ETV Bharat / state

ಪ್ರಧಾನಿ ಮೋದಿ ಕರೆಯಿಂದ ದೇಶ ಸುರಕ್ಷಿತ: ಸಚಿವ ಈಶ್ವರಪ್ಪ - ಮೋದಿ ಕರೆ

ಪ್ರಧಾನಿ ಕರೆಗೆ ದೇಶದಲ್ಲಿ ಉತ್ತಮ ರೀತಿಯ ಸ್ಪಂದನೆ ದೊರೆತಿದೆ. ಇದರಿಂದ ಕೊರೊನಾ ತಡೆ ಸಾಧ್ಯವಾಗುತ್ತಿದೆ. ಇದಕ್ಕಾಗಿ ಶ್ರಮಿಸುತ್ತಿರುವ ಎಲ್ಲಾ ಸಿಬ್ಬಂದಿಗೂ ಅಭಿನಂದನೆ ಸಲ್ಲಿಸುತ್ತೇನೆ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.

minister eshwarappa
ಸಚಿವ ಕೆ.ಎಸ್.ಈಶ್ವರಪ್ಪ
author img

By

Published : Apr 4, 2020, 5:49 PM IST

ಶಿವಮೊಗ್ಗ: ಕೇಂದ್ರದ ಕರೆಗೆ ದೇಶದ ಜನತೆ ಸ್ಪಂದಿಸಿದೆ. ಇದರಿಂದ ಮುಂದುವರೆದ ರಾಷ್ಟ್ರಗಳಲ್ಲಿ ಸಂಭವಿಸಿದ ಭೀಕರತೆ ದೇಶದಲ್ಲಿ ಸಂಭವಿಸಿಲ್ಲ. ಜನತಾ ಕರ್ಫ್ಯೂ, ಲಾಕ್​ಡೌನ್​ ಸೇರಿ ಕೇಂದ್ರದ ಕರೆಗೆ ಪ್ರತಿಕ್ರಿಯಿಸುವವರೆಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇನೆ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.

ಸಚಿವ ಈಶ್ವರಪ್ಪ

ಜಿಲ್ಲೆಯ ಆಸ್ಪತ್ರೆ ಸಿಬ್ಬಂದಿ, ಎಪಿಎಂಸಿ ಹಾಗೂ ಹಾಪ್ ​ಕಾಮ್ಸ್​​ ಸಿಬ್ಬಂದಿಗೂ ಅಭಿನಂದನೆ ತಿಳಿಸಬೇಕು. ಸಾರ್ವಜನಿಕರಿಗೆ ಅಗತ್ಯ ನೆರವನ್ನು ನೀಡುವಲ್ಲಿ ಇವರೆಲ್ಲ ಕೈಜೋಡಿಸಿದ್ದಾರೆ. ಇದರಿಂದ ಜಿಲ್ಲೆಯಲ್ಲಿ ಒಳ್ಳೆಯ ವಾತಾವರಣ ಕಾಪಾಡಿಕೊಳ್ಳಲು ಸಾಧ್ಯವಾಗಿದೆ ಎಂದು ಹೇಳಿದರು.

ಭಾನುವಾರ ಏಪ್ರಿಲ್ 5ರಂದು ರಾತ್ರಿ 9 ಗಂಟೆ 9 ನಿಮಿಷಕ್ಕೆ ದೀಪ, ಟಾರ್ಚ್​ ಬೆಳಗಿಸುವ ಮೂಲಕ ಸೋಂಕಿತರೊಂದಿಗೆ ನಾವೆಲ್ಲಾ ಇದ್ದೇವೆ ಎಂದು ಧೈರ್ಯ ತುಂಬುವ ಕೆಲಸ ಮಾಡಬೇಕು ಎಂದು ಕರೆ ನೀಡಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.