ETV Bharat / state

ತಾಪಂ ಸಭೆಯಲ್ಲೇ ಪ್ಲಾಸ್ಟಿಕ್‌ ಬಾಟಲ್‌ಗಳ ಬಳಕೆ.. ಸರ್ಕಾರಿ ಆದೇಶಕ್ಕೆ ಕಿಮ್ಮತ್ತಿಲ್ಲ..

ಇಂದು ನಡೆದ ತಾಲೂಕು ಪಂಚಾಯತ್ ಕೆಡಿಪಿ ಸಭೆಯಲ್ಲಿ ಸರ್ಕಾರದ ಆದೇಶವನ್ನು ಗಾಳಿಗೆ ತೂರಿ ಪ್ಲಾಸ್ಟಿಕ್ ನೀರಿನ ಬಾಟಲ್​ಗಳನ್ನು ಬಳಸಿದ್ದಾರೆ.

meeting
ಕೆಡಿಪಿ ಸಭೆ
author img

By

Published : Dec 20, 2019, 5:35 PM IST

ಶಿವಮೊಗ್ಗ : ಸರ್ಕಾರದ ಆದೇಶದನ್ವಯ ಸರ್ಕಾರಿ ಕಚೇರಿ ಹಾಗೂ ಸರ್ಕಾರಿ ಸಭೆ, ಸಮಾರಂಭಗಳಲ್ಲಿ ಪ್ಲಾಸ್ಟಿಕ್ ನೀರಿನ ಬಾಟಲ್​ಗಳನ್ನು ನಿಷೇಧಿಸಲಾಗಿದ್ದರೂ ಶಿವಮೊಗ್ಗ ತಾಲೂಕು ಪಂಚಾಯತ್‌ನಲ್ಲಿ ಪ್ಲಾಸ್ಟಿಕ್ ನೀರಿನ ಬಾಟಲ್​ಗಳನ್ನು ಬಳಸಿದ್ದಾರೆ.

ಇಂದು ನಡೆದ ತಾಲೂಕು ಪಂಚಾಯತ್ ಕೆಡಿಪಿ ಸಭೆಯಲ್ಲಿ ಸರ್ಕಾರದ ಆದೇಶವನ್ನು ಗಾಳಿಗೆ ತೂರಿ ಪ್ಲಾಸ್ಟಿಕ್ ನೀರಿನ ಬಾಟಲ್​ಗಳನ್ನು ಬಳಸಿದ್ದಾರೆ. ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿದ್ದ ಗ್ರಾಮಾಂತರ ಶಾಸಕ ಅಶೋಕ್ ನಾಯ್ಕ್​ ಅವರು ತಮ್ಮ ಮುಂದೆಯೇ ಪ್ಲಾಸ್ಟಿಕ್ ಬಾಟಲ್​ಗಳನ್ನು ಇಟ್ಟಿರುವುದು ಗಮನಕ್ಕೆ ಬಂದರೂ ಅದನ್ನು ನಿರ್ಲಕ್ಷ್ಯಿಸಿದ್ದು, ಸರ್ಕಾರದ ಆದೇಶಕ್ಕೆ ಶಾಸಕರ ಬೆಂಬಲ ಎಷ್ಟಿದೇ ಎಂಬುದನ್ನು ಸೂಚಿಸುತ್ತದೆ.

ತಾಲೂಕು ಪಂಚಾಯತ್‌ನಲ್ಲಿ ನಡೆದ ಕೆಡಿಪಿ ಸಭೆ..

ಅಷ್ಟೇ ಅಲ್ಲ, ಕೆಡಿಪಿ ಸಭೆ ನಡೆಯುತ್ತಿದ್ದರೂ ನಮಗೇನು ಅನ್ವಯಿಸುವುದಿಲ್ಲ ಎನ್ನುವಂತೆ ಬಹುತೇಕ ಅಧಿಕಾರಿಗಳು ಮೊಬೈಲ್ ಫೋನ್​ನಲ್ಲಿ ಮುಳುಗಿ ಹೋಗಿದ್ದರು. ಸಭೆಯಲ್ಲಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ, ವೇದಾವಿಜಯ್ ಕುಮಾರ್, ತಾಲೂಕು ಪಂಚಾಯತ್ ಅಧ್ಯಕ್ಷೆ ಗೀತಾ ಜಯಶೇಖರ್, ಉಪಾಧ್ಯಕ್ಷೆ ನಿರ್ಮಲಾ ಮೋಹನ್ ಕುಮಾರ್ ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.

