ಶಿವಮೊಗ್ಗ: ಕೊಲೆ ಪ್ರಕರಣದ ಆರೋಪಿಗೆ ಶಿಕ್ಷೆ ಕೊಡಿಸುವುದಾಗಿ ಹೇಳಿ 20 ಸಾವಿರ ರೂ. ಲಂಚ ಪಡೆಯುವಾಗ ಪಬ್ಲಿಕ್ ಪ್ರಾಸಿಕ್ಯೂಟರ್ವೊಬ್ಬರು ಎಸಿಬಿ ಅಧಿಕಾರಿಗಳ ಕೈಲಿ ರೆಡ್ಹ್ಯಾಂಡ್ ಆಗಿ ಸಿಕ್ಕಿಬಿದ್ದಿರುವ ಘಟನೆ ಭದ್ರಾವತಿಯಲ್ಲಿ ನಡೆದಿದೆ.
ಭದ್ರಾವತಿ ತಾಲೂಕು ಕೋರ್ಟ್ ನ ಪಬ್ಲಿಕ್ ಪ್ರಾಸಿಕ್ಯೂಟರ್ ಹೆಚ್. ಎಸ್. ರವೀಂದ್ರಪ್ಪ ಸಿಕ್ಕಿಬಿದ್ದ ಪಿ.ಪಿ.ಕೊಲೆ ಕೇಸ್ ಸಂಬಂಧದಲ್ಲಿ ಸುನೀಲ್ ಗಾಯಕವಾಡರ ಎಂಬುವವರಿಂದ ಲಂಚ ಸ್ವೀಕಾರ ಮಾಡುವಾಗ ಎಸಿಬಿ ಅಧಿಕಾರಿಗಳು ಕೋರ್ಟ್ ನ ಕಚೇರಿಯಲ್ಲೆ ದಾಳಿ ಮಾಡಿದ್ದಾರೆ. ಕೊಲೆ ಪ್ರಕರಣದಲ್ಲಿ ಆರೋಪಿಗೆ ಶಿಕ್ಷೆ ಕೊಡಿಸಬೇಕು ಅಂದ್ರೆ ತನಗೆ ಲಂಚ ನೀಡಬೇಕು ಎಂಬ ಬೇಡಿಕೆಯನ್ನು ರವೀಂದ್ರ ಇಟ್ಡಿದ್ದರು ಎಂದು ಸುನೀಲ್ ಗಾಯಕವಾಡ ಎಸಿಬಿಗೆ ದೂರು ನೀಡಿದ್ದರು.
ಎಸಿಬಿ, ಡಿವೈಎಸ್ಪಿ ವೇಣುಗೋಪಾಲ್ ರವರ ನೇತೃತ್ವದಲ್ಲಿ ಇನ್ಸ್ ಪೆಕ್ಟರ್ ತೀಪ್ಪೆಸ್ವಾಮಿ ಹಾಗೂ ಅವರ ತಂಡ ದಾಳಿ ಮಾಡಿ, ರವೀಂದ್ರಪ್ಪರನ್ನು ಲಂಚ ಪಡೆದ ಆರೋಪದಡಿ ಬಂಧಿಸಿದ್ದಾರೆ.