ETV Bharat / state

ಸಂತ್ರಸ್ತರಿಗೆ ಶಾಶ್ವತ ಪರಿಹಾರ.... ಭರದಿಂದ ಸಾಗಿದ ಪುನರ್ವಸತಿ: ಶಿವಮೊಗ್ಗ ಡಿಸಿ

ಶಿವಮೊಗ್ಗ ಜಿಲ್ಲೆಯಲ್ಲಿ ಅತಿವೃಷ್ಟಿ ಹಾಗೂ ನೆರೆಯಿಂದಾಗಿರುವ ಹಾನಿಯನ್ನು ಅಂದಾಜಿಸಲಾಗುತ್ತಿದ್ದು, ಪರಿಹಾರ ಮತ್ತು ಪುನರ್ವಸತಿ ಕಾರ್ಯವನ್ನು ವ್ಯವಸ್ಥಿತವಾಗಿ ಮಾಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಶಿವಕುಮಾರ್ ತಿಳಿಸಿದ್ದಾರೆ.

ನೆರೆ ಶಾಶ್ವತ ಪರಿಹಾರ, ಪುನರ್ವಸತಿ ಕಾರ್ಯ ಚುರುಕು: ಡಿಸಿ ಶಿವಕುಮಾರ್
author img

By

Published : Aug 21, 2019, 1:44 PM IST

ಶಿವಮೊಗ್ಗ: ಜಿಲ್ಲೆಯಲ್ಲಿ ಅತಿವೃಷ್ಟಿ ಹಾಗೂ ನೆರೆಯಿಂದಾಗಿರುವ ಹಾನಿಯನ್ನು ಅಂದಾಜಿಸಲಾಗುತ್ತಿದ್ದು, ಪರಿಹಾರ ಮತ್ತು ಪುನರ್ವಸತಿ ಕಾರ್ಯವನ್ನು ವ್ಯವಸ್ಥಿತವಾಗಿ ಮಾಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಶಿವಕುಮಾರ್ ತಿಳಿಸಿದ್ದಾರೆ.

ನೆರೆ ಶಾಶ್ವತ ಪರಿಹಾರ, ಪುನರ್ವಸತಿ ಕಾರ್ಯ ಚುರುಕು- ಡಿಸಿ ಶಿವಕುಮಾರ್

ತಮ್ಮ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಸುಮಾರು 5,500 ಕುಟುಂಬಗಳು ನೆರೆ ಬಾಧಿತ ಎಂದು ಗುರುತಿಸಲಾಗಿದೆ. ಇದರಲ್ಲಿ 2,400 ಕುಟುಂಬಗಳಿಗೆ ಈಗಾಗಲೇ ತುರ್ತು ಪರಿಹಾರವಾಗಿ ತಲಾ 10 ಸಾವಿರ ರೂ. ಅವರ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗಿದೆ. ಇನ್ನೂ 492 ಮನೆಗಳು ಸಂಪೂರ್ಣ ಹಾನಿಯಾಗಿದ್ದು, ಅವುಗಳ ನಿರ್ಮಾಣಕ್ಕೆ 5 ಲಕ್ಷ ರೂಪಾಯಿಗಳನ್ನು, ಸಣ್ಣ ಪುಟ್ಟ ಹಾನಿಗೆ 25 ಸಾವಿರ ಹಾಗೂ ಭಾಗಶಃ ಹಾನಿಗೆ 1 ಲಕ್ಷ ರೂಪಾಯಿಗಳನ್ನು ನೀಡಲಾಗುತ್ತಿದೆ.

