ETV Bharat / state

ಶಾಲೆಯ ಪರವಾನಗಿ ರದ್ದು ಮಾಡಲು ಆಗ್ರಹಿಸಿ ಪ್ರತಿಭಟನೆ

ಸರ್ಕಾರದ ನಿಯಮಗಳನ್ನು ಮೀರಿ ನಡೆದುಕೊಂಡು ವಿದ್ಯಾರ್ಥಿಗಳ ಜೀವನಕ್ಕೆ ಮಾರಕವಾಗಿರುವ ಭದ್ರಾವತಿಯ ಪೂರ್ಣ ಪ್ರಜ್ಞ ಶಾಲೆಯ ಪರವಾನಗಿ ರದ್ದುಪಡಿಸಬೇಕೆಂದು ಪ್ರತಿಭಟನೆ ನಡೆಸಲಾಯಿತು.

ಶಾಲೆಯ ಪರವಾನಿಗೆ ರದ್ದು ಮಾಡಲು ಆಗ್ರಹ
author img

By

Published : Mar 13, 2019, 9:32 PM IST

ಶಿವಮೊಗ್ಗ: ಭದ್ರಾವತಿ ಪೂರ್ಣ ಪ್ರಜ್ಞ ಶಾಲೆಯ ಪರವಾನಗಿ ರದ್ದುಪಡಿಸಬೇಕೆಂದು ಒತ್ತಾಯಿಸಿ ಭದ್ರಾವತಿ ಪ್ರಗತಿಪರ ಸಂಘಟನೆ ಒಕ್ಕೂಟದ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.

2018 -19 ನೇ ಸಾಲಿನಲ್ಲಿ ಕೈಗೊಂಡ ಶೈಕ್ಷಣಿಕ ಪ್ರವಾಸದ ಸಂದರ್ಭದಲ್ಲಿ ಸರ್ಕಾರದ ನಿಯಮಗಳನ್ನು ಉಲ್ಲಂಘಿಸಿ ಬಸ್ ಅಪಘಾತಕ್ಕೆ ಕಾರಣವಾಗಿ ವಿದ್ಯಾರ್ಥಿಗಳ ಭವಿಷ್ಯಕ್ಕೆ ಮಾರಕವಾದ ಪೂರ್ಣ ಪ್ರಜ್ಞ ಶಾಲೆಯ ಪರವಾನಗಿ ರದ್ದು ಮಾಡಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಶಾಲೆಯ ಪರವಾನಿಗೆ ರದ್ದು ಮಾಡಲು ಆಗ್ರಹ

2018ರ ನವಂಬರ್ 10ರಂದು ಪೂರ್ಣ ಪ್ರಜ್ಞಾ ಶಾಲೆಯ ಮಕ್ಕಳನ್ನು ಪ್ರವಾಸಕ್ಕೆ ಕರೆದುಕೊಂಡು ಹೋದ ಸಂದರ್ಭದಲ್ಲಿ ಹತ್ತಾರು ಮಂದಿ ವಿದ್ಯಾರ್ಥಿಗಳು ಗಾಯಗೊಂಡಿದ್ದರು. ದಿಯಾ ಶೇಖಾವತ್ ಎಂಬ ವಿದ್ಯಾರ್ಥಿನಿ ಸ್ಥಳದಲ್ಲೇ ಮೃತಪಟ್ಟಿದ್ದು, ನಂದಿನಿ ಎಂಬ ವಿದ್ಯಾರ್ಥಿನಿಯ ಬಲಗೈ ಸಂಪೂರ್ಣ ತುಂಡಾಗಿ ಎಡಗೈಗೆ ಗಂಭೀರ ಗಾಯವಾಗಿತ್ತು. ಇದರಿಂದ ಆಕೆ ಎರಡು ಕೈ ಇಲ್ಲದೆ ಶಾಶ್ವತ ಅಂಗವಿಕಲತೆ ಅನುಭವಿಸಬೇಕಾಯಿತು ಎಂದು ಪ್ರತಿಭಟನಾಕಾರರು ದೂರಿದರು.

ಇನ್ನು ಶಾಲೆಯು ಶೈಕ್ಷಣಿಕ ಪ್ರವಾಸ ಸಂದರ್ಭದಲ್ಲಿ ಸರ್ಕಾರಿ ವಾಹನ ಬಳಸಬೇಕೆಂಬ ನಿಯಮವನ್ನು ಉಲ್ಲಂಘಿಸಿದೆ. ಅಷ್ಟೇ ಅಲ್ಲದೇ ಶಿಕ್ಷಣ ಇಲಾಖೆಯ ಅನುಮತಿ ಪಡೆದುಕೊಳ್ಳದೆ, ಪೋಷಕರ ಅನುಮತಿ ಸಹ ಪಡೆದುಕೊಳ್ಳದೆ ಪ್ರವಾಸ ಕೈಗೊಂಡು ಶಾಲೆಯ ಆಡಳಿತ ಮಂಡಳಿಯ ನಿರ್ಲಕ್ಷ್ಯ ಮೆರೆದಿದೆ ಎಂದು ದೂರಿದರು.

Intro:ಶಿವಮೊಗ್ಗ,
ಭೀಮಾನಾಯ್ಕ ಎಸ್
ಭದ್ರಾವತಿ ಪೂರ್ಣ ಪ್ರಜ್ಞ ಶಾಲೆಯ ಪರವಾನಿಗೆ ರದ್ದುಪಡಿಸಬೇಕೆಂದು ಒತ್ತಾಯಿಸಿ ಭದ್ರಾವತಿ ಪ್ರಗತಿಪರ ಸಂಘಟನೆ ಒಕ್ಕೂಟದ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.

