ETV Bharat / state

ಮೋದಿ ದೇಶದ ಸ್ವಾಭಿಮಾನವನ್ನು ವಿಶ್ವದಲ್ಲೇ ಮೇಲ್ದರ್ಜೆಗೆ ಏರಿಸಿದ್ದಾರೆ: ಈಶ್ವರಪ್ಪ - India, Pakistan China border

ಪ್ರಧಾನಿ ನರೇಂದ್ರ ಮೋದಿಯವರು ದೇಶದ ಸ್ವಾಭಿಮಾನವನ್ನು ವಿಶ್ವದಲ್ಲೇ ಮೇಲ್ದರ್ಜೆಗೆ ಏರಿಸಿರುವುದು ನಮ್ಮ ಹೆಮ್ಮೆ. ದೇಶದ ಜನರ ಸ್ವಾವಲಂಬನೆ ಹಾಗೂ ಸ್ವಾಭಿಮಾನಕ್ಕಾಗಿ ಆತ್ಮನಿರ್ಭರ ಭಾರತ್ ಘೋಷಣೆ ಮಾಡಲಾಗಿದೆ ಎಂದು ಈ ವೇಳೆ ಈಶ್ವರಪ್ಪ ತಿಳಿಸಿದ್ದಾರೆ.

PM Modi has elevated the country's self Respect more than ever high: Iswarappa
ಮೋದಿ ದೇಶದ ಸ್ವಾಭಿಮಾನವನ್ನು ವಿಶ್ವದಲ್ಲೇ ಮೇಲ್ದರ್ಜೆಗೆ ಏರಿಸಿದ್ದಾರೆ: ಈಶ್ವರಪ್ಪ
author img

By

Published : Jul 18, 2020, 5:49 PM IST

ಶಿವಮೊಗ್ಗ: ನಗರದ ಬಿಜೆಪಿ ಜಿಲ್ಲಾ ಕಛೇರಿಯಲ್ಲಿ ಹಮ್ಮಿಕೊಂಡಿದ್ದ ವರ್ಚುವಲ್ ಜಿಲ್ಲಾ ಬಿಜೆಪಿ ಕಾರ್ಯಕಾರಣಿ ಸಭೆಯನ್ನು ಸಚಿವ ಕೆ.ಎಸ್.ಈಶ್ವರಪ್ಪ ಉದ್ಘಾಟಿಸಿದ್ದಾರೆ.

ಬಳಿಕ ಮಾತನಾಡಿದ ಅವರು, ಇಡೀ ವಿಶ್ವದಲ್ಲಿ ಆತ್ಮ ನಿರ್ಭರ​ ಭಾರತದ ಕುರಿತು ಚರ್ಚೆಗಳಾಗುತ್ತಿವೆ. ದೇಶದ ಜನರ ಸ್ವಾವಲಂಭನೆ ಹಾಗೂ ಸ್ವಾಭಿಮಾನಕ್ಕಾಗಿ ಆತ್ಮ ನಿರ್ಭರ್​​​ ಭಾರತ್ ಘೋಷಣೆ ಮಾಡಲಾಗಿದೆ ಎಂದರು.

ಮೋದಿ ದೇಶದ ಸ್ವಾಭಿಮಾನವನ್ನು ವಿಶ್ವದಲ್ಲೇ ಮೇಲ್ದರ್ಜೆಗೆ ಏರಿಸಿದ್ದಾರೆ: ಈಶ್ವರಪ್ಪ

ಪ್ರಧಾನಿ ನರೇಂದ್ರ ಮೋದಿಯವರು ದೇಶದ ಸ್ವಾಭಿಮಾನವನ್ನು ವಿಶ್ವದಲ್ಲೇ ಮೇಲ್ದರ್ಜೆಗೆ ಏರಿಸಿರುವುದು ನಮ್ಮ ಹೆಮ್ಮೆ. ಭಾರತವನ್ನು ಪಾಕಿಸ್ತಾನ ಹಾಗೂ ಚೀನಾ ಹಗುರವಾಗಿ ತಿಳಿದುಕೊಂಡಿತ್ತು. ಆಗ ಭಾರತದ ಒಂದಿಂಚು ಭೂಮಿಯನ್ನು ಸಹ ಪಾಕಿಸ್ತಾನಕ್ಕೆ ಹಾಗೂ ಚೀನಾಕ್ಕೆ ಬಿಟ್ಟುಕೊಡಲ್ಲ ಎಂದು ತೋರಿಸಿಕೊಟ್ಟ ಗಂಡೆದೆಯ ಪ್ರಧಾನಿ ಪಡೆದಿರುವುದು ಭಾರತದ ಹೆಮ್ಮೆ ಎಂದರು.

ಗಡಿಯಲ್ಲಿ ಅತಿಕ್ರಮಣ ಮಾಡುವಾಗ ಪ್ರಾಣ ಬಿಟ್ಟರೂ ದೇಶದ ಭೂಮಿ ಬಿಡಲ್ಲ ಎಂದು ಹೋರಾಡುತ್ತಿದ್ದ ಸೈನಿಕರಿಗೆ ಆತ್ಮಸ್ಥೈರ್ಯ ತುಂಬುವ ಸಲುವಾಗಿ ತಮ್ಮ ಎಸಿ ಕಛೇರಿಯಲ್ಲಿ ಕೂರದೆ ಗಡಿಗೆ ಹೋಗಿ ಭಾರತೀಯ 135 ಕೋಟಿ ಜನ ನಿಮ್ಮೊಂದಿಗೆ ಇದ್ದೇವೆ ಎಂದು ಹೇಳಿದ ಮೊದಲ ಪ್ರಧಾನಿ ನರೇಂದ್ರ ಮೋದಿಯವರು ಎಂದರು.

ದೇಶದಲ್ಲಿ ಕೊರೊನಾ ಸಂದರ್ಭದಲ್ಲಿ ಯಾರೊಬ್ಬರೂ ಸಹ ಊಟ ಇಲ್ಲದೇ ಸಾಯಬಾರದು ಎಂದು 20 ಲಕ್ಷ ಕೋಟಿ ರೂಪಾಯಿಯ ವಿಶೇಷ ಪ್ಯಾಕೇಜ್ ಘೋಷಣೆ ಮಾಡುವ ಮೂಲಕ ಬಡವರ ಪರವಾಗಿದ್ದೇವೆ ಎಂದು ತೋರಿಸಿಕೊಟ್ಟಿದ್ದಾರೆ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.