ಶಿವಮೊಗ್ಗ: ಮಿಲಿಗ್ರಾಂ ತೂಕದ ಕಲಾಕೃತಿಗಳೆಂದ್ರೆ ಒಂದು ಅಕ್ಕಿ ಕಾಳು ಗಾತ್ರ. ಇಷ್ಟು ಸೂಕ್ಷ್ಮ ಕಲಾಕೃತಿ ನಿರ್ಮಾಣ ಮಾಡುವುದು ಅತ್ಯಂತ ಕಷ್ಟಕರ ಕೆಲಸ. ಆದರೆ ಶ್ರೀರಾಮಚಂದ್ರನ ಜನ್ಮದಿನ ಶ್ರೀರಾಮನವಮಿ ಅಂಗವಾಗಿ ಭದ್ರಾವತಿಯ ಮೈಕ್ರೋ ಆರ್ಟಿಸ್ಟ್ ಕಲಾವಿದ ರವಿಚಂದ್ರ ಅವರು 13.4 ಮಿಲಿ ಗ್ರಾಂದಲ್ಲಿ ಶ್ರೀರಾಮನ ಕಲಾಕೃತಿ ತಯಾರಿಸಿ ಜನರ ಮೆಚ್ಚುಗೆ ಪಡೆದಿದ್ದಾರೆ.
ರಾಮಾಂಜನೇಯರ ಕಲಾಕೃತಿ: ಕಲಾವಿದ ರವಿಚಂದ್ರ ಅವರು 13.4 ಮಿಲಿ ಗ್ರಾಂ ದಲ್ಲಿ ಶ್ರೀರಾಮನ ಕಲಾಕೃತಿಯನ್ನು 4 ಮಿಲಿಮೀಟರ್ ಎತ್ತರ ಹಾಗೂ 2 ಮಿಲಿಮೀಟರ್ ಅಳತೆಯಲ್ಲಿ ತಯಾರು ಮಾಡಿದ್ದಾರೆ. 6 ಮಿಲಿ ಗ್ರಾಂ ದಲ್ಲಿ ಆಂಜನೇಯನ ಕಲಾಕೃತಿಯನ್ನು ಸಹ ಸಿದ್ಧಗೊಳಿಸಿದ್ದಾರೆ. ಕಲಾವಿದ ರವಿಚಂದ್ರ ಅವರ ಕೈಚಳಕದಲ್ಲಿ ಸಿದ್ಧಗೊಂಡಿರುವ ಜಗತ್ತಿನ ಅತಿ ಸಣ್ಣ ರಾಮಾಂಜನೇಯರ ಕಲಾಕೃತಿಗಳು ಇವಾಗಿವೆ.
ಚಿನ್ನದ ಅಂಗಡಿ ಇಟ್ಟುಕೊಂಡಿರುವ ಕಲಾವಿದ: ಭದ್ರಾವತಿ ಪಟ್ಟಣದ ನಿವಾಸಿ ಕಲಾವಿದ ರವಿಚಂದ್ರ ಅವರು, ಹಳೆ ಭದ್ರಾವತಿಯಲ್ಲಿ ಗೋಲ್ಡ್ ಸ್ಮಿತ್ ಅಂಗಡಿಯನ್ನುಇಟ್ಟುಕೊಂಡಿದ್ದಾರೆ. ಶ್ರೀರಾಮನ ಜಯಂತಿ ಪ್ರಯುಕ್ತ ರವಿಚಂದ್ರ ಅವರು ಶ್ರೀರಾಮನ ಕಲಾಕೃತಿ ತಯಾರು ಮಾಡಿದ್ದಾರೆ. ಎಲ್ಲಿ ರಾಮ ಇರುವನು ಅಲ್ಲೇ ಹನುಮನು ಎಂಬಂತೆ ರಾಮನ ಜೊತೆ ಆಂಜನೇಯನನ್ನು ಸಹ ನಿರ್ಮಾಣ ಮಾಡಿದ್ದಾರೆ.
ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ಶ್ರೀರಾಮಾಂಜನೇಯರನ್ನು ಪ್ರತಿಷ್ಠಾಪಿಸಿದ ಬಳಿಕ ಸ್ಫೂರ್ತಿಗೊಂಡ ರವಿಚಂದ್ರ ಅವರು, ಶ್ರೀರಾಮ ಜನ್ಮಾಷ್ಟಮಿಗೆ ಕಲಾಕೃತಿಗಳನ್ನು ಸಿದ್ಧಗೊಳಿಸಿದ್ದಾರೆ. ರವಿಚಂದ್ರ ಅವರಿಗೆ ಈ ರೀತಿಯ ಕಲಾಕೃತಿಗಳನ್ನು ನಿರ್ಮಾಣ ಮಾಡುವುದು ಒಂದು ಹವ್ಯಾಸವಾಗಿದೆ.
