ETV Bharat / state

ಕಾರ್ಗಿಲ್ ಯುದ್ಧದ ರೋಮಾಂಚಕ ಅನುಭವ ಬಿಚ್ಚಿಟ್ಟ ನಿವೃತ್ತ ಯೋಧ ಸುಬೇದಾರ್ ಗುಳ್​ಗುಳೆ - ಕಾರ್ಗಿಲ್ ವಿಜಯೋತ್ಸವ

ಕಾರ್ಗಿಲ್ ಕಂದಕಗಳನ್ನು ಹೊಂದಿದ, ರಸ್ತೆಯೇ‌ ಇಲ್ಲದ‌ ಒಂದು ಗುಡ್ಡ ಪ್ರದೇಶ. ಅಲ್ಲಿಗೆ ಇವರು ತಮ್ಮ ಯುದ್ಧ ಸಾಮಗ್ರಿಗಳನ್ನು ತೆಗೆದುಕೊಂಡು ವಾಹನಗಳಲ್ಲಿ ಹೋಗಬೇಕಾಗಿತ್ತು. ಗುಡ್ಡದ ಘಾಟ್​ನಲ್ಲಿ ಕೇವಲ ಮುಂದಿನ‌ ದಾರಿಯನ್ನು ನೋಡಿಕೊಂಡ ವಾಹನ ಚಲಾಯಿಸಬೇಕಿತ್ತು. ಪಕ್ಕದಲ್ಲಿ ಪ್ರಪಾತ ಅದನ್ನು‌ ನೋಡದೆ ವಾಹನ ಚಲಾಯಿಸಿ ಸೈನಿಕರನ್ನು ಯುದ್ಧ ಮಾಡಲು ಬಿಡಬೇಕಿತ್ತು.

ನಿವೃತ್ತ ಯೋಧ ಸುಬೇದಾರ್ ಗುಳ್​ಗುಳೆ
ನಿವೃತ್ತ ಯೋಧ ಸುಬೇದಾರ್ ಗುಳ್​ಗುಳೆ
author img

By

Published : Jul 26, 2020, 12:45 AM IST

ಶಿವಮೊಗ್ಗ: 1999ರಲ್ಲಿ ಕುತಂತ್ರದಿಂದ ಭಾರತದ ಗಡಿ ಒಳಗೆ ನುಗ್ಗಿ ದೇಶದ ಭದ್ರತೆಗೆ ಧಕ್ಕೆ ತರಲು ಪ್ರಯತ್ನಿಸಿದ ಪಾಕ್​ ವಿರುದ್ಧ ಹೆಬ್ಬುಲಿಗಳಂತೆ ಎದುರಿಸಿ, ಜಯಭೇರಿ ಬಾರಿಸಿದ್ದ ಭಾರತೀಯ ಸೇನೆಯ ಶಕ್ತಿ ಅಜರಾಮರ. ಸಂದಿಗ್ದ ಪರಿಸ್ಥಿತಿಯಲ್ಲಿ ದೇಶದ ರಕ್ಷಣೆ ಮಾಡುವ ಸೈನಿಕರ ಕಾರ್ಯ ನಿಜಕ್ಕೂ‌ ಶ್ಲಾಘನೀಯ. ಇವರು ಭದ್ರಾವತಿ ಹೊಸಮನೆಯ‌ ನಿವಾಸಿ ಸುಬೇದಾರ್ ಗುಳ್​ಗುಳೆ. ಭಾರತೀಯ ಸೇನೆಯಲ್ಲಿ ಸುಮಾರು 14 ವರ್ಷ ಸೇವೆ ಸಲ್ಲಿಸಿದ್ದಾರೆ. 1988 ರಲ್ಲಿ ಸೇನೆಗೆ ಸೇರ್ಪಡೆಗೊಂಡರು. ನಂತರ 2002 ರಲ್ಲಿ‌ ನಿವೃತ್ತಿ ತೆಗೆದು ಕೊಂಡು ವಾಪಸ್ ಬಂದಿದ್ದಾರೆ. ಕಾರ್ಗಿಲ್​ ಯುದ್ಧದದಲ್ಲಿ ಭಾಗಿಯಾದವರು.