ಅಷ್ಟೇ ಅಲ್ಲದೇ, 70 ಜಾನುವಾರುಗಳು 23 ಸಾವಿರ ಕೋಳಿಗಳು ಸಾವಿಗಿಡಾಗಿದ್ದು, ಮೃತ ಜಾನುವಾರು ಮಾಲೀಕರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಹಣ ಜಮಾವಣೆ ಮಾಡಲಾಗಿದೆ. ಇನ್ನೂ ಪ್ರವಾಹದಲ್ಲಿ ಸಾವನ್ನಪ್ಪಿದ 10 ಮಂದಿಯ ಕುಟುಂಬಗಳಿಗೆ ತಲಾ 5 ಲಕ್ಷ ಪರಿಹಾರವನ್ನು ನೀಡಲಾಗಿದೆ. ಜೊತೆಗೆ ಕುಮದ್ವತಿ ನದಿಯಲ್ಲಿ ಕೊಚ್ಚಿ ಹೋದ ಇಬ್ಬರ ಶವಕ್ಕಾಗಿ ಹುಡುಕಾಟ ನಡೆಸಲಾಗುತ್ತಿದ್ದು, ಅವರ ಕುಟುಂಬಗಳಿಗೆ ಪರಿಹಾರ ನೀಡುವ ಕುರಿತು ಇನ್ನೆರಡು ದಿನಗಳಲ್ಲಿ ನಿರ್ಧಾರ ಮಾಡಲಾಗುವುದು ಎಂದರು.

ಅತಿವೃಷ್ಟಿ ಸಂದರ್ಭದಲ್ಲಿ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆಗಳು ಹೆಚ್ಚಿದ್ದು, ಅವು ಹರಡದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ. ಈ ಕುರಿತು ಆರೋಗ್ಯ ಇಲಾಖೆಗೆ ಸೂಕ್ತ ನಿರ್ದೇಶನ ನೀಡಿ, ಕ್ಲೋರಿನೇಷನ್, ಕೀಟನಾಶಕ ಸಿಂಪಡಿಕೆ ಕಾರ್ಯ ಕೂಡ ನಡೆಯುತ್ತಿದೆ.

ಸಾರ್ವಜನಿಕರಿಂದ ಉತ್ತಮ ಸಹಕಾರ: ಮಳೆ‌ ಹಾಗೂ ಪ್ರವಾಹದಲ್ಲಿ‌‌ ಸಾರ್ವಜನಿಕರು , ಅನೇಕ‌ ಸಂಘ ಸಂಸ್ಥೆಗಳು ಪರಿಹಾರ ಕಾರ್ಯಕ್ಕೆ ಕೈ ಜೋಡಿಸಿದ್ದಾರೆ. ಇವರಿಗೆ ಜಿಲ್ಲಾಡಳಿತ ಅಭಿನಂದನೆ ಸಲ್ಲಿಸುತ್ತದೆ ಎಂದು ತಿಳಿಸಿದ್ದಾರೆ.

ಕಿಟ್​ ವಿತರಿಸಿದ ಈಸ್ಟ್ ವೆಸ್ಟ್ ಟೂರಿಸ್ಟ್ ಮಾಲೀಕ: ಪ್ರವಾಹ ಸಂತ್ರಸ್ತರಿಗೆ ದಿನ ಬಳಕೆ ವಸ್ತುಗಳ ಕಿಟ್​ ವಿತರಿಸಿ ಮಾತನಾಡಿದ ಮಲೆನಾಡಿನ ಪ್ರಸಿದ್ದ ಈಸ್ಟ್ ವೆಸ್ಟ್ ಟೂರಿಸ್ಟ್ ನ ಮಾಲೀಕ ತಲ್ಕಿನ್ ಅಹಮದ್, ಪ್ರವಾಹ ನಂತರದ ದಿನಗಳು ನಿಜಕ್ಕೂ ಕಷ್ಟಕರ. ಪ್ರತಿಯೊಂದು ವಸ್ತುವಿಗೂ ಅವರು ಪರಿತಪಿಸುವ ಸ್ಥಿತಿ ಎದುರಾಗಿದೆ. ಆಯಾ ಜಿಲ್ಲಾಡಳಿತ ನಿರಾಶ್ರಿತರಿಗೆ ಗಂಜಿ ಕೇಂದ್ರ ತೆರೆದು ಊಟ, ತಿಂಡಿ ವಿತರಿಸುವ ಕೆಲಸ ಮಾಡುತ್ತದೆ. ಇನ್ನೂ ದಾನಿಗಳು ಮುಂದೆ ಬಂದು ಸಹಾಯ ಹಸ್ತ ಚಾಚಬೇಕು ಎಂದು ವಿನಂತಿಸಿಕೊಂಡರು.

