ETV Bharat / state

ಶರಾವತಿ ಹಿನ್ನೀರ ಪ್ರದೇಶಗಳನ್ನು ಶರಾವತಿ ಬಫರ್ ಝೋನ್ ವ್ಯಾಪ್ತಿಗೆ ತರಲು ಕೇಂದ್ರದ ಆದೇಶ - Sharavathi backwater areas now under the Sharavati buffer zone

ಕೇಂದ್ರ ಸರ್ಕಾರ ಶರಾವತಿ ಅಭಯಾರಣ್ಯ ವ್ಯಾಪ್ತಿಯ ಅಕ್ಕಪಕ್ಕದಲ್ಲಿ ಬರುವ ಪ್ರದೇಶವನ್ನು ಬಫರ್ ಝೋನ್ ಎಂದು ಘೋಷಿಸುವಂತೆ ಆದೇಶ ನೀಡಿದೆ. ಇದು ಜನರಲ್ಲಿ ಆತಂಕ ಸೃಷ್ಟಿಸಿದ್ದು, ಶಾಸಕ ಹರತಾಳು ಹಾಲಪ್ಪ ಕೂಡಾ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.

sharavathi-backwater-areas-now-under-the-sharavati-buffer-zone
ಶರಾವತಿ ಹಿನ್ನೀರಿನ ಪ್ರದೇಶಗಳನ್ನು ಶರಾವತಿ ಬಫರ್ ಝೋನ್ ವ್ಯಾಪ್ತಿಗೆ ತರಲು ಕೇಂದ್ರದ ಆದೇಶ
author img

By

Published : Jun 13, 2022, 6:58 PM IST

ಶಿವಮೊಗ್ಗ: ಜಿಲ್ಲೆಯ ಸಾಗರ ತಾಲೂಕಿನ ಶರಾವತಿ ಹಿನ್ನೀರಿನಾಚೆಗಿರುವ ಕರೂರು ಹಾಗೂ ಬಾರಂಗಿ ಹೋಬಳಿಯ ಜನರಿಗೆ ಯಾವಾಗಲೂ ಒಂದಿಲ್ಲೊಂದು ಸಮಸ್ಯೆಗಳು ಕಾಡುತ್ತಲೇ ಇರುತ್ತವೆ. ಹಿನ್ನೀರಿನ ಆಚೆ ಇರುವ ಕುಗ್ರಾಮಗಳು ಸಂಜೆಯಾಗುತ್ತಿದ್ದಂತೆ ಹೊರಜಗತ್ತಿನೊಂದಿಗೆ ಸಂಪರ್ಕವನ್ನೇ ಕಳೆದುಕೊಳ್ಳುತ್ತವೆ. ರಾತ್ರಿ ವೇಳೆ ಆರೋಗ್ಯ ಸಮಸ್ಯೆಯಾದರೆ ಇಲ್ಲಿನ ಜನರನ್ನು ದೇವರೇ ಕಾಪಾಡಬೇಕು. ಕನಿಷ್ಠ ಮೂಲ ಸೌಕರ್ಯಗಳಿಂದಲೂ ವಂಚಿತರಾಗಿ ಬದುಕುತ್ತಿರುವ ಈ ಜನರಿಗೆ ಇದೀಗ ಸಿಂಗಳೀಕ ಅಭಯಾರಣ್ಯದ ಬಫರ್ ಝೋನ್ ಘೋಷಣೆ ಮಾಡಿರುವುದು ನುಂಗಲಾರದ ತುತ್ತಾಗಿ ಪರಿಣಮಿಸಿದೆ.

