ಶಿವಮೊಗ್ಗ : ವಿಜಯದಶಮಿ ಅಂಗವಾಗಿ ಇಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ (RSS) ವತಿಯಿಂದ ಪಥ ಸಂಚಲನ ನಡೆಯಿತು.
ನಗರದ ಪ್ರಮುಖ ರಸ್ತೆಗಳಲ್ಲಿ ಆರ್ಎಸ್ಎಸ್ ಕಾರ್ಯಕರ್ತರ ಪಥಸಂಚಲನವು ಸೈನ್ಸ್ ಮೈದಾನದಿಂದ ಆರಂಭವಾಗಿ ಬಿ ಹೆಚ್ ರಸ್ತೆ, ಗಾಂಧಿ ಬಜಾರ್ ಸೇರಿ ವಿವಿಧೆಡೆ ಸಾಗಿತು. ಈ ವೇಳೆ ಪಥಸಂಚಲನ ಸಾಗುವ ಮಾರ್ಗದುದ್ದಕ್ಕೂ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.
ಪಥಸಂಚಲನದಲ್ಲಿ ಸಂಸದ ಬಿ ವೈ ರಾಘವೇಂದ್ರ, ಹಿರಿಯ ಸ್ವಯಂಸೇವಕ ಭಾಮಾ ಶ್ರೀಕಂಠ, ಗಿರೀಶ್ ಕಾರಂತ್, ಮುಖ್ಯ ಶಿಕ್ಷಕ ಪಣೀಶ್ ಸೇರಿದಂತೆ ಹಲವು ಬಿಜೆಪಿ ಮುಖಂಡರು, ವಿವಿಧ ಸಂಘಟನೆಗಳ ಪದಾಧಿಕಾರಿಗಳು ಘಣವೇಷ ತೊಟ್ಟು ಪಾಲ್ಗೊಂಡಿದ್ದರು.