ಶಿವಮೊಗ್ಗ: ನಗರದಲ್ಲಿ ನಿನ್ನೆ ಉಂಟಾದ ಹಿಜಾಬ್- ಕೇಸರಿ ಶಾಲು ವಿವಾದ- ಪ್ರಕ್ಷುಬ್ದ ಪರಿಸ್ಥಿತಿಯಿಂದಾಗಿ ಇಂದು ನಗರದಲ್ಲಿ ಪೊಲೀಸ್ ಇಲಾಖೆ ಪಥಸಂಚಲನ ನಡೆಸಿದೆ.
ನಗರದ ಸೈನ್ಸ್ ಮೈದಾನದಿಂದ ಪ್ರಾರಂಭವಾದ ಪಥಸಂಚಲನ ಕರ್ನಾಟಕ ಸಂಘ, ಎಎ ಸರ್ಕಲ್, ಬಿ. ಹೆಚ್ ರಸ್ತೆ, ಅಶೋಕ ಸರ್ಕಲ್ ಮೂಲಕ ಡಿಎಆರ್ ಮೈದಾನ ತಲುಪಲಾಯಿತು. ಪಥಸಚಲನದಲ್ಲಿ ಭಾಗಿಯಾಗಿ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮೀಪ್ರಸಾದ್ ಅವರು, ಶಿವಮೊಗ್ಗದಲ್ಲಿ ಯಾವುದೇ ಆತಂಕವಿಲ್ಲದೇ ದಿನಚರಿ ನಡೆಯುತ್ತಿದೆ. ಅಂಗಡಿ ಮುಂಗಟ್ಟು ತೆರೆದು ವ್ಯಾಪಾರ ನಡೆಸಬಹುದು. ವರ್ತಕರು ವ್ಯಾಪಾರ ನಡೆಸಬಹುದು ಎಂದರು.
ಯುವಕರು ಗುಂಪು ಗೂಡುವುದನ್ನು ತಡೆಯಲಾಗಿದೆ. ಯುವಕರು ಹೆಚ್ಚಾಗಿ ಸೇರುವ ಬೀಡ ಅಂಗಡಿ, ಟೀ ಶಾಪ್ ಗಳನ್ನು ಮುಚ್ಚಿಸಲಾಗಿದೆ. ನಗರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿದೆ. ಇದಕ್ಕಾಗಿ ಹೆಚ್ಚುವರಿ ಸಿಬ್ಬಂದಿ ನಿಯೋಜಿಸಲಾಗಿದೆ. 150 ಜನ ಸಿಬ್ಭಂದಿ, 4 ಜನ ಪೊಲೀಸ್ ಅಧಿಕಾರಿಗಳನ್ನು ನಿಯೋಜಿಸಲಾಗಿದೆ ಎಂದು ತಿಳಿಸಿದರು.
ಎನ್ ಎಸ್ ಯು ಐ ಸಂಘಟನೆ ವಿರುದ್ದ ಕ್ರಮ: ಇಂದು ಬೆಳಗ್ಗೆ ಎನ್.ಎಸ್.ಯು.ಐ ವಿದ್ಯಾರ್ಥಿಗಳು ಸರ್ಕಾರಿ ಪದವಿ ಕಾಲೇಜಿನಲ್ಲಿ ರಾಷ್ಟ್ರಧ್ವಜ ಹಾರಿಸಿದ್ದಾರೆ. 144 ಸೆಕ್ಷನ್ ಜಾರಿ ಇದ್ದರೂ, ಕಾಲೇಜು ಆವರಣದಲ್ಲಿ ಸೇರಿ ರಾಷ್ಟ್ರಧ್ವಜ ಹಾರಿಸಿದ್ದಾರೆ. ಕಾನೂನು ಉಲ್ಲಂಘಿಸಿದ್ದಕ್ಕೆ ಕ್ರಮ ತೆಗೆದುಕೊಳ್ಳಲು ಸೂಚಿಸಲಾಗಿದೆ ಎಂದರು.
ಈಗಾಗಲೇ ಎನ್.ಎಸ್.ಯು.ಐ. ವಿದ್ಯಾರ್ಥಿಗಳನ್ನು ಠಾಣೆಗೆ ಕರೆಸಲಾಗಿದೆ. ಜಿಲ್ಲಾದ್ಯಂತ ಬಿಗಿ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿದೆ. ಈಗಾಗಲೇ ನಿನ್ನೆ ಗಲಭೆ ಸಂಬಂಧ ಐವರನ್ನು ಬಂಧಿಸಲಾಗಿದೆ. ಬಂಧಿಸಿ ಕರೆದೊಯ್ಯುವ ವೇಳೆ, ಕೆಲವು ವಿದ್ಯಾರ್ಥಿಗಳು, ಪರಾರಿಯಾಗಿದ್ದರು. ಅವರನ್ನು ಕೂಡ ವಶಕ್ಕೆ ಪಡೆಯಲು ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಹೇಳಿದರು.
ಓದಿ: ಮುಂದಿನ ದಿನಗಳಲ್ಲಿ ಈ ಧ್ವಜ ಸಹ ರಾಷ್ಟ್ರ ಧ್ವಜ ಆಗಬಹುದು: ಸಚಿವ ಈಶ್ವರಪ್ಪ ವಿವಾದಾತ್ಮಕ ಹೇಳಿಕೆ