ETV Bharat / state

ಹಸುಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಖದೀಮರಿಗೆ ಬ್ರೇಕ್​ ಹಾಕಿದ ಗ್ರಾಮಸ್ಥರು

ಸಾಗರ ತಾಲೂಕಿನ ಆನಂದಪುರಂ ಹಾಗೂ ಗೌತಮಪುರ ಗ್ರಾಮಗಳಲ್ಲಿ ರೈತರ ಜೀವನಾಡಿಯಾದ ಜಾನುವಾರುಗಳನ್ನು ಅಕ್ರಮವಾಗಿ ಆಟೋದಲ್ಲಿ‌ ಕದ್ದು ಸಾಗಿಸುತ್ತಿದ್ದ ವೇಳೆ ಗ್ರಾಮಸ್ಥರೇ ತಡೆದು ಖದೀಮರನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.

author img

By

Published : Jul 26, 2019, 9:26 AM IST

illegal.

ಶಿವಮೊಗ್ಗ: ಜಾನುವಾರುಗಳನ್ನು ಕದ್ದು ಅಕ್ರಮವಾಗಿ ಸಾಗಿಸುತ್ತಿದ್ದ ಆರೋಪಿಗಳನ್ನು ಗ್ರಾಮಸ್ಥರೇ ಹಿಡಿದು ಪೊಲೀಸರಿಗೆ ಒಪ್ಪಿಸಿರುವ ಘಟನೆ ಸಾಗರ ತಾಲೂಕಿನಲ್ಲಿ ನಡೆದಿದೆ.

ಆನಂದಪುರಂ ಗ್ರಾಮ ಹಾಗೂ ಗೌತಮಪುರ ಗ್ರಾಮಗಳಲ್ಲಿ ಜಾನುವಾರುಗಳನ್ನು ಖದೀಮರು ಅಕ್ರಮವಾಗಿ ಆಟೋದಲ್ಲಿ‌ ಕದ್ದು ಸಾಗಿಸುತ್ತಿದ್ದರು. ಈ ರೀತಿ ಬಹು ದಿನಗಳಿಂದ ಈ ಭಾಗದಲ್ಲಿ ಕಳ್ಳತನ ನಡೆಸುತ್ತಿದ್ದರು ಎಂದು ತಿಳಿದು ಬಂದಿದೆ.

ಈ ಬಗ್ಗೆ ಖಚಿತ ಮಾಹಿತಿ ಪಡೆದ ಗ್ರಾಮಸ್ಥರು ಎರಡು ಆಟೋಗಳನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಆನಂದಪುರಂ ಆಟೋದಲ್ಲಿ 7 ಹಸುಗಳು ಹಾಗೂ ಗೌತಮಪುರದ ಆಟೋದಲ್ಲಿ 3 ಹಸುಗಳಿದ್ದವು. ಈ ವೇಳೆ ಇಬ್ಬರು ಆಟೋ ಚಾಲಕರು ಸಹ ಪೊಲೀಸರ ಅತಿಥಿಗಳಾಗಿದ್ದಾರೆ.

ಇತ್ತೀಚೆಗೆ ಮಲೆನಾಡಿನಲ್ಲಿ ಇಂತಹ ಪ್ರಕರಣಗಳು ಹೆಚ್ಚಾಗುತ್ತಿದ್ದು, ಮನೆಯ ಕೊಟ್ಟಿಗೆಯಲ್ಲಿ ಕಟ್ಟಿದ್ದ ಜಾನುವಾರುಗಳನ್ನು‌ ಕೂಡಾ ಕದ್ದು ಸಾಗಿಸಲಾಗುತ್ತಿದೆ ಎಂಬ ಮಾಹಿತಿ ತಿಳಿದು ಬಂದಿದೆ. ಈ ಕುರಿತು ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Intro:ಅಕ್ರಮ ಜಾನುವಾರು ಸಾಗಾಣೆ: ಗ್ರಾಮಸ್ಥರಿಂದ ತಡೆ.

ಶಿವಮೊಗ್ಗ: ಜಾನುವಾರುಗಳನ್ನು ಕದ್ದು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದವರನ್ನು ಗ್ರಾಮಸ್ಥರೆ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಸಾಗರ ತಾಲೂಕಿನ ಆನಂದಪುರಂ ಗ್ರಾಮ ಹಾಗೂ ಗೌತಮಪುರ ಗ್ರಾಮಗಳಲ್ಲಿನ ಜಾನುವಾರುಗಳನ್ನು ಅಕ್ರಮವಾಗಿ
ರೈತರ ಜೀವನಾಡಿಯಾದ ಜಾನುವಾರುಗಳನ್ನು ಆಟೋದಲ್ಲಿ‌ ಕದ್ದು ಸಾಗಾಟ ಮಾಡುತ್ತಿದ್ದರು.ಬಹು ದಿನಗಳಿಂದ ಈ ಭಾಗದಲ್ಲಿ ಕಳ್ಳತನ ನಡೆಸುತ್ತಿದ್ದರು.Body:ಇದರ ಖಚಿತ ಮಾಹಿತಿ ಪಡೆದ ಗ್ರಾಮಸ್ಥರು ಕಾದು ಎರಡು ಆಟೋಗಳನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಆನಂದಪುರಂನಲ್ಲಿ ಹಿಡಿದ ಆಟೋದಲ್ಲಿ ಏಳು ಹಸುಗಳು ಹಾಗೂ ಗೌತಮಪುರದ ಆಟೋದಲ್ಲಿ ಮೂರು ಹಸುಗಳಿದ್ದವು.ಈ ವೇಳೆ ಇಬ್ಬರು ಆಟೋ ಚಾಲಕರನ್ನು ಸಹ ಪೊಲೀಸರ ವಶಕ್ಕೆ ನೀಡಲಾಗಿದೆ. Conclusion: ಆಟೋ ಚಾಲಕರನ್ನು ಸಹ ಪೊಲೀಸರ ವಶಕ್ಕೆ ನೀಡಲಾಗಿದೆ. ಮಲೆನಾಡಿನಲ್ಲಿ ಹೆಚ್ಚಾಗುತ್ತಾ ಇದೆ. ಅದರಲ್ಲೂ ಮನೆಯ ಕೊಟ್ಟಿಗೆಯಲ್ಲಿ ಕಟ್ಟಿದ್ದ ಜಾನುವಾರುಗಳನ್ನು‌ ಕದ್ದು ಸಾಗಾಣೆ ಮಾಡಲಾಗುತ್ತಿದೆ. ಈ ಕುರಿತು ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.