ETV Bharat / state

ಶಿವಮೊಗ್ಗ: ಚಟ್ಟದಿಂದ ಶವ ಕೆಳಗಿಳಿಸಿ ಮರಣೋತ್ತರ ಪರೀಕ್ಷೆಗೆ ಕಳಿಸಿದ ಪೊಲೀಸರು!

ಅಂತ್ಯ ಸಂಸ್ಕಾರಕ್ಕೆ ತೆಗೆದುಕೊಂಡು ಹೋಗುತ್ತಿದ್ದ ಶವವನ್ನು ಚಟ್ಟದಿಂದ ಕೆಳಗಿಳಿಸಿದ ಪೊಲೀಸರು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.

police-sent-dead-body-for-postmortem-in-shivamogga
ಸಾವಿನ ಬಗ್ಗೆ ಅನುಮಾನ: ಚಟ್ಟದಿಂದ ಶವ ಕೆಳಗಿಳಿಸಿ ಮರಣೋತ್ತರ ಪರೀಕ್ಷೆಗೆ ಕಳಿಸಿದ ಪೊಲೀಸ್​
author img

By

Published : Jul 7, 2022, 1:03 PM IST

ಶಿವಮೊಗ್ಗ: ಅಂತ್ಯ ಸಂಸ್ಕಾರಕ್ಕೆ ತೆಗೆದುಕೊಂಡು ಹೋಗುತ್ತಿದ್ದ ಶವವನ್ನು ಪೊಲೀಸರು ಚಟ್ಟದಿಂದ ಕೆಳಗಿಳಿಸಿ ಮರಣೋತ್ತರ ಪರೀಕ್ಷೆಗೆ ಕಳುಹಿಸಿದ ಘಟನೆ ನಗರದ ಮಾರುತಿ ಕ್ಯಾಂಪ್​ನಲ್ಲಿ ನಡೆದಿದೆ. ಶಿವಮೊಗ್ಗ ತಾಲೂಕು ಉಂಬ್ಳೆಬೈಲು ಗ್ರಾಮ ಪಂಚಾಯತಿ ವ್ಯಾಪ್ತಿಯ ವಿಠಲ ಎಂಬಾತನ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.

ಮೃತ ವಿಠಲನ ಉರುಳಿಹಳ್ಳಿ ಬಳಿಯ ಮಾರುತಿ ಕ್ಯಾಂಪ್​ನ ನಿವಾಸಿಯಾಗಿದ್ದು, ಈತ ತನ್ನ ಸ್ನೇಹಿತನ ಜೊತೆ ಮದ್ಯ ಸೇವಿಸಿ ಲಕ್ಕಿನಕೊಪ್ಪ ಸಮೀಪದ ಅರಣ್ಯದಲ್ಲಿ ಮಲಗಿದ್ದರು. ಬಳಿಕ ಮಧ್ಯಾಹ್ನವೇ ವಿಠಲನ ಸ್ನೇಹಿತ ಎದ್ದು ಮನೆಗೆ ಹೋಗಿದ್ದ. ಆದರೆ ವಿಠಲ ಮಾತ್ರ ಮನೆಗೆ ತೆರಳಿರಲಿಲ್ಲ ಎನ್ನಲಾಗಿದೆ.

ತದನಂತರ ಮಾರುತಿ ಕ್ಯಾಂಪ್​ನ ಜನ ಕಾಡಿನಲ್ಲಿ ನಡೆದು ಹೋಗುವಾಗ ವಿಠಲನನ್ನು ನೋಡಿ ಎದ್ದೇಳಿಸಲು ಪ್ರಯತ್ನ ಮಾಡಿದ್ದಾರೆ. ಆಗ ಎದ್ದೇಳದ ಕಾರಣ ಮನೆಯವರಿಗೆ ತಿಳಿಸಿದ್ದಾರೆ. ಮನೆಯವರು ಬಂದು ನೋಡಿದಾಗ ಆತ ಮೃತಪಟ್ಟಿರುವುದು ಗೊತ್ತಾಗಿದೆ. ಹೀಗಾಗಿ ಆತನ ಅಂತಿಮ ಸಂಸ್ಕಾರಕ್ಕೆ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿತ್ತು.

ಆದರೆ ಈ ಸಂದರ್ಭದಲ್ಲಿ ಗ್ರಾಮಸ್ಥರೊಬ್ಬರು ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿ, ತುಂಗಾ ನಗರ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಇದರಿಂದ ಗ್ರಾಮಕ್ಕೆ ಬಂದ ಪೊಲೀಸರು, ಶವವನ್ನು ಚಟ್ಟದಿಂದ ಕೆಳಗಿಳಿಸಿ ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.

ಇದನ್ನೂ ಓದಿ: ಕೆರೂರಲ್ಲಿ ಗುಂಪು ಘರ್ಷಣೆ: ಹಳೇ ದ್ವೇಷ, ಯುವತಿಯರನ್ನು ಚುಡಾಯಿಸಿದ್ದೇ ಗಲಾಟೆಗೆ ಕಾರಣ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.