ಶಿವಮೊಗ್ಗ : ಜಿಲ್ಲೆಯ ಪ್ರತಿಷ್ಠಿತ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ಆರ್.ಎಂ ಮಂಜುನಾಥಗೌಡ ಶುಕ್ರವಾರ ಅವಿರೋಧವಾಗಿ ಆಯ್ಕೆ ಆಗಿದ್ದಾರೆ. 5 ನೇ ಬಾರಿಗೆ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ಮಂಜುನಾಥ್ ಗೌಡರು ದಾಖಲೆ ಬರೆದಿದ್ದಾರೆ.
ಶುಕ್ರವಾರ ಬ್ಯಾಂಕ್ನಲ್ಲಿ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಒಂದೇ ಒಂದು ನಾಮಪತ್ರ ಸಲ್ಲಿಕೆಯಾಗಿತ್ತು. ಇದರಿಂದ ಆರ್.ಎಂ ಮಂಜುನಾಥ್ ಗೌಡ ಅವಿರೋಧವಾಗಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಹಂಗಾಮಿ ಅಧ್ಯಕ್ಷರಾದ ಷಡಕ್ಷರಿ ಅವರು ತಮ್ಮ ಅಧಿಕಾರ ಹಸ್ತಾಂತರಿಸಿದರು. ಅಡಮಾನ ಚಿನ್ನದ ಬಹು ಕೋಟಿ ಹಗರಣದಲ್ಲಿ ಸಹಕಾರಿ ರಂಗದ ಸದಸ್ಯತ್ವದಿಂದ ಕೋರ್ಟ್ ಅಮಾನತುಗೊಳಿಸಿತ್ತು.
ಹೀಗಾಗಿ ಕಳೆದ 5 ವರ್ಷಗಳಂದ ಡಿಸಿಸಿ ಬ್ಯಾಂಕ್ ನಿಂದ ಮಂಜುನಾಥ ಗೌಡ ಹೊರಗುಳಿದಿದ್ದರು. ಎಲ್ಲ ಕಾನೂನು ತೊಡಕುಗಳನ್ನು ಕೋರ್ಟ್ನಲ್ಲಿ ಪರಿಹರಿಸಿಕೊಂಡು ಕಳೆದ ಎರಡು ತಿಂಗಳ ಹಿಂದೆ ಪುನಃ ಡಿಸಿಸಿ ಬ್ಯಾಂಕ್ ನಿರ್ದೇಶಕರಾಗಿದ್ದರು. ಇದೀಗ ತಮ್ಮ ಪರಮಾಪ್ತ ದುಗ್ಗಪ್ಪಗೌಡರಿಂದ ರಾಜೀನಾಮೆ ಕೊಡಿಸಿ ಖಾಲಿ ಇದ್ದ ನಿರ್ದೇಶಕ ಹುದ್ದೆಗೆ ನಾಮನಿರ್ದೇಶನ ಮಾಡಿಸಿಕೊಂಡಿರುವ ಮಂಜುನಾಥ ಗೌಡರು, ಡಿಸಿಸಿ ಬ್ಯಾಂಕ್ ಅಧ್ಯಕ್ಷಗಾದಿ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಇದನ್ನೂ ಓದಿ : ಕಲಬುರಗಿ - ಯಾದಗಿರಿ ಜಿಲ್ಲಾ ಡಿಸಿಸಿ ಬ್ಯಾಂಕ್ನ ಅಧ್ಯಕ್ಷರಾಗಿ ಸೋಮಶೇಖರ್ ಗೋನಾಯಕ್ ಅವಿರೋಧ ಆಯ್ಕೆ
