ETV Bharat / sports

ಚಾಂಪಿಯನ್ಸ್​ ಟ್ರೋಫಿಗೆ ಹೊಸ ಟ್ವಿಸ್ಟ್​: ಪಾಕ್​ ಹಿಂದೆ ಸರಿದರೆ ಭಾರತದ ಪಂದ್ಯಗಳು ಸ್ಥಳಾಂತರ?

ಚಾಂಪಿಯನ್ಸ್​ ಟ್ರೋಫಿಯಿಂದ ಪಾಕಿಸ್ತಾನ ಹಿಂದೆ ಸರಿದರೆ ಭಾರತದ ಪಂದ್ಯಗಳು ಸ್ಥಳಾಂತರಗೊಳ್ಳಲಿದೆ ಎಂದು ವರದಿಯಾಗಿದೆ.

Champions Trophy 2025
ಚಾಂಪಿಯನ್ಸ್​ ಟ್ರೋಫಿ-2025 (Getty Images)
author img

By ETV Bharat Sports Team

Published : 2 hours ago

Champions Trophy 2025: ಮುಂದಿನ ವರ್ಷ ನಡೆಯಲಿರುವ ಐಸಿಸಿ ಚಾಂಪಿಯನ್ಸ್​ ಟ್ರೋಫಿ (ICC Champions Trophy)ಗೆ ಟೀಂ ಇಂಡಿಯಾ ಪಾಕಿಸ್ತಾನಕ್ಕೆ ಹೋಗಲ್ಲ ಎಂದು ಈಗಾಗಲೇ ಬಿಸಿಸಿಐ (BCCI) ಸ್ಪಷ್ಟಪಡಿಸಿದೆ. ಇದರ ಬೆನ್ನಲ್ಲೇ ಪಾಕಿಸ್ತಾನವೂ ಕೂಡ ಟ್ರೋಫಿಯಿಂದ ಹಿಂದೆ ಸರಿಯಲು ಚಿಂತಿಸಿದೆ.

ಹೈಬ್ರಿಡ್ ಮಾದರಿಯಲ್ಲಿ ಟೂರ್ನಿ ನಡೆಸುವ ಉದ್ದೇಶವಿಲ್ಲ ಎಂದು ಹೇಳಿರುವ ಪಾಕ್​, ಭಾರತ ತಂಡ ಟೂರ್ನಿಗಾಗಿ ಪಾಕಿಸ್ತಾನ ಬರಲೇಬೇಕು ಎಂದು ಪಟ್ಟು ಹಿಡಿದಿದೆ. ಇದಲ್ಲದೆ, ಭಾರತ ಐಸಿಸಿ(ICC)ಗೆ ಪತ್ರ ಬರೆದು ಪಾಕಿಸ್ತಾನಕ್ಕೆ ಹೋಗದಿರಲು ಕಾರಣಗಳನ್ನು ಲಿಖಿತ ರೂಪದಲ್ಲಿ ತಿಳಿಸಿದೆ. ಒಂದು ವೇಳೆ ಪಾಕ್​ ಹೈಬ್ರಿಡ್ ಮಾದರಿ ಒಪ್ಪಿಕೊಂಡರೆ ಭಾರತ ಆಡುವ ಪಂದ್ಯಗಳಿಗೆ ಶ್ರೀಲಂಕಾ, ದುಬೈ ಅಥವಾ ದಕ್ಷಿಣ ಆಫ್ರಿಕಾ ಈ ಮೂರರಲ್ಲಿ ಒಂದನ್ನು ಆಯ್ಕೆ ಮಾಡುವ ಸಾಧ್ಯತೆ ಇದೆ.

