ETV Bharat / state

ಶಿವಮೊಗ್ಗದಲ್ಲಿ ಮಳೆಯಬ್ಬರ.. ಚಂಡ ಮಾರುತದ ಹೊಡೆತಕ್ಕೆ ನಲುಗಿದ ಜನ - shivamogga rain news 2022

ನಿನ್ನೆಯಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಶಿವಮೊಗ್ಗ ನಗರದ ಜನರ ಜೀವನ ಅಸ್ತವ್ಯಸ್ತವಾಗಿದೆ. ಅದರಂತೆ ಬೆಂಗಳೂರು, ಹೊನ್ನಾವರ ರಾಷ್ಟ್ರೀಯ ಹೆದ್ದಾರಿ 206ರ ಮೇಲೆ ಭಾರಿ ಪ್ರಮಾಣದ ನೀರು ನಿಂತಿದ್ದು, ವಾಹನ ಸಂಚಾರ ಸ್ತಬ್ದವಾಗಿದೆ.

ಶಿವಮೊಗ್ಗದಲ್ಲಿ ಮಳೆಯಬ್ಬರ
ಶಿವಮೊಗ್ಗದಲ್ಲಿ ಮಳೆಯಬ್ಬರ
author img

By

Published : May 19, 2022, 5:22 PM IST

ಶಿವಮೊಗ್ಗ: ಅರಬ್ಬಿ ಸಮುದ್ರದಲ್ಲಿ ಉಂಟಾಗಿರುವ ಚಂಡಮಾರುತದಿಂದ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗ ನಲುಗಿ ಹೋಗಿದೆ. ಕಳೆದ ಎರಡು ದಿನಗಳಿಂದ ಜಿಲ್ಲಾದ್ಯಂತ ಮಳೆ ಸುರಿಯುತ್ತಿದೆ. ನಿನ್ನೆ ರಾತ್ರಿಯಿಂದ ಪ್ರಾರಂಭವಾದ ಮಳೆ ಇಲ್ಲಿಯವರೆಗೂ ನಿಂತಿಲ್ಲ. ಹೀಗಾಗಿ ಇಂದು ಶಿವಮೊಗ್ಗ ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ.

ಮಳೆ ಅವಾಂತರದ ಬಗ್ಗೆ ಸ್ಥಳೀಯರು ಅಭಿಪ್ರಾಯ ಹಂಚಿಕೊಂಡಿದ್ದಾರೆ

ಮನೆಗಳಿಗೆ ನೀರು ತುಂಬಿ ಅವಾಂತರ: ರಾತ್ರಿಯಿಂದ ಎಡಬಿಡದೇ ಸುರಿಯುತ್ತಿರುವ ಮಳೆಯಿಂದ ನಗರದ ಹಲವು ಬಡಾವಣೆಗಳು ಜಲಾವೃತವಾಗಿವೆ. ಗೋಪಾಲಗೌಡ ಬಡಾವಣೆಯಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ಹಲವು ಮನೆಗಳಿಗೆ ನೀರು ನುಗ್ಗಿದೆ. ಪರಿಣಾಮ ಜನ ನೀರು ಹೊರಹಾಕುತ್ತಾ ಮಹಾನಗರ ಪಾಲಿಕೆಯವರಿಗೆ ಹಿಡಿ ಶಾಪ ಹಾಕುತ್ತಿದ್ದಾರೆ.

people-facing-problems-due-to-heavy-rain-in-shivamogga
ಮಳೆ ಅವಾಂತರಕ್ಕೆ ಸಂಕಟ ಪಡುತ್ತಿರುವ ವಾಹನ ಸವಾರರು

ನಗರದ ಆರ್​ಎಂಎಲ್ ನಗರದಲ್ಲೂ ಸಹ ಹಲವು ಮನೆಗಳು ಜಲಾವೃತವಾಗಿವೆ. ಪರಿಣಾಮ ಜನ ತಮ್ಮ ಸ್ನೇಹಿತರ ಮನೆಗಳಿಗೆ ತೆರಳಿದ್ದಾರೆ. ಮನೆಯಲ್ಲಿನ ಎಲ್ಲ ಗೃಹ ಬಳಕೆ ವಸ್ತುಗಳು ನೀರಿನಲ್ಲಿ‌ ನಿಂತಿವೆ. ಹೀಗಾಗಿ, ನಗರಕ್ಕೆ ಉಪ ಮೇಯರ್ ಶಂಕರ್ ಗನ್ನಿ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈ ವೇಳೆ ಜನ ನೀರು ಸರಾಗವಾಗಿ ಹರಿದು ಹೋಗುವಂತೆ ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ಮೇಯರ್ ಸುನೀತಾ ಅಣ್ಣಪ್ಪ ಅವರನ್ನು ತರಾಟೆಗೆ ತೆಗೆದುಕೊಂಡ ಸಾರ್ವಜನಿಕರು: ಆರ್​ಎಂಎಲ್ ನಗರಕ್ಕೆ ಭೇಟಿ ನೀಡಿದ ಸುನೀತ ಅಣ್ಣಪ್ಪ ಅವರನ್ನು ಸ್ಥಳೀಯರು ತೀವ್ರ ತರಾಟೆಗೆ ತೆಗೆದುಕೊಂಡರು. ಸ್ಮಾರ್ಟ್ ಸಿಟಿ ಕಾಮಗಾರಿಯಿಂದ ನೀರು ಚರಂಡಿಯಲ್ಲಿ ಹರಿಯದೆ, ರಸ್ತೆ ಮೇಲೆ ಹರಿದು ಹೋಗುತ್ತಿದೆ. ಇದರಿಂದ ರಸ್ತೆ ನೀರು ಮನೆಗಳಿಗೆ ನುಗ್ಗಿದೆ. ಕಾಮಗಾರಿ ಸರಿಯಾಗಿ ಆಗದೇ ನಮಗೆ ಸಮಸ್ಯೆಯಾಗಿದೆ ಎಂದು ಜನ ಮೇಯರ್ ವಿರುದ್ದ ಹರಿಹಾಯ್ದರು. ಈ ವೇಳೆ, ಜನರಿಗೆ ಮೇಯರ್ ಉತ್ತರ ನೀಡಿ ಸುಸ್ತಾಗಿ ಹೋದರು. ನಂತರ ಅಲ್ಲಿಂದ ಕಾಲ್ಕಿತ್ತರು.