ಈ ವೇಳೆ ಮಾತನಾಡಿದ ಮಂಜುನಾಥ್ ಗೌಡ ಅವರು, ನಮ್ಮ ಮುಂದೆ ಆನೇಕ ಸವಾಲುಗಳಿವೆ. ಸಹಕಾರಿ ಕ್ಷೇತ್ರದಲ್ಲಿ ಸಹಕಾರಿಗಳಿಗೆ ಎಲ್ಲ ರೀತಿಯ ನೆರವು ನೀಡುವುದಾಗಿ ತಿಳಿಸಿದರು. ಮಹಿಳಾ ಸ್ವ ಸಹಾಯ ಗುಂಪುಗಳಿಗೆ ಆರ್ಥಿಕ ಚಟುವಟಿಕೆ ನಡೆಸಲು ಹೆಚ್ಷು ಸಾಲು ನೀಡುವ ಯೋಜನೆ ಇದೆ. ಅದೇ ರೀತಿ ಈ ಭಾರಿಯ ಬರಗಾಲ ಅತ್ಯಂತ ಭೀಕರವಾಗಿದೆ. ಇದಕ್ಕಾಗಿ ಜಿಲ್ಲೆಯ ರೈತರಿಗೆ ಅನುಕೂಲ ಮಾಡಿಕೊಡಬೇಕಾದ ಕುರಿತು ಚರ್ಚಿಸಿ ತೀರ್ಮಾನ ಮಾಡುವುದಾಗಿ ತಿಳಿಸಿದರು. ಅಧ್ಯಕ್ಷರಾಗಿ ಮಂಜುನಾಥ ಗೌಡರು ಆಯ್ಕೆ ಆಗುತ್ತಿದ್ದಂತಯೇ ಸಹಕಾರಿ ಕ್ಷೇತ್ರದವರು ಹಾಗೂ ಅಭಿಮಾನಿಗಳು ಹಾರ, ಶಾಲು ಹಾಕಿ ಅಭಿನಂದಿಸಿದರು.
ಕಲಬುರಗಿ - ಯಾದಗಿರಿ ಡಿಸಿಸಿ ಬ್ಯಾಂಕ್ ಅಧ್ಯಕ್ಷರ ಆಯ್ಕೆ : ಕಳೆದ ತಿಂಗಳು ಆಗಸ್ಟ್ 19 ರಂದು ಕಲಬುರಗಿ - ಯಾದಗಿರಿ ಜಿಲ್ಲಾ ಕೇಂದ್ರ ಸಹಕಾರಿ (ಡಿಸಿಸಿ) ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಸಚಿವ ಶರಣಬಸಪ್ಪ ದರ್ಶನಾಪುರ ಅವರ ಆಪ್ತವಲಯದ ಸೋಮಶೇಖರ್ ಗೋನಾಯಕ್ ಅವಿರೋಧ ಆಯ್ಕೆ ಆಗಿದ್ದರು. ನಾಲ್ಕು ಬಾರಿ ನಿರ್ದೇಶಕರಾಗಿ ಒಂದು ಬಾರಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ ಸೋಮಶೇಖರ ಗೋನಾಯಕ್, ಎರಡನೇ ಬಾರಿಗೆ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿದ್ದರು. ಈ ಮೂಲಕ ಡಿಸಿಸಿ ಬ್ಯಾಂಕ್ ಅನ್ನು ಆಡಳಿತಾರೂಢ ಕಾಂಗ್ರೆಸ್ ಪಕ್ಷ ತನ್ನ ಹಿಡಿತಕ್ಕೆ ಪಡೆಯುವಲ್ಲಿ ಸಫಲಗೊಂಡಿತ್ತು. ಮುಂದಿನ ಮೂರು ವರ್ಷಗಳ ಕಾಲ ಗೋನಾಯಕ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಲಿದ್ದಾರೆ.
ಇದನ್ನೂ ಓದಿ : ಚಿತ್ರದುರ್ಗ ಡಿಸಿಸಿ ಬ್ಯಾಂಕ್ನಲ್ಲಿ ಎಫ್ಡಿಎ, ಎಸ್ಡಿಎ ನೇಮಕಾತಿ; 68 ಹುದ್ದೆಗಳಿಗೆ ಅರ್ಜಿ ಆಹ್ವಾನ