Intro:exclusive

ಸರ್ಕಾರಿ ಆದೇಶ ಗಾಳಿಗೆ ತೂರಿದ ತಾಲೂಕು ಪಂಚಾಯತ

ಸರ್ಕಾರದ ಆದೇಶದನ್ವಯ ಸರ್ಕಾರಿ ಕಛೇರಿ ಗಳಲ್ಲಿ ಹಾಗೂ ಸರ್ಕಾರಿ ಸಭೆ ಸಂಭಾರಂಭಗಳಲ್ಲಿ ಪ್ಲಾಸ್ಟಿಕ್ ನೀರಿನ ಬಾಟಲ್ ಗಳನ್ನು ನಿಷೇಧಿಸಲಾಗಿದೆ.

ಆದರೂ ಸಹ ಇಂದು ನಡೆದ ತಾಲ್ಲೂಕು ಪಂಚಾಯತ ಕೆಡಿಪಿ ಸಭೆಯಲ್ಲಿ ಸರ್ಕಾರದ ಆದೇಶ ವನ್ನು ಗಾಳಿಗೆ ತೂರಿ ಪ್ಲಾಸ್ಟಿಕ್ ನೀರಿನ ಬ್ಲಾಟಲ್ ಗಳನ್ನು ಬಳಸಿದ್ದಾರೆ ..
ಇದೊಂದೆಡೆ ಆದರೆ ಕೆಡಿಪಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿದ್ದ ಗ್ರಾಮಾಂತರ ಶಾಸಕರ ಅಶೋಕ್ ನಾಯ್ಕ ಅವರು ಸಹ ತಮ್ಮ ಮುಂದೆಯೇ ಇಟ್ಟಿದ್ದ ಪ್ಲಾಸ್ಟಿಕ್ ಬಾಟಲ್ ಗಳನ್ನು ಇಟ್ಟಿರುವ ಗಮನಕ್ಕೆ ಬಂದರು ಸಹ ಆದೇಶ ನಿರ್ಲಕ್ಷಿಸಿರೊದು ಸರ್ಕಾರದ ಆದೇಶಕ್ಕೆ ಶಾಸಕರ ಬೆಂಬಲ ಎಷ್ಟಿದೇ ಎಂಬುದನ್ನು ಸೂಚಿಸುತ್ತದೆ.

ಅಷ್ಟೇ ಅಲ್ಲದೆ ಕೆಡಿಪಿ ಸಭೆ ನಡೆಯುತ್ತಿದ್ದರು ನಮಗೆನು ಅನ್ವಯಿಸುವುದಿಲ್ಲ ಅನ್ನುವಂತೆ ಬಹುತೇಕ ಅಧಿಕಾರಿಗಳು ಮೊಬೈಲ್ ಫೋನ್ ನಲ್ಲಿ ಕಾರ್ಯನಿರತರಾಗಿದ್ದರು.

ಈ ಸಭೆಯಲ್ಲಿ ಜಿಲ್ಲಾ ಪಂಚಾಯತ ಉಪಾಧ್ಯಕ್ಷೆ, ವೇದಾವಿಜಯ್ ಕುಮಾರ್ , ತಾಲೂಕು ಪಂಚಾಯತ ಅಧ್ಯಕ್ಷೆ ಗೀತಾ ಜಯಶೇಖರ್, ಉಪಾಧ್ಯಕ್ಷೆ ನಿರ್ಮಲಾ ಮೋಹನ್ ಕುಮಾರ್ ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.
ಭೀಮಾನಾಯ್ಕ ಎಸ್ ಶಿವಮೊಗ್ಗ

Body:ಭೀಮಾನಾಯ್ಕ ಎಸ್ ಶಿವಮೊಗ್ಗ

Conclusion:

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.