ಶಿವಮೊಗ್ಗ: ಸಾಗರದ ಪೊಲೀಸ್ ಪೇದೆಯೊಬ್ಬರು ಮಾನಸಿಕ ಅಸ್ವಸ್ಥ ಯುವಕನಿಗೆ ಬಟ್ಟೆ ನೀಡಿ ಮಾನವೀಯತೆ ಮೆರೆದಿದ್ದಾರೆ.
ಸಾಗರ ಪಟ್ಟಣ ವ್ಯಾಪ್ತಿಯಲ್ಲಿ ಮಾನಸಿಕ ಅಸ್ವಸ್ಥ ಯುವಕನೋರ್ವ ಮೈ ಮೇಲೆ ಬಟ್ಟೆ ಇಲ್ಲದಂತೆ ಕಳೆದೊಂದು ತಿಂಗಳಿಂದ ಓಡಾಡುತ್ತಿದ್ದ. ಇದನ್ನು ಗಮನಿಸಿದ ಸಾಗರ ಪೇಟೆ ಠಾಣೆಯ ಪಿ.ಸಿ.ಆರ್ ವಾಹನ ಚಾಲಕ ದಫೆದರ್ ನರಸಿಂಹ ಆತನಿಗೆ ಹೊಸ ಬಟ್ಟೆಗಳನ್ನು ಕೊಡಿಸಿದ್ದಾರೆ. ಮಾನಸಿಕ ಅಸ್ವಸ್ಥ ಯುವಕ ಬಟ್ಟೆ ತೊಡಲು ನಿರಾಕರಿಸಿದಾಗ ಸ್ವತಃ ನರಸಿಂಹರವರೆ ಆತನಿಗೆ ಬುದ್ಧಿ ಹೇಳಿ ಬಟ್ಟೆ ತೊಡಿಸಿದ್ದಾರೆ.
ಊಟ ಮಾಡಬೇಕು ಹಣ ಕೊಡಿ ಎಂದಾಗ ಹೋಟೆಲ್ ನಲ್ಲಿ ಊಟ ಕೊಡಿಸಿದ್ದಾರೆ. ದಿನಾಲು ನಾನು ನಿನ್ನನ್ನು ಗಮನಿಸುತ್ತೇನೆ ಬಟ್ಟೆ ಹಾಗೂ ಶರೀರವನ್ನು ಶುದ್ಧವಾಗಿಟ್ಟುಕೊಳ್ಳುವಂತೆ ಹೇಳಿದ್ದಾರೆ.
ಕೆಲವು ಪೋಲೀಸರು ಮಾಡುವ ತಪ್ಪಿಗೆ, ಎಲ್ಲಾ ಪೊಲೀಸರೇ ಕರುಣೆ ಇಲ್ಲದವರು ಎಂದೆಲ್ಲಾ ಹೇಳುವ ಜನ ನರಸಿಂಹ ರಂತವರು ಪೊಲೀಸ್ ಇಲಾಖೆಯಲ್ಲಿ ಇನ್ನೂ ಇದ್ದಾರೆ ಎಂಬುವುದಂತು ಸತ್ಯವಾಗಿದೆ. ಮಾನಸಿಕ ಅಸ್ವಸ್ಥನಿಗೆ ಸಹಾಯ ಹಸ್ತ ಚಾಚಿದ ದಫೆದರ್ ನರಸಿಂಹ ಅವರಿಗೆ ಸ್ಥಳೀಯರು ಶಹಬ್ಬಾಷ್ ಎಂದಿದ್ದಾರೆ.