ಶಿವಮೊಗ್ಗ : ಸ್ಥಳೀಯ ಸರ್ಕಾರಗಳೆಂದೆ ಕರೆಯಲ್ಪಡುವ ಗ್ರಾಮ ಪಂಚಾಯತ್ ಚುನಾವಣೆಗೆ ಭರ್ಜರಿ ತಯಾರಿ ನಡೆಯುತ್ತಿದೆ. ಜಿಲ್ಲೆಯಲ್ಲಿ ಡಿ. 27ರಂದು ನಡೆಯುವ ಎರಡನೇ ಹಂತದ ಚುನಾವಣೆಗೆ 4,609 ಅಭ್ಯರ್ಥಿಗಳು ಅಂತಿಮ ಕಣದಲ್ಲಿದ್ದಾರೆ.
ಜಿಲ್ಲೆಯ ಸಾಗರ ಉಪ ವಿಭಾಗಗಳಾದ ಸಾಗರ, ಹೊಸನಗೆ ಹಾಗೂ ಸೊರಬ ಹಾಗೂ ಶಿಕಾರಿಪುರ ತಾಲೂಕಿನಲ್ಲಿ ಎರಡನೇ ಹಂತದ ಚುನಾವಣೆ ನಡೆಯಲಿದೆ. ಎರಡನೇ ಹಂತದ ಚುನಾವಣೆಯಲ್ಲಿ 131 ಗ್ರಾಪಂಗಳಿಗೆ ಚುನಾವಣೆ ನಡೆಯಲಿದೆ.
131 ಗ್ರಾಪಂಗಳ 1,397 ಸ್ಥಾನಗಳಿಗೆ ಚುನಾವಣೆ ನಡೆಯಬೇಕಿದೆ. ಇದರಲ್ಲಿ ಎರಡು ಕ್ಷೇತ್ರಗಳಿಗೆ ನಾಮಪತ್ರ ಸಲ್ಲಿಕೆ ಮಾಡಿಯೇ ಇಲ್ಲ. ಸದ್ಯ 1,397 ಕ್ಷೇತ್ರಗಳಿಗೆ 4,609 ಅಭ್ಯರ್ಥಿಗಳು ಸ್ಪರ್ಧೆ ನಡೆಸುತ್ತಿದ್ದಾರೆ.
ನಾಮಪತ್ರ ಪರಿಶೀಲನೆ : ಚುನಾವಣೆಗೆ ಅಭ್ಯರ್ಥಿಗಳು ಸಲ್ಲಿಸಿರುವ ನಾಮಪತ್ರ ಪರಿಶೀಲನೆ ನಡೆಸಿದ್ದು, ಇದರಲ್ಲಿ ಒಟ್ಟು 4,893 ನಾಮಪತ್ರ ಸ್ವೀಕೃತವಾಗಿದ್ರೆ, 280 ನಾಮಪತ್ರ ತಿರಸ್ಕೃತವಾಗಿವೆ. ಸಾಗರ ತಾಲೂಕಿನ ಗ್ರಾಮ ಪಂಚಾಯತ್‌ನಿಂದ 1,236 ಅಭ್ಯರ್ಥಿಗಳು, ಶಿಕಾರಿಪುರದಿಂದ 1,454 ಅಭ್ಯರ್ಥಿಗಳು, ಸೊರಬ- 965 ಹಾಗೂ ಶಿಕಾರಿಪುರದಿಂದ 954 ನಾಮಪತ್ರ ಸ್ವೀಕೃತವಾಗಿವೆ.
ಓದಿ: ಉಜಿರೆ ಬಾಲಕ ಕಿಡ್ನಾಪ್ ಪ್ರಕರಣ : ಆರೋಪಿಗಳು ಅಂದರ್
ಈ ಅಭ್ಯರ್ಥಿಗಳಿಗೆ ನಾಳೆ ಚಿಹ್ನೆ ಲಭ್ಯವಾಗಲಿದ್ದು, ಅಭ್ಯರ್ಥಿಗಳು ಭರ್ಜರಿಯಾಗಿ ಪ್ರಚಾರ ನಡೆಸುತ್ತಿದ್ದಾರೆ. ದೆಹಲಿ ರಾಜಕೀಯಕ್ಕಿಂತ ಹಳ್ಳಿ ರಾಜಕೀಯ ಕುತೂಹಲಕಾರಿಯಾಗಿದೆ.