Intro:ನೆರೆ ಶಾಶ್ವತ ಪರಿಹಾರ ಹಾಗೂ ಪುನರ್ವಸತಿ ಕಾರ್ಯ ಚುರುಕು- ಡಿಸಿ. ಶಿವಕುಮಾರ್.

ಶಿವಮೊಗ್ಗ: ಜಿಲ್ಲೆಯಲ್ಲಿ ಅತಿವೃಷ್ಟಿ ಹಾಗೂ ನೆರೆಯಿಂದಾಗಿ ಉಂಟಾಗಿರುವ ಹಾನಿಯನ್ನು ಅಂದಾಜಿಸಲಾಗುತ್ತಿದ್ದು, ಪರಿಹಾರ ಮತ್ತು ಪುನರ್ವಸತಿ ಕಾರ್ಯವನ್ನು ವ್ಯವಸ್ಥಿತವಾಗಿ ನಡೇಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಶಿವಕುಮಾರ್ ತಿಳಿಸಿದ್ದಾರೆ. ತಮ್ಮ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ನೆರೆಯಿಂದ ಜಿಲ್ಲೆಯಲ್ಲಿ ಸುಮಾರು 5.500 ಕುಟುಂಬಗಳು ನೆರೆ ಬಾಧಿತ ಎಂದು ಗುರುತಿಸಲಾಗಿದೆ. ಇದರಲಿ‌ 2.400 ಕುಟುಂಬಗಳಿಗೆ ಈಗಾಗಲೇ ತುರ್ತು ಪರಿಹಾರವಾಗಿ ತಲಾ 10 ಸಾವಿರ ರೂ ಗಳನ್ನು ಅವರ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗಿದೆ ಎಂದರು. ಜಿಲ್ಲೆಯಲ್ಲಿ ಮಳೆಯಿಂದ 492 ಮನೆಗಳು ಸಂಪೂರ್ಣ ಹಾನಿಯಾಗಿವೆ. ಪೂರ್ಣ ಹಾನಿಯಾದ ಮನೆಗಳ ನಿರ್ಮಾಣಕ್ಕೆ 5 ಲಕ್ಷ ರೂಗಳನ್ನು, ಸಣ್ಣ ಪುಟ್ಟ ಹಾನಿಗೆ 25 ಸಾವಿರ ಹಾಗೂ ಭಾಗಶಃ ಹಾನಿಗೆ 1 ಲಕ್ಷ ರೂ ನೀಡಲಾಗುತ್ತಿದೆ.

Body:ಜಿಲ್ಲೆಯಲ್ಲಿ ಸುಮಾರು 3 ಸಾವಿರ ಮನೆಗಳು ಭಾಗಶಃ ಹಾನಿಯಾಗಿವೆ. ಯಾರಿಗೆ ಮನೆ ಕಟ್ಟಲು ಕಷ್ಟವಾಗುತ್ತದೆಯೋ ಅವರಿಗೆ ಜಿಲ್ಲಾಡಳಿತದ ವತಿಯಿಂದ ಮನೆ ನಿರ್ಮಿಸಿ ಕೊಡಲಾಗುವುದು ಎಂದರು.ಯಾರು ಬಾಡಿಗೆ ಮನೆಯಲ್ಲಿ ಇದ್ದು, ಅವರ ಮನೆ ಮಳೆಯಿಂದ ಹಾನಿಯಾಗಿದೆಯೇ ಅವರು ಬೇರೆ ಮನೆಯಲ್ಲಿ ಬಾಡಿಗೆ ಇರಲು‌ 10 ತಿಂಗಳ ಬಾಡಿಗೆಯನ್ನು ಸರ್ಕಾರ ಭರಿಸಲಿದೆ ಎಂದು ತಿಳಿಸಿದ್ದಾರೆ. ಬಾಡಿಗೆ ಮನೆಯಲ್ಲಿ ಮನೆ ಕಳೆದು ಕೊಂಡಿದ್ದರೂ ಅವರ ಮಾಹಿತಿ ಸಂಗ್ರಹ ಮಾಡಲಾಗುತ್ತಿದೆ ಎಂದರು.

