ಶಿವಮೊಗ್ಗ:ಋಣಮುಕ್ತ ಕಾಯ್ದೆಯಡಿ ಮೈಕ್ರೋ ಫೈನಾನ್ಸ್ಗಳ ಸಾಲಮನ್ನಾ ಮಾಡಬೇಕು ಎಂದು ಒತ್ತಾಯಿಸಿ ಜಿಲ್ಲಾ ಋಣಮುಕ್ತ ಹೋರಾಟ ಸಮಿತಿ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ರಾಜ್ಯದಲ್ಲಿ ಮೈಕ್ರೋಫೈನಾನ್ಸ್ಗಳ ಹಾವಳಿ ಹೆಚ್ಚಾಗುತ್ತಿದೆ. ರಾಜ್ಯದಲ್ಲಿ ಸುಮಾರು 172 ಶ್ರೀಮಂತ ಮೈಕ್ರೋ ಫೈನಾನ್ಸ್ಗಳಿವೆ. ಇವುಗಳನ್ನು ಸ್ಥಾಪಿಸಿ ಬಡ್ಡಿ ವ್ಯವಹಾರ ಮಾಡುತ್ತ ಶ್ರೀಮಂತರಾಗಿದ್ದಾರೆ. ಉದ್ಯೋಗ ಸೃಷ್ಟಿ, ಮಹಿಳೆಯರಿಗೆ ತರಬೇತಿ, ಬಡತನ ನಿರ್ಮೂಲನೆ ಹೆಸರಲ್ಲಿ ಮಹಿಳೆ ಸಾಲ ನೀಡಿ ಕಿರುಕುಳ ನೀಡುತ್ತಿದ್ದಾರೆ ಎಂದು ದೂರಿದ್ದಾರೆ.
ಸರ್ಕಾರದಿಂದ ಹಣ ಪಡೆದು, ಯಾವ ತರಬೇತಿಯನ್ನು ನೀಡುವುದಿಲ್ಲ. ಬ್ಯಾಂಕ್ ನಬಾರ್ಡ್ ಮುಂತಾದವುಗಳಿಂದ ಕಡಿಮೆ ಬಡ್ಡಿ ದರದಲ್ಲಿ ಸಾಲ ಪಡೆದು, ಹೆಚ್ಚು ಬಡ್ಡಿಗೆ ಸಾಲ ನೀಡುತ್ತ ವಂಚಿಸುತ್ತಿದೆ ಎಂದು ಆರೋಪಿಸಿದರು. ಬೇನಾಮಿ ಹೆಸರಿನಲ್ಲಿ ಹಣ ನೀಡುತ್ತಿರುವ ಮೈಕ್ರೋಫೈನಾನ್ಸ್ಗಳನ್ನು ರಾಷ್ಟ್ರೀಕರಣ ಮಾಡಬೇಕೆಂದು ಹಾಗೂ ಋಣಮುಕ್ತ ಕಾಯ್ದೆಯಡಿ ಸಾಲ ಮನ್ನಾ ಮಾಡಬೇಕು ಎಂದು ಆಗ್ರಹಿಸಿದರು.