ಸಮಸ್ಯೆಯು ಇದೆ ಎಂದು ಸದಸ್ಯರು
ದೂರಿದರು.
ಉಪಮೇಯರ್ ಚನ್ನಬಸಪ್ಪ
ಮಾತನಾಡಿ, ನೆರೆ ಬಂದಿದ್ದರಿದ ಇಡೀ
ಪಾಲಿಕೆಯ ಪರಿಹಾರ ಕಾರ್ಯಕ್ಕೆ ನಿಲ್ಲ
ಬೇಕಾಯಿತು. ಇದರಿಂದ ಕೆಲ ಕೆಲಸಗಳಿಗೆ
ತೊಂದರೆ ಆಗಿರಬಹುದು. ಪಾಲಿಕೆಯಿಂದ
ಯಾವುದೇ ನಿರ್ಲಕ್ಷ್ಯ ಆಗಿಲ್ಲ, ಹಿಂದಿನಿದಲೂ
ಇರುವ ಸಿಬ್ಬಂದಿ ಕೊರತೆಯಿಂದಾಗಿ ಸಮಸ್ಯೆ
ಆಗುತ್ತಿದೆ ಎಂದು ವಿಶ್ಲೇಷಿಸಿದರು.

ವಾರ್ಡ್ ಕಛೇರಿ:
ನಗರದ ಎಲ್ಲಾ ೩೫
ವಾರ್ಡ್ಗಳಲ್ಲೂ ಮಹಾನಗರ ಪಾಲಿಕೆಯ
ವಾರ್ಡ್ ಕಛೇರಿಗಳನ್ನು ಪ್ರಾರಂಭಿಸಲು
ಇಂದು ನಡೆದ ಸಭೆಯಲ್ಲಿ
ಚರ್ಚಿಸಲಾಯಿತು.
ಸದಸ್ಯೆ ಅನಿತಾ ರವಿಶಂಕರ್ ಈ
ಕುರಿತು ವಿಷಯ ಪ್ರಸ್ತಾಪಿಸಿ, ವಲಯವಾರು
ಪಾಲಿಕೆ ಕಛೇರಿ ಪ್ರಾರಂಭಿಸಿ ಜನರಿಗೆ
ಅನುಕೂಲ ಮಾಡಿಕೊಡುವಂತೆ
ಕೋರಿದರು.
ಇದಕ್ಕೆ ಉತ್ತರಿಸಿದ ಉಪ ಮೇಯರ್,
ನಾವು ಇನ್ನು ಒಂದು ಹೆಜ್ಜೆ ಮುಂದೆ
ಹೋಗಿ ಪ್ರತಿ ವಾರ್ಡ್ನಲ್ಲೂ ಪಾಲಿಕೆ
ವಾರ್ಡ್ ಕಛೇರಿ ಸ್ಥಾಪಿಸಲು
ನಿರ್ಧರಿಸಲಾಗಿದೆ. ಆಯಾ ವಾರ್ಡ್
ಸದಸ್ಯರು ಸ್ಥಳ ನಿಗದಿ ಮಾಡಿದಲ್ಲಿ ಮುಂದಿನ
ಕ್ರಮ ಕೈಗೊಳ್ಳಲಾಗುವುದು ಎಂದರು.
ಈ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿದ
ವಿಧಾನ ಪರಿಷತ್ ಸದಸ್ಯ ಆರ್.
ಪ್ರಸನ್ನಕುಮಾರ್, ವಾರ್ಡ್ಗಳಲ್ಲಿ ಕಛೇರಿ
ಪ್ರಾರಂಭಿಸಲು ನೀವೆ ಸ್ಥಳ ಗುರುತಿಸಿ
ನಂತರ ಸದಸ್ಯರ ಒಪ್ಪಿಗೆ ಪಡೆದು ಕಛೇರಿ
ನಿರ್ಮಿಸಿ. ಇದರಿಂದ ಆಯಾ
ವಾರ್ಡ್ನಲ್ಲೇ ಜನರಿಗೆ ಸಮಸ್ಯೆಗಳ ಕುರಿತು
ಅರ್ಜಿ ಸಲ್ಲಿಸಲು ಸಹಕಾರಿಯಾಗುವುದು
ಎಂದು ಸಲಹೆ ನೀಡಿದರು.
ಶೀಘ್ರದಲ್ಲೇ ವಾರ್ಡ್ ಕಛೇರಿ
ಮಾಡಲು ಸಭೆಯಲ್ಲಿ ಚರ್ಚಿಸಲಾಯಿತು
ಹಾಗೂ ಆಯಾ ವಾರ್ಡ್ನ
ಎಂಜಿನಿಯರ್, ಹೆಲ್ತ್ ಇನ್‌ಸ್ಪೆಕ್ಟರ್
ಸೇರಿದಂತೆ ಎಲ್ಲಾ ಅಧಿಕಾರಿಗಳು ನಿಗದಿ
ವೇಳೆಯಲ್ಲಿ ಕಛೇರಿಯಲ್ಲಿ ಇರುವಂತೆ
ನಿಯಮ ರೂಪಿಸಲು ನಿರ್ಧರಿಸಲಾಯಿತು.
ಮೇಯರ್ ಲತಾ
ಗಣೇಶ್ ಅಧ್ಯಕ್ಷತೆ ವಹಿಸಿದ್ದರು.
ಭೀಮಾನಾಯ್ಕ ಎಸ್ ಶಿವಮೊಗ್ಗBody:ಭೀಮಾನಾಯ್ಕ ಎಸ್ ಶಿವಮೊಗ್ಗConclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.