ನಿವೃತ್ತ ಯೋಧ ಸುಬೇದಾರ್ ಗುಳ್​ಗುಳೆ ಕುಟುಂಬ
ನಿವೃತ್ತ ಯೋಧ ಸುಬೇದಾರ್ ಗುಳ್​ಗುಳೆ ಕುಟುಂಬ

ಇವರು ಸೈನ್ಯಕ್ಕೆ ಸೇರಿದ‌ ಮೇಲೆ ಅಲ್ಲಿ ಮೆಕಾನಿಕ್ ಕೆಲಸ ಕಲಿತು, ಟ್ರಕ್ ಹಾಗೂ ಜೀಪ್​ಗಳ ರಿಪೇರಿ ಮಾಡಿ ತಮ್ಮ ಸೈನಿಕರನ್ನು ಸುರಕ್ಷಿತವಾಗಿ ನೆಲೆ ‌ಮುಟ್ಟಿಸುತ್ತಿದ್ದರು. ಸುಬೇದಾರ್ ಗುಳ್​ಗುಳೆ ಮೂಲತಃ ಬೆಳಗಾವಿ ಜಿಲ್ಲೆಯವರು. ಇವರ ತಂದೆ ಸಹ ಸೈನಿಕರಾಗಿದ್ದು, 1971 ರ ಬಾಂಗ್ಲಾ ವಿಮೋಚನ ಯುದ್ಧದಲ್ಲಿ ಭಾಗಿಯಾಗಿದ್ದರು. ತಂದೆಯಂತೆ ದೇಶ‌ ಸೇವೆ ಮಾಡುವ ಉದ್ದೇಶದಿಂದ ಸೈನ್ಯಕ್ಕೆ ಸೇರಿದ ಸುಬೇದಾರ್ ಗುಳ್​ಗುಳೆ 14 ವರ್ಷ ಸೇವೆ ಸಲ್ಲಿಸಿದ್ದಾರೆ. ಸಿಪಾಯಿ ಆಗಿ‌ ಸೇನೆ ಸೇರಿದ ಗುಳ್​ಗುಳೆರವರು ಸುಬೇದಾರ್ ಆಗಿ‌ ನಿವೃತ್ತಿ ಪಡೆದಿದ್ದಾರೆ.

ರೋಮಾಂಚಕ ಅನುಭವ ಬಿಚ್ಚಿಟ್ಟ ನಿವೃತ್ತ ಯೋಧ

ಸುಬೇದಾರ್ ಗುಳ್​ಗುಳೆ ಯುದ್ಧದ ಅನುಭವ:

ಗುಳ್​ಗುಳೆ ಮೊದಲು ಭೂಪಾಲ್​ನಲ್ಲಿ ತರಬೇತಿ ಪಡೆದು ನಂತರ ಪಠಾಣ್ ಕೋಟ್, ಹರಿಯಾಣ, ದೆಹಲಿ, ಮೀರತ್​ನಲ್ಲಿ ಸೇವೆ ಸಲ್ಲಿಸಿದ್ದಾರೆ. ರಾಜಾಸ್ಥಾನದಲ್ಲಿದ್ದಾಗ ಇವರ ಬೆಟಾಲಿಯನ್ ಅನ್ನು ಕಾರ್ಗಿಲ್​ಗೆ ಶಿಫ್ಟ್ ಮಾಡುತ್ತಾರೆ. ಇವರಿಗೆ ಮೊದಲು ಯುದ್ಧ ಅಂತ ತಿಳಿದಿರುವುದಿಲ್ಲ. ಬದಲಿಗೆ ಉಗ್ರವಾದಿಗಳು ನುಗ್ಗಿರಬೇಕು. ಅವರನ್ನು ವಾರದಲ್ಲಿ ಮುಗಿಸಿ ವಾಪಸ್ ಆಗಬಹುದು ಎಂದು ಹೊರಡುತ್ತಾರೆ. ಆದರೆ 3 ವರ್ಷ ಕಾರ್ಗಿಲ್​ನಲ್ಲಿ ನೆಲೆಸಬೇಕಾಗುತ್ತದೆ. ಅಷ್ಟರಲ್ಲಿ ಗುಳ್​ಗುಳೆ ಅವರಿಗೆ ಮದುವೆಯಾಗಿ ಒಂದು ಮಗು ಸಹ ಆಗಿರುತ್ತದೆ. ಅತ್ತ ಕಾರ್ಗಿಲ್​ನಲ್ಲಿ ಯುದ್ಧ ಪ್ರಾರಂಭವಾಗುತ್ತಿದ್ದಂತೆಯೇ ತಮ್ಮ ಕುಟುಂಬವನ್ನು ತಮ್ಮ ತಂದೆಯ ಜೊತೆ ಭದ್ರಾವತಿಗೆ ಕಳುಹಿಸುತ್ತಾರೆ.

