ETV Bharat / state

ಕಂಟೈನ್ಮೆಂಟ್​​ ವಲಯದಲ್ಲಿ ಸ್ಥಳೀಯ ನಿವಾಸಿಗಳಿಂದ ಪ್ರತಿಭಟನೆ - containment zone

ಕಂಟೈನ್ಮೆಂಟ್​​​​​ ಪ್ರದೇಶದಲ್ಲಿರುವ ನಮಗೆ ತರಕಾರಿ ಸೇರಿದಂತೆ ಇತರೆ ವಸ್ತುಗಳನ್ನು ಕೊಳ್ಳಲು ಆಗೋದಿಲ್ಲ. ಅನಾರೋಗ್ಯ ಎಂದರು ಸಹ ನಮ್ಮನ್ನು ವಿಚಾರಿಸಿಕೊಳ್ಳುವವರಿಲ್ಲ. ಇದರಿಂದ ನಾವು ನಮ್ಮ ಮನೆಯಲ್ಲೇ ನರಕ ಅನುಭವಿಸುವಂತಾಗಿದೆ ಎಂದು ಶಿಕಾರಿಪುರದ ಕಂಟೈನ್ಮೆಂಟ್​​​​​ ವಲಯದ ನಿವಾಸಿಗಳು ತಮ್ಮ ಅಳಲು ತೋಡಿಕೊಂಡಿದ್ದಾರೆ.

protest-by-local-residents-in-containment-zone
ಕಂಟೇನ್​ಮೆಂಟ್​​​ ವಲಯದಲ್ಲಿ ಸ್ಥಳೀಯ ನಿವಾಸಿಗಳಿಂದ ಪ್ರತಿಭಟನೆ
author img

By

Published : Jun 30, 2020, 4:56 PM IST

ಶಿವಮೊಗ್ಗ: ಜಿಲ್ಲೆಯ ಶಿಕಾರಿಪುರದ ಕಂಟೈನ್ಮೆಂಟ್​​​​​ ವಲಯದಲ್ಲಿ ಸ್ಥಳೀಯ ನಿವಾಸಿಗಳು ಪ್ರತಿಭಟನೆ ನಡೆಸಿದ್ದಾರೆ.

ಕಂಟೈನ್ಮೆಂಟ್​​ ವಲಯದಲ್ಲಿ ಕಳೆದ ಒಂದು ವಾರದಿಂದ ಸ್ಯಾನಿಟೈಸ್​​​ ಮಾಡಿಲ್ಲ. ಚರಂಡಿಗಳಿಗೆ ಔಷಧ ಸಿಂಪಡಣೆ ಮಾಡಿಲ್ಲ. ನಮ್ಮ ಕಷ್ಟ ಆಲಿಸಬೇಕಾದ ಪುರಸಭೆ ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿಗಳು ಇಲ್ಲಿಗೆ ಬಂದಿಲ್ಲ ಎಂದು ತಾಲೂಕಿನ ಕುಂಬಾರ ಬೀದಿಯ ನಿವಾಸಿಗಳು ಆರೋಪಿಸಿದರು.

ಕಂಟೈನ್ಮೆಂಟ್​​​​ ವಲಯದಲ್ಲಿ ಸ್ಥಳೀಯ ನಿವಾಸಿಗಳಿಂದ ಪ್ರತಿಭಟನೆ

ಕಂಟೈನ್ಮೆಂಟ್​​​​​ ಪ್ರದೇಶದಲ್ಲಿರುವ ನಮಗೆ ತರಕಾರಿ ಸೇರಿದಂತೆ ಇತರೆ ವಸ್ತುಗಳನ್ನು ಕೊಳ್ಳಲು ಆಗೋದಿಲ್ಲ. ಅನಾರೋಗ್ಯ ಎಂದರು ಸಹ ನಮ್ಮನ್ನು ವಿಚಾರಿಸಿಕೊಳ್ಳುವವರಿಲ್ಲ. ಇದರಿಂದ ನಾವು ಮನೆಯಲ್ಲೇ ನರಕ ಅನುಭವಿಸುವಂತಾಗಿದೆ ಎಂದು ಆರೋಪಿಸಿದ ಅವರು, ಸಾಮಾಜಿಕ ಅಂತರದಲ್ಲಿ ನಿಂತು ಪ್ರತಿಭಟನೆ ನಡೆಸಿದರು. ಈ ವೇಳೆ ಸ್ಥಳಕ್ಕೆ ಬಂದ ಪೊಲೀಸರು ಮನವೊಲಿಸುವ ಯತ್ನ ಮಾಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.