ಶಿವಮೊಗ್ಗ: ಪಿಎಫ್ಐ ನಿಷೇಧ ಕೇಂದ್ರ ಸರ್ಕಾರ ಐತಿಹಾಸಿಕ ನಿಲುವಾಗಿದೆ ಎಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸದಸ್ಯ ಬಿ.ವೈ.ರಾಘವೇಂದ್ರ ಹೇಳಿದರು.
ಶಿಕಾರಿಪುರದಲ್ಲಿ ಮಾತನಾಡಿದ ಅವರು, ಭಯೋತ್ಪಾದಕ ಚಟುವಟಿಕೆಯಲ್ಲಿ ನಿರತ ಪಿಎಫ್ಐ ಸೇರಿದಂತೆ ಐದು ಸಂಘಟನೆಗಳಿಗೆ ಕೇಂದ್ರ ನಿಷೇಧ ಹೇರಿದೆ. ಇದಕ್ಕೆ ನಾಡಿನ ಪರವಾಗಿ ಕೇಂದ್ರ ಸರ್ಕಾರಕ್ಕೆ ಅಭಿನಂದನೆಗಳು ಎಂದರು.
ಇತ್ತೀಚೆಗೆ ಎನ್‍ಐಎ ದೇಶದ 15 ರಾಜ್ಯಗಳಲ್ಲಿ ದಾಳಿ ಮಾಡಿ ನೂರಾರು ಜನರನ್ನು ಬಂಧಿಸಲಾಗಿತ್ತು. ಈ ಸಂಘಟನೆಗಳ ನಿಷೇಧ ತುಂಬಾ ದಿನಗಳ ಬೇಡಿಕೆಯಾಗಿತ್ತು. ಇದು ಶಾಂತಿಯ ಸಂದೇಶ ಸಾರುವ ಭಾರತಕ್ಕೆ ಸಂದ ಜಯವಾಗಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಪಿಎಫ್ಐ ಸಂಘಟನೆ ಬ್ಯಾನ್.. ಪ್ರಮೋದ್ ಮುತಾಲಿಕ್ ಖುಷ್