ಶಿವಮೊಗ್ಗ: ಜಿಲ್ಲೆಯಲ್ಲಿ 2022ನೇ ಸಾಲಿನಲ್ಲಿ ವಾರ್ಷಿಕವಾಗಿ 238 ಪ್ರಕರಣಗಳನ್ನು ಭೇದಿಸಿ, ಸುಮಾರು 3,80,91,328 ರೂ ಗಳ ಬಂಗಾರ, ಬೆಳ್ಳಿ ಸೇರಿದಂತೆ ವಿವಿಧ ವಸ್ತುಗಳನ್ನು ಜಿಲ್ಲಾ ಪೊಲೀಸರು, ಅವುಗಳ ಮಾಲೀಕರಿಗೆ ಹಸ್ತಾಂತರ ಮಾಡಿದ್ದಾರೆ.
ಶಿವಮೊಗ್ಗದ ಡಿಎಆರ್ ಮೈದಾನದಲ್ಲಿ ನಡೆದ ಪೊಲೀಸ್ ಇಲಾಖೆಯ ವಾರ್ಷಿಕ ರಿಕವರಿಯಲ್ಲಿ ವಿವಿಧ ಕಳವು ಪ್ರಕರಣದಲ್ಲಿ ವಸ್ತುಗಳನ್ನು ಕಳೆದುಕೊಂಡವರಿಗೆ ಕೋರ್ಟ್ ನಿರ್ದೇಶನದಂತೆ ಹಿಂತಿರುಗಿಸಲಾಯಿತು.
ಪ್ರಸಕ್ತ ವರ್ಷದಲ್ಲಿ ಒಟ್ಟು 633 ಸ್ವತ್ತು ಪ್ರಕರಣಗಳು ನಡೆದಿವೆ. ಇದರಲ್ಲಿ 1 ಲಾಭಕ್ಕಾಗಿ ಕೊಲೆ, 5 ದರೋಡೆ, 24 ಸುಲಿಗೆ, 56 ಕಳವು, 46 ಸಾಮಾನ್ಯ ಕಳವು, 4 ಜಾನುವಾರು ಕಳವು, 99 ವಾಹನ ಕಳವು, 5 ವಂಚನೆ ಪ್ರಕರಣಗಳು ಸೇರಿದಂತೆ ಒಟ್ಟು 238 ಪ್ರಕರಗಳನ್ನು ಭೇದಿಸಲಾಗಿದೆ. ಇದರಲ್ಲಿ 2,80,91,328 ಕೋಟಿಗಳ ಬಂಗಾರದ ಆಭರಣಗಳು, ಬೆಳ್ಳಿಯ ಆಭರಣಗಳು, ಮೊಬೈಲ್ ಪೋನ್, ವಾಹನಗಳು, ಜಾನುವಾರು, ನಗದು, ಎಲೆಕ್ಟ್ರಾನಿಕ್ ವಸ್ತುಗಳು, ಅಡಕೆ ಮತ್ತು ಇತರ ವಸ್ತುಗಳನ್ನು ವಶಕ್ಕೆ ಪಡೆದು ಮಾಲೀಕರಿಗೆ ನೀಡಲಾಗಿದೆ.
ಅಲ್ಲದೆ, ಕಳೆದ ವರ್ಷದಲ್ಲಿ ನಡೆದಿದ್ದ ಪ್ರಕರಣಗಳಲ್ಲಿ 4 ಸುಲಿಗೆ, 12 ಕಳವು, 9 ಸಾಮಾನ್ಯ ಹಾಗೂ 20 ವಾಹನ ಕಳವು ಸೇರಿ ಒಟ್ಟು 45 ಪ್ರಕರಣಗಳನ್ನು ಪತ್ತೆ ಮಾಡಲಾಗಿದೆ. ನಿನ್ನೆ ನಡೆದ ರಿಕವರಿ ವಸ್ತುಗಳ ಹಸ್ತಾಂತರ ಕಾರ್ಯಕ್ರಮದಲ್ಲಿ ದೇವಾಲಯದ ಬೆಳ್ಳಿ ಆಭರಣಗಳು, ಸರ ಅಪಹರಣ ಪ್ರಕರಣದವರು ಬಂದು ವಸ್ತುಗಳನ್ನು ಪಡೆದು ಸಂತೋಷದಿಂದ ವಾಪಸ್ ಆಗಿದ್ದಾರೆ.
ಚಂದ್ರಗ್ರಹಣದ ಸಮಯದಲ್ಲಿ ಹೊಸನಗರದ ಹೋಬಳಿಯ ಶನೇಶ್ವರ ದೇವಾಲಯದಲ್ಲಿ ಆಭರಣವನ್ನು ನೀರಿನಲ್ಲಿಟ್ಟಾಗ ಕಳ್ಳತನವಾಗಿತ್ತು, ಇದನ್ನು ಪೊಲೀಸರು ರಿಕವರಿ ಮಾಡಿಕೊಟ್ಟಿದ್ದಕ್ಕೆ ಪೂಜಾರಿ ದೇವರಾಜ್ ಸಂತೋಷ ವ್ಯಕ್ತಪಡಿಸಿದ್ದಾರೆ.
ಜನರೂ ಸಹ ತಮ್ಮ ಸುರಕ್ಷತೆಯಲ್ಲಿ ಇರಬೇಕು. ಅಂಗಡಿ ಮಾಲೀಕರು ತಾವೇ ಸಿಸಿ ಕ್ಯಾಮರಾ ಅಳವಡಿಸಿಕೊಳ್ಳಬೇಕು. ಇಷ್ಟೊಂದು ಪ್ರಮಾಣದ ವಸ್ತು ರಿಕವರಿ ಮಾಡಿದ ತಮ್ಮ ಸಿಬ್ಬಂದಿ ಕೆಲಸವನ್ನು ಎಸ್ಪಿ ಮಿಥುನ್ ಕುಮಾರ್ ಶ್ಲಾಘಿಸಿದರು.
ಇದನ್ನೂ ಓದಿ: ಗೋಲ್ಡ್ ರಿಕವರಿ ಹೆಸರಿನಲ್ಲಿ ಕಿರುಕುಳ ಆರೋಪ: ತಮಿಳುನಾಡು ಪೊಲೀಸರನ್ನು ಕೂಡಿಹಾಕಿದ ಸ್ಥಳೀಯರು