ETV Bharat / state

ಸಿಎಎಗೆ ವಿರೋಧ: ಶಿವಮೊಗ್ಗದಲ್ಲಿ ಮೇಣದ ಬತ್ತಿ ಹಿಡಿದು ಪ್ರತಿಭಟನೆ - ಶಿವಮೊಗ್ಗದಲ್ಲಿ ಮೇಣದ ಬತ್ತಿ ಹಿಡಿದ ಮುಸ್ಲಿಂ ಮಹಿಳೆಯರು

ಪೌರತ್ವ (ತಿದ್ದುಪಡಿ) ಕಾಯ್ದೆಯನ್ನು ವಿರೋಧಿಸಿ, ಶಿವಮೊಗ್ಗದಲ್ಲಿ ಮುಸ್ಲಿಂ ಮಹಿಳೆಯರು ಮೇಣದ ಬತ್ತಿ ಹಿಡಿದು ಪ್ರತಿಭಟನೆ ನಡೆಸಿದರು.

Protest in Shimoga against CAA
ಶಿವಮೊಗ್ಗದಲ್ಲಿ ಸಿಎಎ ವಿರೋಧಿಸಿ ಪ್ರತಿಭಟನೆ
author img

By

Published : Jan 27, 2020, 9:01 PM IST

ಶಿವಮೊಗ್ಗ: ಪೌರತ್ವ (ತಿದ್ದುಪಡಿ) ಕಾಯ್ದೆಯನ್ನು ವಿರೋಧಿಸಿ, ಮುಸ್ಲಿಂ ಮಹಿಳೆಯರು ಮೇಣದ ಬತ್ತಿ ಹಿಡಿದು ಪ್ರತಿಭಟನೆ ನಡೆಸಿದರು. ನಗರದ ಸರ್. ಎಂ. ವಿಶ್ವೇಶ್ವರಯ್ಯ ರಸ್ತೆಯ ಈದ್ಗಾ ಮೈದಾನದಲ್ಲಿ ಜಮಾವಣೆಗೊಂಡ ಮುಸ್ಲಿಂ ಮಹಿಳೆಯರು, ಸಿಎಎ, ಎನ್​​ಆರ್​​ಸಿ ಹಾಗೂ ಎನ್​ಪಿಆರ್​ ವಿರೋಧಿಸಿ, ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಶಿವಮೊಗ್ಗದಲ್ಲಿ ಸಿಎಎ ವಿರೋಧಿಸಿ ಪ್ರತಿಭಟನೆ

ರಾಷ್ಟ್ರಧ್ವಜವನ್ನು ಹಿಡಿದುಕೊಂಡು ನಾವು ಭಾರತೀಯರು. ನಾವೇಕೆ ಪೌರತ್ವಕ್ಕಾಗಿ ಅರ್ಜಿ ಹಾಕಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು. ಶಿವಮೊಗ್ಗದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಇಷ್ಟೊಂದು ಸಂಖ್ಯೆಯ ಮುಸ್ಲಿಂ ಮಹಿಳೆಯರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Intro:ಸಿಎಎ, ಎನ್ಆರ್ ಸಿ ಹಾಗೂ ಸಿಎಆರ್ ವಿರೋಧಿಸಿ ಶಿವಮೊಗ್ಗದಲ್ಲಿ ಮುಸ್ಲಿಂ ಮಹಿಳೆಯರು ಮೇಣದಬತ್ತಿ ಹಿಡಿದು ಕೊಂಡು ಪ್ರತಿಭಟನೆ ನಡೆಸಿದರು. ಶಿವಮೊಗ್ಗ ನಗರದ ಸರ್.ಎಂ.ವಿ.ರಸ್ತೆಯ ಈದ್ಗಾ ಮೈದಾನದಲ್ಲಿ ಜಮಾವಣೆಗೊಂಡ ಮುಸ್ಲಿಂ ಮಹಿಳೆಯರು ಸಿಎಎ, ಎನ್ ಆರ್ ಸಿ ಹಾಗೂ ಸಿಎಆರ್ ವಿರೋಧಿಸಿ ಪ್ರತಿಭಟನೆ ನಡೆಸಿದರು. ಪ್ರತಿಭಟನೆಯಲ್ಲಿ ಕೇಂದ್ರ ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಲಾಯಿತು.

Body:ಆಜಾದ್ ಘೋಷಣೆ ಹಾಕಿದ ಮುಸ್ಲಿಂ ಮಹಿಳೆಯರು ರಾಷ್ಟ್ರಧ್ವಜವನ್ನು ಹಿಡಿದು ಕೊಂಡು ನಾವು ಮೋದಿ ಕಾನೂನಿಗೆ ವಿರೋಧ ಮಾಡುವುದಾಗಿ ಘೋಷಿಸಿದರು. ನಾವು ಹಿಂದೂಸ್ಥಾನಿಗಳು ನಾವೇಕೆ ಪೌರತ್ವಕ್ಕಾಗಿ ಅರ್ಜಿ ಹಾಕಬೇಕು. ನಾವು ಭಾರತೀಯರು ಎಂದು ಆಕ್ರೋಶ ವ್ಯಕ್ತಪಡಿಸಿದರು.

Conclusion:ಎಲ್ಲಾ ಮಹಿಳೆಯರು ಸಹ ಮೇಣದಬತ್ತಿಯ ಜೊತೆ ರಾಷ್ಟ್ರಧ್ವಜ ಹಿಡಿದು ಕೊಂಡು ಪ್ರತಿಭಟನೆ ನಡೆಸಿದರು. ಶಿವಮೊಗ್ಗದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಇಷ್ಟೊಂದು ಸಂಖ್ಯೆಯಲ್ಲಿ ಮುಸ್ಲಿಂ ಮಹಿಳೆಯರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.