ETV Bharat / state

ಬಜರಂಗದಳ ಸಹ ಸಂಚಾಲಕನ ಮೇಲೆ ಹಲ್ಲೆ ಯತ್ನ ಖಂಡಿಸಿ ಸಾಗರ ಬಂದ್​ - ಈಟಿವಿ ಭಾರತ ಕನ್ನಡ

ಸಾಗರದಲ್ಲಿ ಬಜರಂಗದಳ ಸಹ ಸಂಚಾಲಕನ ಮೇಲೆ ಹಲ್ಲೆ ಯತ್ನ - ಸಾಗರ ಪಟ್ಟಣ ಬಂದ್​ಗೆ ಕರೆ ನೀಡಿದ್ದ ಹಿಂದೂ ಸಂಘಟನೆಗಳು - ಕಠಿಣ ಕ್ರಮಕ್ಕೆ ಆಗ್ರಹ

protest-against-attempt-attack-on-bajarangadal-worker-in-sagar
ಬಜರಂಗದಳ ಸಹ ಸಂಚಾಲಕ ಮೇಲೆ ಹಲ್ಲೆ ಯತ್ನ : ಸಾಗರ ಪಟ್ಟಣ ಬಂದ್ ಯಶಸ್ವಿ
author img

By

Published : Jan 10, 2023, 6:14 PM IST

ಬಜರಂಗದಳ ಸಹ ಸಂಚಾಲಕ ಮೇಲೆ ಹಲ್ಲೆ ಯತ್ನ ಖಂಡಿಸಿ ಸಾಗರ ಬಂದ್​

ಶಿವಮೊಗ್ಗ : ಜಿಲ್ಲೆಯ ಸಾಗರ ಪಟ್ಟಣದಲ್ಲಿ ನಡೆದ ಬಜರಂಗದಳದ ಸಹ ಸಂಚಾಲಕ ಸುನೀಲ್ ಮೇಲಿನ ಹಲ್ಲೆ ಯತ್ನ ಖಂಡಿಸಿ ಇಂದು ಬಂದ್​ಗೆ ಕರೆ ನೀಡಲಾಗಿತ್ತು. ಬೆಳಗ್ಗೆಯಿಂದಲೇ ಸಾಗರದ ಅಂಗಡಿ ಮುಂಗಟ್ಟುಗಳು ಬಂದ್ ಆಗಿದ್ದವು. ಅಂಗಡಿ ಮುಂಗಟ್ಟು ತೆರೆದು ವ್ಯಾಪಾರ ಮಾಡುತ್ತಿದ್ದವರ ಬಳಿ ತೆರಳಿ ಬಜರಂಗದಳ ಕಾರ್ಯಕರ್ತರು ಬಂದ್ ಮಾಡಿಸಿದರು.

ಅಂಗಡಿ ಬಂದ್​ ಮಾಡಿಸಿ ಪ್ರತಿಭಟನೆ : ಇನ್ನು, ಮೀನು ಮಾರುಕಟ್ಟೆಯಿಂದ ಆಜಾದ್ ರಸ್ತೆಗೆ ಬರುವಾಗ ತರಕಾರಿ ಅಂಗಡಿ ಬಂದ್ ಮಾಡುವಂತೆ ಬಜರಂಗದಳದ ಕಾರ್ಯಕರ್ತರು ಅಂಗಡಿಯವರಲ್ಲಿ ಹೇಳಿದ್ದಾರೆ. ಈ ವೇಳೆ ಅಂಗಡಿ ಬಂದ್ ಮಾಡದೆ ಇದ್ದಾಗ ಕಾರ್ಯಕರ್ತರು ಹಾಗೂ ಅಂಗಡಿ ಮಾಲೀಕನ‌ ನಡುವೆ ಮಾತಿನ ಚಕಮಕಿ ನಡೆಯಿತು. ಈ ವೇಳೆ ಬಜರಂಗದಳದ‌ ಕಾರ್ಯಕರ್ತರು ಘೋಷಣೆ ಕೂಗುತ್ತಿದ್ದಂತೆಯೇ ಆಜಾದ್ ರಸ್ತೆಯ ನಿವಾಸಿಗಳು ಏಕಾಏಕಿ ಜಮಾವಣೆಗೊಂಡು ಕಾರ್ಯಕರ್ತರೊಂದಿಗೆ ವಾಗ್ವಾದ ನಡೆಸಿದರು. ಈ ವೇಳೆ ಸ್ಥಳದಲ್ಲಿ ಉದ್ವಿಗ್ನ ವಾತಾವರಣ ಉಂಟಾಗಿತ್ತು. ಬಳಿಕ ಪೊಲೀಸರು ಮಧ್ಯ ಪ್ರವೇಶ ಮಾಡಿ ಪರಿಸ್ಥಿತಿಯನ್ನು ಹತೋಟಿಗೆ ತಂದರು. ಪ್ರತಿಭಟನೆ ಉದ್ದಕ್ಕೂ ಸಾಗರ ಶಾಸಕ ಹಾಲಪ್ಪ ಅವರು ಸಾಗಿ ಬಂದರು.

ಪ್ರತಿಭಟನಾ ಮೆರವಣಿಗೆ : ಬಜರಂಗದಳ ಹಾಗೂ ವಿವಿಧ ಹಿಂದೂಪರ ಸಂಘಟನೆಯ ಕಾರ್ಯಕರ್ತರು ಸಾಗರದ ಗಣಪತಿ ದೇವಾಲಯದಿಂದ ಪ್ರತಿಭಟನಾ ಮೆರವಣಿಗೆ ಆರಂಭಿಸಿದರು. ಬಳಿಕ ಸೊರಬ ರಸ್ತೆಯಿಂದ ಸಾಗರದ ಬಿ.ಹೆಚ್. ರಸ್ತೆಯ ಮೂಲಕ ಸಿಂಗದೂರು ರಸ್ತೆಯಿಂದ ಉಪ್ಪಾರ ಕೇರಿಯ ಕಡೆಯಿಂದ ಬಿ.ಹೆಚ್.ಗೆ ಬಂದು, ಅಶೋಕ ರಸ್ತೆಯ ಮೂಲಕ ಮಾರಿಕಾಂಬ ದೇವಾಲಯದ ಬಳಿ ಪ್ರತಿಭಟನಾ ಮೆರವಣಿಗೆ ಅಂತ್ಯಗೊಂಡಿತು.

