ಶಿವಮೊಗ್ಗ: ದೊಣ್ಣೆಯಿಂದ ಹೊಡೆದು ಆಟೋ ಚಾಲಕನ ಕೊಲೆ ಮಾಡಿರುವ ಘಟನೆ ಭದ್ರಾವತಿಯ ಆರ್.ಎಂ.ಸಿ ಯಾರ್ಡ್ ಬಳಿ ನಡೆದಿದೆ. ರೂಪೇಶ್ ಕುಮಾರ್ (45) ಎಂಬಾತನೆ ಕೊಲೆಯಾದ ವ್ಯಕ್ತಿ ಎಂದು ಗುರುತಿಸಲಾಗಿದೆ.
ರೂಪೇಶ್ ಕುಮಾರ್ ಭದ್ರಾವತಿ ತಾಲೂಕು ಹೊಳೆಹೂನ್ನೂರು ಪಟ್ಟಣದ ಗಾಣಿಗರ ಬೀದಿಯ ನಿವಾಸಿ. ಹಲವು ವರ್ಷಗಳ ಕಾಲ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ. ಇತ್ತೀಚೆಗೆ ತನ್ನೂರಿಗೆ ಬಂದು ಶಿವಮೊಗ್ಗದ ನಾರಾಯಣ ಹೃದಯಾಲಯದ ಬಳಿ ಆಟೋ ಓಡಿಸುತ್ತಿದ್ದ.
ಆದರೆ, ರೂಪೇಶ್ನನ್ನು ಭದ್ರಾವತಿಯಲ್ಲಿ ಕೊಲೆ ಮಾಡಲಾಗಿದೆ. ಮೃತನು ಶಿವಮೊಗ್ಗದಿಂದ ಭದ್ರಾವತಿಗೆ ಯಾಕೆ ಹೋಗಿದ್ದ, ಯಾರು ಕರೆದುಕೊಂಡು ಹೋಗಿದ್ದರು ಎಂಬುದು ತಿಳಿದು ಬಂದಿಲ್ಲ. ಸ್ಥಳಕ್ಕೆ ಭದ್ರಾವತಿ ಹಳೇ ನಗರ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಇದನ್ನೂ ಓದಿ: ಸ್ನಾನಕ್ಕೆ ತೆರಳಿ ನೀರಲ್ಲಿ ಸಿಲುಕಿಕೊಂಡ ಬಾಲಕಿಯರು.. ಕಾಪಾಡಲು ತೆರಳಿದ್ದ ವ್ಯಕ್ತಿ ಸೇರಿ ಐವರು ನೀರುಪಾಲು!