Body:2018 _19 ನೇ ಸಾಲಿನಲ್ಲಿ ಕೈಗೊಂಡ ಶೈಕ್ಷಣಿಕ ಪ್ರವಾಸದ ಸಂದರ್ಭದಲ್ಲಿ ಸರ್ಕಾರದ ನಿಯಮಗಳನ್ನು ಉಲ್ಲಂಘಿಸಿ ಬಸ್ ಅಪಘಾತಕ್ಕೆ ಕಾರಣ ವಾಗಿ ವಿದ್ಯಾರ್ಥಿಗಳ ಭವಿಷ್ಯಕ್ಕೆ ಮಾರಕವಾದ ಪೂರ್ಣ ಪ್ರಜ್ಞ ಶಾಲೆಯ ಪರವಾನಿಗೆ ರದ್ದು ಮಾಡಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು.
2018 ರ ನವಂಬರ್ 10ರಂದು ಪೂರ್ಣಪ್ರಜ್ಞಾ ಶಾಲೆಯ ಮಕ್ಕಳನ್ನು ಪ್ರವಾಸಕ್ಕೆ ಕರೆದುಕೊಂಡು ಹೋದ ಸಂದರ್ಭದಲ್ಲಿ ಹತ್ತಾರು ಮಂದಿ ವಿದ್ಯಾರ್ಥಿಗಳು ಗಾಯಗೊಂಡಿದ್ದರು ದಿಯಾ ಶೇಖಾವತ್ ಎಂಬ ವಿದ್ಯಾರ್ಥಿನಿ ಸ್ಥಳದಲ್ಲೇ ಮೃತಪಟ್ಟು ನಂದಿನಿ ಎಂಬ ವಿದ್ಯಾರ್ಥಿನಿಯ ಬಲಗೈ ಸಂಪೂರ್ಣ ತುಂಡಾಗಿ ಎಡಗೈಗೆ ಗಂಭೀರ ವಾಗಿವಾಗಿತ್ತು.
ಎರಡು ಕೈ ಇಲ್ಲದೆ ಶಾಶ್ವತ ಅಂಗವಿಕಲತೆಯಿಂದ ವಿದ್ಯಾರ್ಥಿ ವಿಕಲತೆ ಯಿಂದ ಭವಿಷ್ಯವೇ ಇಲ್ಲದಂತಾಗಿದೆ ಎಂದು ಪ್ರತಿಭಟನಾಕಾರರು ದೂರಿದರು.

Conclusion:ಶಾಲೆಯ ಆಡಳಿತ ಮಂಡಳಿಯ ನಿರ್ಲಕ್ಷ್ಯವೇ ಇದಕ್ಕೆ ಕಾರಣ ಶೈಕ್ಷಣಿಕ ಪ್ರವಾಸ ಸಂದರ್ಭದಲ್ಲಿ ಸರ್ಕಾರಿ ವಾಹನ ಬಳಸಬೇಕೆಂಬ ನಿಯಮವನ್ನು ಉಲ್ಲಂಘಿಸಲಾಗಿದೆ ಶಿಕ್ಷಣ ಇಲಾಖೆಯ ಅನುಮತಿ ಪಡೆದುಕೊಳ್ಳದೆ.ಪೋಷಕರ ಅನುಮತಿ ಸಹ ಪಡೆದುಕೊಳ್ಳದೆ ,ಪ್ರವಾಸ ಕೈಗೊಂಡಿದ್ದರು ಎಂದು ತಿಳಿಸಿದರು.
ಈ ಕುರಿತು ಅನೇಕ ಬಾರಿ ತಸಿಲ್ದಾರ್ ಅವರಿಗೆ ಮನವಿ ಮಾಡಿದ್ದ ಸಂದರ್ಭದಲ್ಲಿ ಶಾಲೆಯ ಆಡಳಿತ ಮಂಡಳಿಗೆ ತಿಳುವಳಿಕೆ ಪತ್ರ ನೀಡಿ ಸಭೆಗೆ ಹಾಜರಾಗಲು ಸೂಚನೆ ನೀಡಿದ್ದರು ಸಭೆಗೆ ಭಾಗವಹಿಸಲು ನಿರ್ಲಕ್ಷ ತೋರಲಾಗಿದೆ ಹಿನ್ನೆಲೆಯಲ್ಲಿ ಶಾಲೆಯ ಆಡಳಿತ ಮಂಡಳಿ ವಿರುದ್ಧ ಕ್ರಮ ಕೈಗೊಳ್ಳಬೇಕು. ಶಾಶ್ವತ ಅಂಗವಿಕಲತೆಗೆ ಒಳಗಾಗಿರುವ ವಿದ್ಯಾರ್ಥಿನಿಗೆ ಪರಿಹಾರ ದೊರಕಿಸಿಕೊಡಬೇಕು .ಹಾಗೂ ಶಾಲೆಯ ಪರವಾನಿಗೆಯನ್ನು ರದ್ದುಮಾಡಬೇಕು ಎಂದು ಪ್ರಗತಿಪರ ಸಂಘಟನೆಯ ಸದಸ್ಯರು ಆಗ್ರಹಿಸಿದರು.
ಭೀಮಾನಾಯ್ಕ ಎಸ್ ಶಿವಮೊಗ್ಗ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.