ಶರಾವತಿ ಅಭಯಾರಣ್ಯದ ಘೋಷಣೆಯನ್ನು ಈ ಹಿಂದೆಯೇ ಮಾಡಲಾಗಿದ್ದು, ಶರಾವತಿ ಅಭಯಾರಣ್ಯದ ವ್ಯಾಪ್ತಿಯಲ್ಲಿ ಸಿಂಗಳೀಕಗಳ (ಲಯನ್ ಟೆಯಲ್ಡ್ ಮಕಾಕ್) ಸಂಖ್ಯೆ ಹೆಚ್ಚಾಗಿದ್ದು ಅಭಯಾರಣ್ಯವನ್ನು ಸಿಂಗಳೀಕ ಅಭಯಾರಣ್ಯ ಎಂದು ಘೋಷಣೆ ಮಾಡಲಾಗಿದೆ. ದೇಶದ ಮೊದಲ ಸಿಂಗಳೀಕ ಅಭಯಾರಣ್ಯ ಇದಾಗಿದೆ. ಶರಾವತಿ ಅಭಯಾರಣ್ಯದ ವ್ಯಾಪ್ತಿಯೇ ಸಿಂಗಳೀಕ ಅಭಯಾರಣ್ಯದ ವ್ಯಾಪ್ತಿಯಾಗಿದ್ದರಿಂದ ಇದುವರೆಗೆ ಜನರಿಗೆ ಅಷ್ಟೊಂದು ಸಮಸ್ಯೆಯಾಗಿರಲಿಲ್ಲ. ಆದರೆ ಇದೀಗ ಕೇಂದ್ರ ಸರ್ಕಾರ ಅಭಯಾರಣ್ಯ ವ್ಯಾಪ್ತಿಯ ಅಕ್ಕಪಕ್ಕದಲ್ಲಿ ಬರುವ ಪ್ರದೇಶವನ್ನು ಬಫರ್ ಝೋನ್ ಎಂದು ಘೋಷಿಸುವಂತೆ ಆದೇಶ ನೀಡಿದೆ.

ಬಫರ್ ಝೋನ್‌ಗೆ ಜನರ ವಿರೋಧ: ಸರ್ಕಾರದ ಆದೇಶದಂತೆ ಅಭಯಾರಣ್ಯದ ಗಡಿಯಿಂದ 10 ಕಿಲೋಮೀಟರ್ ವ್ಯಾಪ್ತಿಯ ಪ್ರದೇಶವನ್ನು ಪರಿಸರಸೂಕ್ಷ್ಮ ಪ್ರದೇಶ (ಇಕೋ ಸೆನ್ಸಿಟಿವ್ ಝೋನ್) ಎಂದು ಘೋಷಣೆ ಮಾಡಿ ಅದನ್ನು ಸಿಂಗಳೀಕ ಅಭಯಾರಣ್ಯದ ಬಫರ್ ಝೋನ್ ಎಂದು ಘೊಷಿಸಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಒಂದು ವೇಳೆ ಬಫರ್ ಝೋನ್ ಗುರುತು ಮಾಡಿದರೆ ಶರಾವತಿ ಹಿನ್ನೀರು ಆಚೆಗಿರುವ 92 ಗ್ರಾಮಗಳು ಈ ವ್ಯಾಪ್ತಿಯ ಒಳಗೆ ಸೇರುತ್ತವೆ. ಆಗ ಅಲ್ಲಿನ ರೈತರು ತಮ್ಮ ಜಮೀನನ್ನು ಅಭಿವೃದ್ಧಿಪಡಿಸಲು ಅರಣ್ಯ ಇಲಾಖೆ ಅನುಮತಿ ಪಡೆಯಬೇಕಾದ ಅನಿವಾರ್ಯತೆ ಎದುರಾಗಲಿದೆ. ಜೊತೆಗೆ ರಸ್ತೆ ನಿರ್ಮಿಸಿಕೊಳ್ಳುವುದೂ ಕಷ್ಟಕರವಾಗಲಿದೆ. ಇದೇ ಕಾರಣಕ್ಕೆ ಜನ ಬಫರ್ ಝೋನ್ ವಿರೋಧಿಸುತ್ತಿದ್ದಾರೆ.

ಇದನ್ನೂ ಓದಿ :ಆಡು ಮುಟ್ಟದ ಸೊಪ್ಪಿಲ್ಲ, ಕಾಂಗ್ರೆಸ್​ ಮಾಡದ ಹಗರಣವಿಲ್ಲ: ಸಿ.ಟಿ.ರವಿ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.