ಶಿವಮೊಗ್ಗ : ಕೋವಿಡ್ ಶವ ಸಂಸ್ಕಾರಕ್ಕೆ ಆಯಾ ಜಾತಿ, ಧರ್ಮಕ್ಕೆ ಅನುಗುಣವಾಗಿ ವಿಧಿ- ವಿಧಾನ ಅನುಸರಿಸಿ ನಡೆಸಲು ಸರ್ಕಾರ ಅವಕಾಶ ಮಾಡಬೇಕಿದೆ ಎಂದು ಸಾಗರದಲ್ಲಿ ಸಾಗರ ಜನಹಿತ ವೇದಿಕೆ ಆಗ್ರಹಿಸಿ ಮನವಿ ಸಲ್ಲಿಸಿದೆ.
ರಾಜ್ಯ ಸರ್ಕಾರ ಶವ ಸಂಸ್ಕಾರ ಸಂದರ್ಭದಲ್ಲಿ ಐದು ಜನರ ಹಾಜರಾತಿ ನಿಯಮವನ್ನು ಪರಿಷ್ಕರಿಸಬೇಕು ಮತ್ತು ಆಯಾ ಜಾತಿ, ಧರ್ಮಕ್ಕೆ ಅನುಸಾರವಾಗಿ ಅಂತಿಮ ವಿಧಿ-ವಿಧಾನಗಳನ್ನು ಅನುಸರಿಸಲು ರಾಜ್ಯ ಸರ್ಕಾರ ಪರವಾನಿಗೆ ನೀಡಬೇಕೆಂದು ಉಪವಿಭಾಗಾಧಿಕಾರಿ ಕಚೇರಿ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗಿದೆ.
ಈ ಸಂಧರ್ಭದಲ್ಲಿ ವೇದಿಕೆಯ ಮಾ.ಸ ನಂಜುಂಡಸ್ವಾಮಿ, ವೀರಶೈವ ಸಮಾಜದ ಅಧ್ಯಕ್ಷ ಸಿದ್ಧಲಿಂಗೇಶ್ವರ್, ಶೇಖರಪ್ಪ, ಶ್ರೀಧರ್, ಹು.ಭಾ ಅಶೋಕ್, ಶರಾವತಿ ಸಿ. ರಾವ್, ಅಳ್ವಾಸ್ ಘಟಕದ ಅಧ್ಯಕ್ಷೆ ಸುಗಂಧಿ ನಾಯ್ಡು, ನವೀನ್ ಜೋಯ್ಸ್, ಕ್ರಿಶ್ಚಿಯನ್ ಸಮಾಜದ ಫ್ರಾನ್ಸಿಸ್ ಗೋಮ್ಸ್, ಮುಸ್ಲಿಂ ಸಮಾಜದ ಮಹಮ್ಮದ್ ಖಾಸಿಂ, ಟಿಪ್ಪು, ಸಹರಾ ಸಂಘದ ಅಧ್ಯಕ್ಷ ಶಂಶುದ್ಧೀನ್, ಜೀವನ್ ಸೌಹಾರ್ದ ಸಂಸ್ಥೆಯ ಅಧ್ಯಕ್ಷ ಮಹಮ್ಮದ್ ಇಲಿಯಾಜ್ ಇನ್ನಿತರರು ಹಾಜರಿದ್ದರು.