ಶಿವಮೊಗ್ಗ: ಸಾಗರ ಆಸ್ಪತ್ರೆ ಆವರಣದಲ್ಲಿರುವ ಬಾವಿಗೆ ಆಕಸ್ಮಿಕವಾಗಿ ಬಿದ್ದಿದ್ದ ವ್ಯಕ್ತಿಯನ್ನು ಅಗ್ನಿಶಾಮಕ ದಳದವರು ರಕ್ಷಣೆ ಮಾಡಿದರು.
ಶಿರಾಳಕೊಪ್ಪದ ಆನಂದ(35) ಪ್ರಾಣಾಪಾಯದಿಂದ ಪಾರಾದ ವ್ಯಕ್ತಿ. ಈತ ಸಾಗರ ಆಸ್ಪತ್ರೆ ಆವರಣದಲ್ಲಿರುವ ಬಾವಿಗೆ ಬಿದ್ದಿದ್ದಾನೆ. ಇಲ್ಲಿನ ಸಿಬ್ಬಂದಿ ರವಿ ಎಂಬಾತ ಬಾವಿ ಪಕ್ಕದಲ್ಲಿ ನಡೆದುಕೊಂಡು ಹೋಗುವಾಗ ಆನಂದ ರಕ್ಷಣೆಗಾಗಿ ಕಿರುಚಿದ್ದಾನೆ. ಈ ವೇಳೆ ಬಾವಿಗೆ ಇಣುಕಿ ನೋಡಿದಾಗ ವಿಷಯ ಬೆಳಕಿಗೆ ಬಂದಿದೆ.
ಕೂಡಲೇ ರವಿ ಅಗ್ನಿಶಾಮಕ ದಳ ಸಿಬ್ಬಂದಿಗೆ ಕರೆ ಮಾಡಿ ಮಾಹಿತಿ ಮುಟ್ಟಿಸಿದ್ದಾರೆ. ಬಳಿಕ ಸ್ಥಳಕ್ಕಾಗಮಿಸಿದ ಸಿಬ್ಬಂದಿ, ಬಾವಿಯಲ್ಲಿದ್ದ ವ್ಯಕ್ತಿಯನ್ನು ಸುರಕ್ಷಿತವಾಗಿ ಮೇಲಕ್ಕೆತ್ತಿ ರಕ್ಷಣೆ ಮಾಡಿದ್ದಾರೆ.