ETV Bharat / state

ಶಿವಮೊಗ್ಗದಲ್ಲಿ ಹೇಗಿದೆ ಲಾಕ್​ಡೌನ್​... ಪ್ರತ್ಯಕ್ಷ ವರದಿ

ಶಿವಮೊಗ್ಗದಲ್ಲಿ ಲಾಕ್​​ಡೌನ್ ಹಿನ್ನೆಲೆ ಪೊಲೀಸರು ಅಲರ್ಟ್​ ಆಗಿದ್ದು, ಬೆಳ್ಳಂಬೆಳಗ್ಗೆಯೇ ವಾಹನಗಳನ್ನು ಸೀಜ್ ಮಾಡುವ ಮೂಲಕ ನಿಯಮ ಮೀರಿದವರಿಗೆ ಬಿಸಿ ಮುಟ್ಟಿಸಿದ್ದಾರೆ. ನಗರದ ಒಟ್ಟಾರೆ ಲಾಕ್​​ಡೌನ್​​ ಪರಿಸ್ಥಿತಿಯ ಕುರಿತು ನಮ್ಮ ಪ್ರತಿನಿಧಿ ನೀಡಿರುವ ಪ್ರತ್ಯಕ್ಷ ವರದಿ ಇಲ್ಲಿದೆ. ​

Shimoga Lockdown update
ಶಿವಮೊಗ್ಗದಲ್ಲಿ ಹೇಗಿದೆ ಲಾಕ್ ಡೌನ್
author img

By

Published : May 10, 2021, 10:14 AM IST

ಶಿವಮೊಗ್ಗ: ಇಂದಿನಿಂದ ಲಾಕ್​​ಡೌನ್​ ಹಿನ್ನೆಲೆ ನಗರ ಪೊಲೀಸರು ಸರ್ವ ರೀತಿಯಲ್ಲಿ ಸನ್ನದ್ಧರಾಗಿದ್ದು, ನಿಯಮ ಉಲ್ಲಂಘಿಸಿ ರಸ್ತೆಗಿಳಿಯುವವರ ಮೇಲೆ ಹದ್ದಿನ ಕಣ್ಣಿಟ್ಟಿದ್ದಾರೆ.

ಸರ್ಕಾರದ ಮಾರ್ಗಸೂಚಿ ಪ್ರಕಾರ ಲಾಕ್​ಡೌನ್​ ಅವಧಿಯಲ್ಲಿ ಬೆಳಗ್ಗೆ 6 ಗಂಟೆಯಿಂದ 10 ಗಂಟೆಯವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶವಿದೆ. ಆದರೆ, ಮಾರುಕಟ್ಟೆಗಳಿಗೆ ವಾಹನದಲ್ಲಿ ಹೋಗುವಂತಿಲ್ಲ. ಆದರೂ ಕೆಲವರು ನಿಯಮ ಮೀರಿ ಓಡಾಡುತ್ತಿದ್ದಾರೆ. ಶಿವಮೊಗ್ಗದ ನಗರದ ಎ.ಎ ವೃತ್ತದಲ್ಲಿ ಸಿಇಎನ್ ಪೊಲೀಸ್ ಠಾಣೆಯ ಪಿಐ ಗುರುರಾಜ್ ಕರ್ಕಿ ನೇತೃತ್ವದಲ್ಲಿ ಪೊಲೀಸರು ತಪಾಸಣೆಯಲ್ಲಿ ತೊಡಗಿದ್ದು, ಯಾವುದೇ ಪಾಸ್ ಅಥವಾ ಸರಿಯಾದ ಕಾರಣವಿಲ್ಲದೆ ಅನಗತ್ಯವಾಗಿ ಓಡಾಡುತ್ತಿದ್ದವರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.

ಶಿವಮೊಗ್ಗದಲ್ಲಿ ಹೇಗಿದೆ ಲಾಕ್​ಡೌನ್

ಓದಿ : ಬೆಂಗಳೂರಲ್ಲಿ ಬೆಳ್ಳಂಬೆಳಗ್ಗೆ ಫೀಲ್ಡಿಗಿಳಿದ ಪೊಲೀಸರು: 10 ಗಂಟೆ ಬಳಿಕ ರಸ್ತೆಗಿಳಿದರೆ ಲಾಠಿ ರುಚಿ ಗ್ಯಾರಂಟಿ

ನಗರದಾದ್ಯಂತ ರಸ್ತೆಗಳಿಗೆ ಬ್ಯಾರಿಕೇಡ್ ಹಾಕಿ ಪೊಲೀಸರು ಕಣ್ಗಾವಲಿಟ್ಟಿದ್ದು, ಯಾರೂ ಹೊರಗಡೆ ಓಡಾಡದಂತೆ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.