ಹಾನಿಯ ವಿವರ: ಜಿಲ್ಲೆಯಲ್ಲಿ ಅತಿವೃಷ್ಟಿ ಹಾಗೂ ಪ್ರವಾಹದಿಂದ 70 ಜಾನುವಾರುಗಳು ಸಾವನ್ನಪ್ಪಿವೆ. 23 ಸಾವಿರ ಕೋಳಿಗಳು ಸಾವಿಗಿಡಾಗಿವೆ. ಮೃತ ಜಾನುವಾರು ಮಾಲೀಕರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಹಣ ಜಮಾವಣೆ ಮಾಡಲಾಗಿದೆ. ಪ್ರವಾಹಕ್ಕೆ 10 ಮಂದಿ ಸಾವನ್ನಪ್ಪಿದ್ದಾರೆ. ಇವರ ಕುಟುಂಬಗಳಿಗೆ 5 ಲಕ್ಷ ಪರಿಹಾರವನ್ನು ನೀಡಲಾಗಿದೆ. ಕುಮದ್ವತಿ ನದಿಯಲ್ಲಿ ಕೊಚ್ಚಿ ಹೋದ ಇಬ್ಬರ ಶವಕ್ಕಾಗಿ ಹುಡುಕಾಟ ನಡೆಸಲಾಗುತ್ತಿದೆ. ಕಾಣೆಯಾದವರ ಕುಟುಂಬಗಳಿಗೆ ಪರಿಹಾರ ನೀಡುವ ಕುರಿತು ಇನ್ನೇರಡು ದಿನಗಳಲ್ಲಿ ನಿರ್ಧಾರ ಮಾಡಲಾಗುವುದು ಎಂದರು.

Conclusion:ಸಾಂಕ್ರಮಿಕ ರೋಗಳು ಹರಡದಂತೆ ಎಚ್ಚರಿಕೆ ವಹಿಸಲಾಗಿದೆ. ಈ ಕುರಿತು ಆರೋಗ್ಯ ಇಲಾಖೆಗೆ ಸೂಕ್ತ ನಿರ್ದೇಶನ ನೀಡಲಾಗಿದೆ. ಕ್ಲೋರಿನೇಶನ್, ಕೀಟನಾಶಕ ಸಿಂಪಡಿಕೆ ಕಾರ್ಯ ನಡೆಯುತ್ತಿದೆ.

ಸಾರ್ವಜನಿಕರಿಂದ ಉತ್ತಮ ಸಹಕಾರ: ಮಳೆ‌ ಹಾಗೂ ಪ್ರವಾಹದಲ್ಲಿ‌‌ ಸಾರ್ವಜನಿಕರು , ಅನೇಕ‌ ಸಂಘ ಸಂಸ್ಥೆಗಳು ಪರಿಹಾರ ಕಾರ್ಯಕ್ಕೆ ಕೈ ಜೋಡಿಸಿದ್ದಾರೆ. ಇವರಿಗೆ ಜಿಲ್ಲಾಡಳಿತ ಅಭಿನಂದನೆ ಸಲ್ಲಿಸುತ್ತದೆ ಎಂದು ತಿಳಿಸಿದ್ದಾರೆ.

ಬೈಟ್: ಶಿವಕುಮಾರ್. ಜಿಲ್ಲಾಧಿಕಾರಿ.‌ಶಿವಮೊಗ್ಗ.

ಕಿರಣ್ ಕುಮಾರ್. ಶಿವಮೊಗ್ಗ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.