ETV Bharat / state

ಶಿವಮೊಗ್ಗ: ಮುಷ್ಟಿ ಅಕ್ಕಿ ಅಭಿಯಾನ.. ಅಕ್ಕಿ ವಿತರಣಾ ಕಾರ್ಯಕ್ರಮ.. - Etv Bharata Kannada

ಶಬರಿಮಲೆ ಅಯ್ಯಪ್ಪಸ್ವಾಮಿ ಸೇವಾ ಸಮಾಜಂ ಶಿವಮೊಗ್ಗ ಜಿಲ್ಲೆ ವತಿಯಿಂದ ಆರಂಭಿಸಿದ್ದ ಮುಷ್ಟಿ ಅಕ್ಕಿ ಅಭಿಯಾನದಲ್ಲಿ ಜಿಲ್ಲೆಯಿಂದ 35 ಸಾವಿರ ಕೆ.ಜಿ ಅಕ್ಕಿಹಾಗೂ 5 ಸಾವಿರ ಕೆ.ಜಿ ಬೆಲ್ಲ, ಬೇಳೆಯನ್ನು ಸಂಗ್ರಹಿಸಲಾಗಿದೆ.

kn_smg
ಅಕ್ಕಿ ವಿತರಣಾ ಕಾರ್ಯಕ್ರಮ
author img

By

Published : Nov 30, 2022, 7:59 PM IST

ಶಿವಮೊಗ್ಗ: ಶಬರಿಮಲೆ ಅಯ್ಯಪ್ಪಸ್ವಾಮಿ ಸೇವಾ ಸಮಾಜಂ ಶಿವಮೊಗ್ಗ ಜಿಲ್ಲೆ ವತಿಯಿಂದ ದೇಶದಲ್ಲಿಯೇ ಪ್ರಥಮ ಭಾರಿ ಮುಷ್ಟಿ ಅಕ್ಕಿ ಅಭಿಯಾನ ನಡೆಸಲಾಗಿದೆ. ಈ ಅಭಿಯಾನದಿಂದ ಶಬರಿಮಲೆಯಲ್ಲಿ ಪ್ರಸಾದವನ್ನು ವಿತರಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತದೆ.

ಇದಕ್ಕಾಗಿ ಶಿವಮೊಗ್ಗ ಜಿಲ್ಲೆಯಿಂದ 35 ಸಾವಿರ ಕೆ.ಜಿ ಅಕ್ಕಿಯನ್ನು ಹಾಗೂ 5 ಸಾವಿರ ಕೆ.ಜಿ ಬೆಲ್ಲ, ಬೇಳೆಯನ್ನು ಸಂಗ್ರಹಿಸಲಾಗಿದೆ. ಇದನ್ನು ಎರಡು ಲಾರಿಗಳ ಮೂಲಕ ಶಬರಿಮಲೆಗೆ ಕಳುಹಿಸಲಾಗುತ್ತದೆ‌. ಇಂದು ವಿತರಣಾ ಕಾರ್ಯಕ್ರಮವನ್ನು ಶುಭಂಮಂಗಳ ಸಮುದಾಯ ಭವನದ ಮುಂಭಾಗದಲ್ಲಿ ಹಮ್ಮಿಕೊಳ್ಳಲಾಗಿತ್ತು.

ವಿತರಣಾ ಕಾರ್ಯಕ್ರಮವನ್ನು ಹೊರನಾಡು ಅನ್ನಪೂರ್ಣೇಶ್ವರಿ ದೇವಾಲಯದ ಧರ್ಮದರ್ಶಿ ಭಿಮೇಶ್ವರ ಜೋಶಿರವರು ಉದ್ಘಾಟಿಸಿದರು‌. ಈ ವೇಳೆ ಮಾತನಾಡಿದ ಅವರು, ಅಕ್ಕಿಯ ಅಭಿಯಾನ ಬಹಳ ವಿಶಿಷ್ಟತೆಯನ್ನು ತಂದು ಕೊಟ್ಟಿದೆ. ಇದರ ಹಿಂದೆ ಇರುವ ತತ್ತ್ವ, ದರ್ಶನ ಹಾಗೂ ಆದರ್ಶ ಇದನ್ನು ನಾವೆಲ್ಲಾ ಮನಗಾಣಬೇಕಿದೆ. ಒಂದು ಮುಷ್ಟಿ ಅಕ್ಕಿಯನ್ನು ಯಾವ ದೇವರಿಗೆ, ಯಾವ ಗುರುಗಳಿಗೆ ಎತ್ತಿಡುತ್ತಿರೋ, ಅದನ್ನು ಅವರಿಗೆ ತಲುಪಿಸುವ ಕೆಲಸವಾಗುತ್ತದೆ.