ಭಾರತದಲ್ಲಿ ಚಾಂಪಿಯನ್ಸ್​ ಟ್ರೋಫಿ?: ಪಾಕಿಸ್ತಾನ ಈಗಾಗಲೇ ಹೈಬ್ರಿಡ್ ಮಾದರಿ ಪ್ರಸ್ತಾವನೆ ತಿರಸ್ಕರಿಸಿದೆ. ಅಗತ್ಯ ಬಿದ್ದರೆ ಟೂರ್ನಿಯಿಂದಲೇ ಹಿಂದೆ ಸರಿಯಲಿದೆ ಎಂದೂ ಹೇಳಲಾಗುತ್ತಿದೆ. ಒಂದು ವೇಳೆ ಪಾಕಿಸ್ತಾನ ಈ ಧೋರಣೆ ಮುಂದುವರಿಸಿದರೆ, ಬಿಸಿಸಿಐ ಟೂರ್ನಿಯನ್ನು ಕೈವಶ ಮಾಡಿಕೊಳ್ಳುವ ಸಾಧ್ಯತೆ ಇದೆ. 2025ರ ಚಾಂಪಿಯನ್ಸ್ ಟ್ರೋಫಿಯನ್ನು ಭಾರತದಲ್ಲಿ ನಡೆಸುವ ಕುರಿತು ಬಿಸಿಸಿಐ ವಲಯಗಳಲ್ಲಿ ಚರ್ಚೆಗಳು ನಡೆದಿವೆ ಎಂದು ವರದಿಯಾಗಿದೆ. ಆದರೆ ಈ ಚರ್ಚೆಗಳು ಇನ್ನೂ ಪ್ರಾಥಮಿಕ ಹಂತದಲ್ಲಿದ್ದು ಯಾವುದನ್ನೂ ಅಂತಿಮಗೊಳಿಸಿಲ್ಲ ಎಂದು ತಿಳಿದು ಬಂದಿದೆ.

ಪಾಕಿಸ್ತಾನ ಟೂರ್ನಿಯಿಂದ ಹೊರನಡೆದರೆ ಐಸಿಸಿಗೆ ಭಾರೀ ನಷ್ಟವಾಗಲಿದೆ. ಟೂರ್ನಿಯಲ್ಲಿ ಹೈವೋಲ್ಟೇಜ್ ಭಾರತ-ಪಾಕ್ ಪಂದ್ಯ ನೋಡಲು ಸಾಧ್ಯವಾಗುವುದಿಲ್ಲ. ಇಡೀ ಟೂರ್ನಿಯಲ್ಲಿ ಉಭಯ ತಂಡಗಳ ಪಂದ್ಯ ಹೆಚ್ಚಿನ ವೀಕ್ಷಣೆ ಪಡೆದುಕೊಳ್ಳುತ್ತಿತ್ತು. ಆದರೆ ಪಾಕ್​ ಹಿಂದೆ ಸರಿದರೆ ಪ್ರಸಾರಕರಿಗೆ ಐಸಿಸಿ ದೊಡ್ಡ ಪ್ರಮಾಣದ ಪರಿಹಾರ ನೀಡಬೇಕಾಗುತ್ತದೆ.

ಚಾಂಪಿಯನ್ಸ್​ ಟ್ರೋಫಿ ಆತಿಥ್ಯದ ಗೊಂದಲಗಳ ನಡುವೆಯೇ ನವೆಂಬರ್ 16ರಂದು ಪಾಕಿಸ್ತಾನದಲ್ಲಿ ಚಾಂಪಿಯನ್ಸ್ ಟ್ರೋಫಿಯ ಪ್ರವಾಸ ನಡೆಯಲಿದೆ ಎಂದು ಪಿಸಿಬಿ ಹೇಳಿದೆ. ಇಸ್ಲಾಮಾಬಾದ್‌ನಿಂದ ಸ್ಕರ್ಡು ಮೂಲಕ ಮುರ್ರೆ, ಹುಂಜಾ ಮತ್ತು ಮುಜಫರಾಬಾದ್‌ಗೆ ತೆರಳಲಿದೆ. ಈ ಕುರಿತು ಐಸಿಸಿ ಪ್ರೋಮೋ ಬಿಡುಗಡೆ ಮಾಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಇದನ್ನು ಗಮನಿಸಿದರೆ ಪಾಕಿಸ್ತಾನದಲ್ಲಿ ಪಂದ್ಯಾವಳಿಗಳು ನಡೆಯುವ ಲಕ್ಷಣಗಳು ಗೋಚರಿಸುತ್ತಿವೆ.

ಇದನ್ನೂ ಓದಿ: IPL​ ಮೆಗಾ ಹರಾಜಿನಲ್ಲಿ 6 ಪ್ರಮುಖ ಬೌಲರ್‌ಗಳು: ಈ ಇಬ್ಬರ ಮೇಲೆ RCB ಕಣ್ಣು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.