ಕಲಾಕೃತಿ 20 ದಿನಗಳಲ್ಲಿ ತಯಾರಿಸುವ ಕಲಾವಿದ: ರವಿಚಂದ್ರ ಈ ರೀತಿಯ ಕಲಾಕೃತಿಗಳನ್ನು ಕೇವಲ 20 ದಿನಗಳಲ್ಲಿ ನಿರ್ಮಾಣ ಮಾಡುತ್ತಾರೆ. ಈ ಕಲಾಕೃತಿ ನಿರ್ಮಾಣಕ್ಕೆ ತಮ್ಮ ಎಲ್ಲ ಕೆಲಸ ಕಾರ್ಯ ಬಿಟ್ಟು ಇದರಲ್ಲಿ ತೂಡಗಿಸಿಕೊಂಡಿದ್ದರು. ಏಕಾಗ್ರತೆಯಿಂದ ಮೈಗೂಡಿಸಿಕೊಂಡು, ಕಲಾಕೃತಿ ನಿರ್ಮಾಣ ಮಾಡಲು ವಿಶೇಷ ಮಸೂರವನ್ನು ಬಳಸುತ್ತಾರೆ. ಇದನ್ನು ಬರಿಗಣ್ಣಿನಿಂದ ನೋಡಲು ಆಗುವುದಿಲ್ಲ. ಅಂತಹ ಮಸೂರ ಬಳಸಬೇಕಾಗುತ್ತದೆ. ದೊಡ್ಡ ಗಾತ್ರದ ವಿಗ್ರಹ, ಪುತ್ಥಳಿಯನ್ನು ನಿರ್ಮಾಣ ಮಾಡಬಹುದು. ಆದರೆ ಮಿಲಿ ಗ್ರಾಂ ಗಾತ್ರದಲ್ಲಿ ಕಲಾಕೃತಿಗಳ ನಿರ್ಮಾಣವನ್ನು ಯಾರು ಮಾಡುವುದಿಲ್ಲ.
ಈ ರೀತಿಯ ಕಲಾಕೃತಿ ನಿರ್ಮಾಣದಲ್ಲಿ ತಮ್ಮನ್ನು ತೂಡಗಿಸಿಕೊಂಡಿದ್ದು, ಇದರಿಂದ ಮಿಲಿ ಗ್ರಾಂ ತೂಕದಲ್ಲಿ ಕಲಾಕೃತಿಯನ್ನು ನಿರ್ಮಾಣ ಮಾಡಿರುವೆ ಎಂದು ಮೈಕ್ರೂ ಆರ್ಟಿಸ್ಟ್ ರವಿಚಂದ್ರ ಅವರು ಈಟಿವಿ ಭಾರತ'ಕ್ಕೆ ತಿಳಿಸಿದ್ದಾರೆ.
ಕಲಾಕೃತಿ ಮೂಗುತಿ ತಿರುಪಿನ ಗಾತ್ರಕ್ಕಿಂತ ಸಣ್ಣದು: ರವಿಚಂದ್ರ ಅವರು ಪ್ರತಿಭಾವಂತ ಕಲಾವಿದರು. ಇವರು ಈಗ ನಿರ್ಮಿಸಿರುವ ಕಲಾಕೃತಿಗಳು ಮಹಿಳೆಯರು ಧರಿಸುವ ಮೂಗುತಿಯ ತಿರುಪಿನ ಗಾತ್ರಕ್ಕಿಂತ ಸಣ್ಣದಾಗಿದೆ. ಈ ಕಲಾಕೃತಿಗಳನ್ನು ಮೈಕ್ರೋ ಸ್ಕೋಪ್ ದಲ್ಲಿ ತಯಾರು ಮಾಡಿದ್ದಾರೆ.
ಅವರ ಕಲೆಯನ್ನು ಭದ್ರಾವತಿಯ ಇನ್ನೂ ಇಬ್ಬರು ಯುವಕರು ಕಲಿತು ರಚನೆಯಲ್ಲಿ ತೂಡಗಿಕೊಂಡಿದ್ದಾರೆ. ರವಿಚಂದ್ರ ಈ ಕಲೆಯಲ್ಲಿ ಬೆಳೆಯಲಿ.. ದೇಶದ್ಯಾಂತ ಪ್ರಸಿದ್ಧಿ ಪಡೆಯಲಿ ಎಂದು ರವಿಚಂದ್ರ ಅವರ ಸ್ನೇಹಿತ ಸುರೇಂದ್ರ ಜೈನ್ ತಿಳಿಸಿದ್ದಾರೆ.
ಈ ಹಿಂದೆ ಮಿಲಿ ಗ್ರಾಂ ಗಾತ್ರದ ಟೇಬಲ್ ಫ್ಯಾನ್, ಕ್ರಿಕೆಟ್ ವಲ್ರ್ಡ್ ಕಪ್, ಮೆಕ್ಕಾ ಮದಿನಾ, ಏಸುಕ್ರಿಸ್ತ, ಶಿವಕುಮಾರ ಸ್ವಾಮೀಜಿ. ಪ್ರಧಾನಿ ನರೇಂದ್ರ ಮೋದಿ ಅವರ ಕಲಾಕೃತಿ ನಿರ್ಮಾಣ ಮಾಡಿ ಭೇಷ್ ಅನ್ನಿಸಿಕೊಂಡಿದ್ದಾರೆ. ರವಿಚಂದ್ರ ಅವರು ಮೈಕ್ರೋ ಕಲೆಯಲ್ಲಿ ಇನ್ನಷ್ಟು ಕಲಾಕೃತಿಗಳನ್ನು ರಚಿಸಿ, ಯುವಕರಿಗೆ ಸ್ಫೂರ್ತಿ ಆಗಲಿ ಎಂದು ಈಟಿವಿ ಭಾರತ ಕಡೆಯಿಂದ ಹಾರೈಸುತ್ತೇವೆ.
ಇದನ್ನೂಓದಿ:ಮಲೆಮಹದೇಶ್ವರ ದೇಗುಲದ ಹುಂಡಿ ಎಣಿಕೆ: 22 ದಿನಕ್ಕೆ 1.82 ಕೋಟಿ ರೂಪಾಯಿ ಸಂಗ್ರಹ