ಬಳಿಕ ಸಂಘ ಪರಿವಾರದ ಮುಖಂಡ ಅ.ಪ. ನಾರಾಯಣಪ್ಪ ಮಾತನಾಡಿ, ಸಾಗರದಲ್ಲಿ ಹಿಂದೂ ಮುಸ್ಲಿಂ ಎಂದು ಯಾವತ್ತೂ ಮಾತನಾಡಿರಲಿಲ್ಲ. ಆದರೆ ನಮ್ಮನ್ನು ಕೆಣಕುವ ಕೆಲಸವನ್ನು ಅವರು ಮಾಡುತ್ತಿದ್ದಾರೆ. ಇದು ಸರಿಯಲ್ಲ. ಮುಂದೆ ಬರುವ ಮಾರಿ ಜಾತ್ರೆಯನ್ನು ಎಲ್ಲರೂ ಸೇರಿ ಒಟ್ಟಾಗಿ ಶಾಂತಿಯುತವಾಗಿ ಆಚರಿಸೋಣ. ಜಾತ್ರೆಯಲ್ಲಿ ಅನ್ಯ ಧರ್ಮಿಯರಿಗೆ ಅವಕಾಶ ನೀಡಬಾರದು ಎಂದು ಮಾರಿ ಜಾತ್ರಾ ಸಮಿತಿಗೆ ಒತ್ತಾಯಿಸಿದರು.

ಬಳಿಕ ಬಜರಂಗ ದಳದ ಜಿಲ್ಲಾ ಸಂಚಾಲಕ ರಾಜೇಶ್ ಗೌಡ ಮಾತನಾಡಿ, ಸಾಗರದಲ್ಲೂ ಮತಾಂತರ, ಲವ್ ಜಿಹಾದ್ ನಡೆಯುತ್ತಿದೆ. ನಮ್ಮ ರಕ್ಷಣೆಯನ್ನು ನಾವೇ ಮಾಡಬೇಕಿದೆ. ನಂತರ ಮಾತನಾಡಿದ ಶಾಸಕ ಹಾಲಪ್ಪ, ಈಗಾಗಲೇ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಯಾರು ಕಾನೂನನ್ನು ಕೈಗೆತ್ತಿಕೊಳ್ಳುತ್ತಾರೋ ಅವರನ್ನು ನಮ್ಮ ತಾಲೂಕು ಆಡಳಿತ ಹಾಗೂ ಪೊಲೀಸ್ ಇಲಾಖೆ ಹತ್ತಿಕ್ಕುವ ಪ್ರಯತ್ನ ಮಾಡುತ್ತದೆ ಎಂದರು. ಪ್ರತಿಭಟನಾ ಸಭೆಯಲ್ಲಿ ನೂರಾರು ಬಜರಂಗದಳ ಕಾರ್ಯಕರ್ತರು ಭಾಗಿಯಾಗಿದ್ದರು. ಸಾಗರ ಬಂದ್​ ಹಿನ್ನೆಲೆ ಪೊಲೀಸ್ ಇಲಾಖೆ ಬಿಗಿ ಬಂದೋಬಸ್ತ್ ಕೈಗೊಂಡಿತ್ತು.

ಮೂವರು ಆರೋಪಿಗಳ ಬಂಧನ : ಬಜರಂಗದಳ ಸಹ ಸಂಚಾಲಕನ ಮೇಲೆ ಹಲ್ಲೆಗೆ ಯತ್ನಿಸಿರುವ ಆರೋಪಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಎಸ್​ಪಿ ಮಿಥುನ್ ಕುಮಾರ್ ಹೇಳಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿದ ಅವರು, ಸಮೀರ್(ಎ1), ಇಮಿಯಾನ್ ಹಾಗೂ ಮನ್ಸೂರ್ ಎಂಬುವವರನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಗಳ ಹೆಚ್ಚಿನ ವಿಚಾರಣೆ ನಡೆಯುತ್ತಿದೆ. ಹಲ್ಲೆ ಪ್ರಕರಣದ ಎ1 ಆರೋಪಿ ಸಮೀರ್ ಎಂಬಾತನ ತಂಗಿಯನ್ನು ಸುನೀಲ್​ ನಾಲ್ಕೈದು ತಿಂಗಳಿನಿಂದ ಚುಡಾಯಿಸುತ್ತಿದ್ದ. ಈ ಹಿನ್ನೆಲೆಯಲ್ಲಿ ಹಲ್ಲೆ ಮಾಡಿರುವುದಾಗಿ ತನಿಖೆ ವೇಳೆ ಸಮೀರ್​ ಬಾಯ್ಬಿಟ್ಟಿದ್ದಾನೆ ಎಂದು ಎಸ್​ಪಿ ಮಿಥುನ್​ ಕುಮಾರ್​ ಮಾಧ್ಯಮಗೋಷ್ಟಿಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ : ಬಜರಂಗದಳ ಸಹ ಸಂಚಾಲಕನ ಮೇಲೆ ಹಲ್ಲೆಗೆ ಯತ್ನ.. ಮೂವರು ಖಾಕಿ ಬಲೆಗೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.