ಮೇಯರ್ ಸುನೀತಾ ಅಣ್ಣಪ್ಪ ಅವರನ್ನು ತರಾಟೆಗೆ ತೆಗೆದುಕೊಂಡ ಸಾರ್ವಜನಿಕರು

ನಗರದ ಯಾವ ವಾರ್ಡ್ ನಲ್ಲಿ ಸಮಸ್ಯೆ ಉಂಟಾಗಿದೆಯೋ ಅಲ್ಲಿಯೇ ಗಂಜಿಕೇಂದ್ರ ತೆರೆಯಲು ಸೂಚನೆ ನೀಡಿರುವುದಾಗಿ ಮೇಯರ್ ತಿಳಿಸಿದ್ದಾರೆ. ಇಂದು ಮಧ್ಯಾಹ್ನ ಹಾಗೂ ರಾತ್ರಿ ಊಟದ ವ್ಯವಸ್ಥೆ ಮಾಡಲಾಗಿದೆ. ಮಳೆ ಕಡಿಮೆಯಾದರೆ ಗಂಜಿ ಕೇಂದ್ರವನ್ನು ತೆರವು ಮಾಡಲಾಗುವುದು. ಸ್ಮಾರ್ಟ್ ಸಿಟಿ ಕಾಮಗಾರಿಯ ಅವಾಂತರ ಈಗ ತಿಳಿದು ಬರುತ್ತಿದೆ. ಇದನ್ನು ಸರಿಪಡಿಸಲಾಗುವುದು ಎಂದರು.

ಭಾರಿ ಮಳೆಗೆ ರಾಷ್ಟ್ರೀಯ ಹೆದ್ದಾರಿ 206 ಜಲಾವೃತ, ವಾಹನ ಸವಾರರ ಪರದಾಟ

ನಿನ್ನೆಯಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಶಿವಮೊಗ್ಗ ನಗರದ ಜನರ ಜೀವನ ಅಸ್ತವ್ಯಸ್ತವಾಗಿದೆ. ಅದರಂತೆ ಬೆಂಗಳೂರು, ಹೊನ್ನಾವರ ರಾಷ್ಟ್ರೀಯ ಹೆದ್ದಾರಿ 206ರ ಮೇಲೆ ಭಾರಿ ಪ್ರಮಾಣ ನೀರು ನಿಂತಿದ್ದು, ವಾಹನ ಸಂಚಾರ ಸ್ತಬ್ದವಾಗಿದೆ. ಇದರಿಂದಾಗಿ ವಾಹನ ಸವಾರರು ಪರದಾಡುವ ಸ್ಥಿತಿ ಉದ್ಬವವಾಗಿದೆ. ನಗರದ ಹೊರವಲಯದಲ್ಲಿರುವ ಪೆಸೆಟ್ ಕಾಲೇಜು ಬಳಿ ರಾಷ್ಟ್ರೀಯ ಹೆದ್ದಾರಿ ಮೇಲೆ ಭಾರಿ ಪ್ರಮಾಣದ ನೀರು ನಿಂತಿದೆ. ಇದರಿಂದಾಗಿ ವಾಹನ ಸವಾರರು ಪರದಾಡುವ ಪರಿಸ್ಥಿತಿ ಉಂಟಾಗಿದೆ.

ಮಳೆ ನೀರನ್ನು ಸ್ವಚ್ಛಗೊಳಿಸುತ್ತಿರುವ ಗೃಹಿಣಿ

ಓದಿ: ಎಸ್ಎಸ್ಎಲ್​ಸಿ ಫಲಿತಾಂಶದ ಬೆನ್ನಲ್ಲೇ ಪಿಯುಸಿ ದಾಖಲಾತಿ ಆರಂಭ: ವಿದ್ಯಾರ್ಥಿಗಳಿಗೆ ಸಮವಸ್ತ್ರ ಕಡ್ಡಾಯ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.