ಕಾರ್ಗಿಲ್ ಕಂದಕಗಳನ್ನು ಹೊಂದಿದ, ರಸ್ತೆಯೇ‌ ಇಲ್ಲದ‌ ಒಂದು ಗುಡ್ಡ ಪ್ರದೇಶ. ಅಲ್ಲಿಗೆ ಇವರು ತಮ್ಮ ಯುದ್ಧ ಸಾಮಗ್ರಿಗಳನ್ನು ತೆಗೆದುಕೊಂಡು ವಾಹನಗಳಲ್ಲಿ ಹೋಗಬೇಕಾಗಿತ್ತು. ಗುಡ್ಡದ ಘಾಟ್​ನಲ್ಲಿ ಕೇವಲ ಮುಂದಿನ‌ ದಾರಿಯನ್ನು ನೋಡಿಕೊಂಡ ವಾಹನ ಚಲಾಯಿಸಬೇಕಿತ್ತು. ಪಕ್ಕದಲ್ಲಿ ಪ್ರಪಾತ ಅದನ್ನು‌ ನೋಡದೆ ವಾಹನ ಚಲಾಯಿಸಿ ಸೈನಿಕರನ್ನು ಯುದ್ಧ ಮಾಡಲು ಬಿಡಬೇಕಿತ್ತು. ಮೊದಲು ಉಗ್ರವಾದಿಗಳು ಅಂದುಕೊಂಡಿದ್ದ ಭಾರತೀಯ ಸೈನಿಕರಿಗೆ ಅಲ್ಲಿ ಇರುವುದು ಉಗ್ರವಾದಿಗಳಲ್ಲ, ಬದಲಿಗೆ ಪಾಕಿಸ್ತಾನದ ಸೈನಿಕರು‌ ಎಂದು ತಿಳಿದ‌ ಮೇಲೆ ತಮ್ಮ ಯುದ್ಧದ ವೈಖರಿಯನ್ನೆ ಬದಲಾಯಿಸಿ ಬೇಕಾಯಿತು.

ಟೈಗರ್ ಹಿಲ್ಸ್​ನ ಗುಡ್ಡಗಾಡು ಪ್ರದೇಶದಲ್ಲಿ, ಗಿಡ-ಗಂಟಿಯ ಜೊತೆ ಮಂಜನ್ನು ತೆಗೆದು ಯುದ್ಧ ಮಾಡಲಾಗುತ್ತಿತ್ತು. ಆದರೆ ಈ ಯುದ್ಧದಲ್ಲಿ ಬೊಫೋರ್ಸ್​ನ ಶಕ್ತಿಯಿಂದಾಗಿ, ಯುದ್ಧ ಭಾರತದ ಕಡೆ ವಾಲತೊಡಗಿತು. ಶತ್ರು ಸೈನಿಕರು ಬೊಫೋರ್ಸ್​ನ್ನು ಹಿಮ್ಮೆಟ್ಟಿಸಲಾಗದೇ ವಾಪಸ್ ತೆರಳಿದರು. ಸಾವಿರಾರು ಮಂದಿ ಬೊಫೋರ್ಸ್​ಗೆ ಬಲಿಯಾದರು.‌ ಬೊಫೋರ್ಸ್ ಅನ್ನು ಸಹ ಕಾರ್ಗಿಲ್​ಗೆ ತಗೆದು ಕೊಂಡು ಹೋಗಿದ್ದು ಒಂದು ಸಾಹಸ. ಇದರಿಂದ ನಾವು ಕಾರ್ಗಿಲ್ ಯುದ್ಧ ಗೆಲ್ಲುವಂತಾಯಿತು ಎಂದು ಗುಳ್​ಗುಳೆ ಯುದ್ಧದ ರೋಮಾಂಚಕ ಅನುಭವವನ್ನು ಹೇಳಿದ್ದಾರೆ.

ನಿವೃತ್ತ ಯೋಧ ಸುಬೇದಾರ್ ಗುಳ್​ಗುಳೆ
ನಿವೃತ್ತ ಯೋಧ ಸುಬೇದಾರ್ ಗುಳ್​ಗುಳೆ

ನನಗೆ ಮೊದಲಿನಿಂದಲೂ‌ ಸಹ ಸೈನ್ಯಕ್ಕೆ‌ ಸೇರಬೇಕು ಎಂಬ ಬಯಕೆ ಇತ್ತು. ಇದಕ್ಕಾಗಿ‌ ಎಸ್​ಎಸ್​ಎಲ್​ಸಿ ಮುಗಿಸಿ ಡಿಪ್ಲೋಮಾ ಮಾಡುವಾಗ ಸೈನ್ಯಕ್ಕೆ‌ ಸೇರಿದೆ. ನಾವು‌ ಸೇರಿದ 12 ವರ್ಷದ ನಂತರ ಯುದ್ಧದಲ್ಲಿ ಭಾಗಿಯಾಗುವ ಅವಕಾಶ ಲಭ್ಯವಾಯಿತು. ಸೈನ್ಯಕ್ಕೆ‌ ಸೇರಿದ ಯೋಧ ಯುದ್ಧದಲ್ಲಿ ಭಾಗಿಯಾದರೆ ಆ ಸಂತೋಷ ಹೇಳುವುದಕ್ಕೆ ಆಗುವುದಿಲ್ಲ. ಅದು ನಮ್ಮ ಸೌಭಾಗ್ಯವೇ ಸರಿ. ಎಲ್ಲರು ಸೈನ್ಯಕ್ಕೆ ಸೇರಬೇಕು ಎನ್ನುತ್ತಾರೆ ಸುಬೇದಾರ್ ಗುಳ್​ಗುಳೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.