ಅಕ್ಕಿ ವಿತರಣಾ ಕಾರ್ಯಕ್ರಮ

ನಾವು ಎತ್ತಿಟ್ಟಿದ್ದು ತಲುಪಿಸುವುದರ ಜೊತೆಗೆ ಅಲ್ಲಿ ಎಷ್ಟರ ಮಟ್ಟಿಗೆ ವಿನಿಯೋಗವಾಗುತ್ತದೆ ಎಂಬುದು ಮುಖ್ಯವಾಗುತ್ತದೆ. ಕಾಂತೇಶ್ ಅವರು ಮಾಡಿದ ಈ ಮುಷ್ಟಿ ಅಕ್ಕಿ ಅಭಿಯಾನ ಭಾರತದಲ್ಲಿಯೇ ಪ್ರಥಮವಾಗಿದೆ ಇದಕ್ಕೆ ನಿಮಗೆ ಅಭಿನಂದನೆಗಳು ಎಂದರು.

ನಂತರ ಗೌರಿಗದ್ದೆ ವಿನಯ್ ಗುರೂಜಿ ಮಾತನಾಡಿ, ಧರ್ಮಕ್ಕೆ ಭೇದವಿಲ್ಲ, ಧರ್ಮ ಅಂದ್ರೆ ದಯೆ. ಅನ್ನಕ್ಕೂ‌ ಭೇದವಿಲ್ಲ. ಮೋದಿ ಬಂದು ದೇಶ ಸರಿ ಆಗುತ್ತದೆ ಎಂದು ಬಾಯಲ್ಲಿ ಹೇಳಿದರೆ ಸರಿ ಆಗಲ್ಲ, ನಾವೆಲ್ಲ ಮೋದಿ ತರ ಜವಾಬ್ದಾರಿಯುತರಾದರೆ ದೇಶ ಸರಿ ಆಗುತ್ತದೆ. ಭಾರತ ಏನೂ ಅಂತ ಗೂತ್ತಾಗುವುದು, ಭಾರತದ ಮಣ್ಣಿನ ಪವಿತ್ರತೆ ಗೊತ್ತಾದಾಗ ಅರಿತಾಗ, ತಾನು ಭಾರತೀಯ ಎಂದು ಅರಿವು ಬಂದಾಗ ಎಂದರು.

ಭಾರತ ಎಲ್ಲವನ್ನು ಉಳಿಸಿ ಬೆಳೆಸುತ್ತದೆ. ಅದೇ ಭಾರತದ ಶಕ್ತಿ. ಅದಕ್ಕೆ ಇಡಿ ಜಗತ್ತು ಭಾರತಕ್ಕೆ ತಲೆ ಬಗ್ಗಿಸುತ್ತದೆ. ಇದನ್ನು ಮೋದಿ ಸಾಬೀತು ಮಾಡಿದರು. ಇಂದು ಭಾರತೀಯರು ಎಂದರೆ ಕರೆದು ಮಾತನಾಡಿಸುತ್ತಾರೆ ಇದಕ್ಕೆ ಮೋದಿ ಕಾರಣ, ಆ ವ್ಯಕ್ತಿತ್ವಕ್ಕೆ ಅಷ್ಟು ತಾಕತ್ ಇದೆ ಎಂದರು.

ಕಾರ್ಯಕ್ರಮದಲ್ಲಿ ಆರ್​ಎಸ್​ಎಸ್​ನ ದಕ್ಷಿಣ ಕಾರ್ಯನಿರ್ವಾಹಕ ಪಟ್ಟಾಭಿ, ಮಾಜಿ ಎಂಎಲ್ಸಿ ಭಾನುಪ್ರಕಾಶ್, ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ, ಎಸ್ಎಎಸ್​ಎಸ್ ರಾಷ್ಟ್ರೀಯ ಸದಸ್ಯ ಕೆ.ಈ.ಕಾಂತೇಶ್, ಎಸ್​ಎಎಸ್​ಎಸ್ ನ ಜಿಲ್ಲಾಧ್ಯಕ್ಷ ಸಂತೋಷ್ ಸೇರಿದಂತೆ ಅನೇಕರು ಭಾಗಿಯಾಗಿದ್ದರು.

ಇದನ್ನೂ ಓದಿ: ಶಿವಮೊಗ್ಗದಲ್ಲಿ ಶಬರಿ‌ಮಲೆ ಭಕ್ತರಿಗಾಗಿ ಹಿಡಿ ಅಕ್ಕಿ ಸಂಗ್ರಹ ಅಭಿಯಾನ..

ETV Bharat Logo

Copyright © 2025 Ushodaya Enterprises Pvt. Ltd., All Rights Reserved.