ಶಿವಮೊಗ್ಗ: ವಿನಾಯಕ್ ದಾಮೋದರ್ ಸಾವರ್ಕರ್ ಅವರು 1944ರಲ್ಲಿ ಶಿವಮೊಗ್ಗಕ್ಕೆ ಆಗಮಿಸಿದ ಹಿನ್ನೆಲೆ ಸಾವರ್ಕರ್ ಸಾಮ್ರಾಜ್ಯ ಕಾರ್ಯಕ್ರಮವನ್ನು ನಗರದಲ್ಲಿ ಆಯೋಜನೆ ಮಾಡಲಾಗಿದೆ. ನಗರದ ಸೈನ್ಸ್ ಮೈದಾನದಲ್ಲಿ ಸಂಜೆ ನಡೆಯಲಿರುವ ಸಾವರ್ಕರ್ ಸಾಮ್ರಾಜ್ಯ ಕಾರ್ಯಕ್ರಮಕ್ಕೆ ಸಾವರ್ಕರ್ ಅವರ ಮೊಮ್ಮಗ ಸಾತ್ಯಕಿ ಸಾವರ್ಕರ್ ಭಾಗವಹಿಸಲಿದ್ದಾರೆ.
ಸಾವರ್ಕರ್ ಅವರು ಶಿವಮೊಗ್ಗಕ್ಕೆ ಆಗಮಿಸಿದ ಸವಿನೆನಪಿಗಾಗಿ ಶ್ರೀಗಂಧ ಸಂಸ್ಥೆ ಹಾಗೂ ಸಾಮಗಾನ ಸಂಸ್ಥೆಯು ಈ ಕಾರ್ಯಕ್ರಮವನ್ನು ಆಯೋಜನೆ ಮಾಡಿದೆ. ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಶ್ರೀಗಂಧ ಸಂಸ್ಥೆಯ ಅಧ್ಯಕ್ಷರಾಗಿದ್ದು, ಸಾಮಗಾನ ಸಂಸ್ಥೆಗೆ ಈಶ್ವರಪ್ಪ ಪುತ್ರ ಕಾಂತೇಶ್ ಗೌರವಾಧ್ಯಕ್ಷರಾಗಿದ್ದಾರೆ.
ಕಾರ್ಯಕ್ರಮದಲ್ಲಿ ಸಾವರ್ಕರ್ ಮೊಮ್ಮಗ ಭಾಗಿ : ಸಾವರ್ಕರ್ ಸಾಮ್ರಾಜ್ಯ ಕಾರ್ಯಕ್ರಮಕ್ಕೆ ವಿಶೇಷ ಅಥಿತಿಯಾಗಿ ಸಾವರ್ಕರ್ ಮೊಮ್ಮಗ ಸಾತ್ಯಕಿ ಸಾವರ್ಕರ್ ಭಾಗವಹಿಸಲಿದ್ದು, ಈಗಾಗಲೇ ಶಿವಮೊಗ್ಗಕ್ಕೆ ಆಗಮಿಸಿದ್ದಾರೆ. ನಗರಕ್ಕೆ ಆಗಮಿಸಿದ ಇವರನ್ನು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಹಾಗೂ ಕೆ.ಈ. ಕಾಂತೇಶ್ ಬರಮಾಡಿಕೊಂಡಿದ್ದಾರೆ. ಕಾರ್ಯಕ್ರಮಕ್ಕೂ ಮುನ್ನ ನಗರದ ಅಶೋಕ್ ವೃತ್ತದಿಂದ ಸೈನ್ಸ್ ಮೈದಾನದವರೆಗೆ, ಆಟೋ, ಕಾರು, ಬೈಕ್ ರ್ಯಾಲಿ ನಡೆಯಲಿದೆ.
ಸಾವರ್ಕರ್ ಹಿಂದುತ್ವದ ರಾಜಕೀಯ ಮಾಡಿದ್ದರು : ಹಿಂದೂ ಮಹಾಸಭಾದ ಮೂಲಕ ಸಾವರ್ಕರ್ ಅವರು ಹಿಂದುತ್ವದ ರಾಜಕೀಯ ಮಾಡಿದ್ದರು. ಹಿಂದೂ, ಹಿಂದಿ, ಹಿಂದೂಸ್ಥಾನ ಎಂದು ಅವರು ಘೋಷಣೆ ಮಾಡಿದ್ದರು. ಒಂದೇ ರಾಷ್ಟ್ರ ಅದು ಹಿಂದೂಸ್ಥಾನ, ಒಂದೇ ಭಾಷೆ ಅದು ರಾಷ್ಟ್ರೀಯ ಭಾಷೆ ಹಿಂದಿ, ಒಂದೇ ಸಂಸ್ಕೃತಿ ಇರಬೇಕು ಅದು ಹಿಂದುತ್ವ ಎಂಬುದು ಅವರ ಗುರಿಯಾಗಿತ್ತು. ಇದಕ್ಕಾಗಿ ಅವರು ತುಂಬಾ ಪ್ರಯತ್ನ ಮಾಡಿದರು, ಆದರೆ ಸಫಲರಾಗಲಿಲ್ಲ ಎಂದರು. ಆದರೆ ಪಾಕಿಸ್ತಾನದ ನಿರ್ಮಾಣ ಆಯ್ತು ಅಷ್ಟೇ. ಈಗ ಒಳ್ಳೆ ಸಮಯ ಬಂದಿದೆ. ಈಗ ಹಿಂದೂಗಳು ಜಾಗೃತರಾಗಿದ್ದಾರೆ ಎಂದು ಹೇಳಿದರು.
ಇದನ್ನೂ ಓದಿ : 'ರಾಮಮಂದಿರ ಸ್ಫೋಟಿಸುವ PFI ಸಂಚಿನಿಂದ ರಾಷ್ಟ್ರಭಕ್ತ ಹಿಂದೂಗಳಿಗೆ ಆಘಾತ'