ETV Bharat / state

ಶಿವಮೊಗ್ಗ ಡಿಸಿಸಿ ಬ್ಯಾಂಕ್ ಮುಖ ಮಂಟಪ, ಅತಿಥಿ ಗೃಹ ಕೊಠಡಿ ಉದ್ಘಾಟನೆ - Shimoga DCC Bank guest house inauguration

ಶಿವಮೊಗ್ಗ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್​ನ ಪ್ರಧಾನ ಕೇಚರಿಯಲ್ಲಿ ಸುಮಾರು 30 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾದ ಮುಖ ಮಂಟಪ ಮತ್ತು ಅತಿಥಿ ಗೃಹವನ್ನು ಬಸವಕೇಂದ್ರದ ಬಸವ ಮರುಳಸಿದ್ದ ಸ್ವಾಮೀಜಿ ಉದ್ಘಾಟಿಸಿದರು.

shimoga-dcc-bank-facing-pavilion-guest-house-inauguration
ಶಿವಮೊಗ್ಗ ಡಿಸಿಸಿ ಬ್ಯಾಂಕ್
author img

By

Published : Sep 18, 2020, 7:14 PM IST

Updated : Sep 18, 2020, 7:19 PM IST

ಶಿವಮೊಗ್ಗ: ಜಿಲ್ಲಾ‌ ಕೇಂದ್ರ ಸಹಕಾರ ಬ್ಯಾಂಕ್​ನ ಪ್ರಧಾನ ಕಚೇರಿಯ ಮುಖ ಮಂಟಪ ಹಾಗೂ ಅತಿಥಿ ಗೃಹ ಕೊಠಡಿಗಳನ್ನು ಬಸವಕೇಂದ್ರದ ಬಸವ ಮರುಳಸಿದ್ದ ಸ್ವಾಮೀಜಿ ಇಂದು ಉದ್ಘಾಟಿಸಿದರು.

ಶಿವಮೊಗ್ಗ ಡಿಸಿಸಿ ಬ್ಯಾಂಕ್ ಮುಖ ಮಂಟಪ, ಅತಿಥಿ ಗೃಹದ ಕೊಠಡಿ ಉದ್ಘಾಟನೆ

ನಗರದ ಬಾಲರಾಜ್ ಅರಸ್ ರಸ್ತೆಯ ಪ್ರಧಾನ ಕಚೇರಿಯ ಆವರಣದಲ್ಲಿ ಪ್ರವೇಶ ದ್ವಾರದಲ್ಲಿ ನೂತನವಾಗಿ ಮುಖಮಂಟಪ ಹಾಗೂ‌ ಇದೇ ಆವರಣದ ಅತಿಥಿ ಗೃಹದ ಕೊಠಡಿಯನ್ನು‌ ನವೀಕರಿಸಲಾಗಿದೆ. ಕಳೆದ ಐದಾರು ತಿಂಗಳಿನಿಂದ ಕಾಮಗಾರಿ ನಡೆಸಲಾಗಿತ್ತು. ಮುಖ ಮಂಟಪ ಉದ್ಘಾಟನೆಯ ನಂತರ ಕಚೇರಿ ಮೇಲ್ಭಾಗದಲ್ಲಿ ಸಭಾ ಕಾರ್ಯಕ್ರಮ ನಡೆಯಿತು.

ಡಿಸಿಸಿ ಬ್ಯಾಂಕ್ 19 ಕೋಟಿ ರೂ. ಲಾಭದಲ್ಲಿದೆ. ಸುಮಾರು 30 ಲಕ್ಷ ರೂ. ವೆಚ್ಚದಲ್ಲಿ ಮುಖ ಮಂಟಪ ನಿರ್ಮಾಣ, ಹಳೆ ಕಟ್ಟಡಕ್ಕೆ ಬಣ್ಣ ಹಾಗೂ ಮೇಲ್ಛಾವಣಿಯನ್ನು ನಿರ್ಮಿಸಲಾಗಿದೆ. ಆವರಣದಲ್ಲಿರುವ ಕಲ್ಲಿನ ಫಿರಂಗಿ, ಕಲ್ಲಿನ ಎತ್ತಿನಗಾಡಿ ಕಟ್ಟಡಕ್ಕೆ ಶೋಭೆ ತಂದಿದೆ. ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ.ಮಂಜುನಾಥ್ ಗೌಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

Last Updated : Sep 18, 2020, 7:19 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.