ETV Bharat / state

ಪ್ರೀತಿಸಲು ಒಪ್ಪದ ಯುವತಿಯ ಅಶ್ಲೀಲ ಫೋಟೋ ಪೋಸ್ಟ್​ ಮಾಡ್ತಿದ್ದ ಪಾಗಲ್​ ಪ್ರೇಮಿ ಅರೆಸ್ಟ್​​​​​

author img

By

Published : Aug 7, 2019, 2:53 PM IST

ಯುವತಿಯ ಅಶ್ಲೀಲ‌ ಫೋಟೋಗಳನ್ನು ನಕಲಿ ಇನ್​ಸ್ಟಾಗ್ರಾಂ ಮತ್ತು ಫೇಸ್​​ಬುಕ್ ಕ್ರಿಯೇಟ್ ಮಾಡಿ ಪೋಸ್ಟ್ ಮಾಡುತ್ತಿದ್ದ ಪಾಗಲ್ ಪ್ರೇಮಿಯನ್ನು ಸಿಇಎನ್ ಪೊಲೀಸರು ಬಂಧಿಸಿದ್ದಾರೆ.

ಪಾಗಲ್ ಪ್ರೇಮಿ

ಶಿವಮೊಗ್ಗ: ತನ್ನನ್ನು ಪ್ರೀತಿಸಲು‌ ನಿರಾಕರಿಸಿದ ಯುವತಿಯ ಅಶ್ಲೀಲ‌ ಫೋಟೋಗಳನ್ನು ನಕಲಿ ಇನ್​ಸ್ಟಾಗ್ರಾಂ ಮತ್ತು ಫೇಸ್​​ಬುಕ್ ಕ್ರಿಯೇಟ್ ಮಾಡಿ ಪೋಸ್ಟ್ ಮಾಡುತ್ತಿದ್ದ ಪಾಗಲ್ ಪ್ರೇಮಿಯನ್ನು ಸಿಇಎನ್ ಪೊಲೀಸರು ಬಂಧಿಸಿದ್ದಾರೆ.

ಭದ್ರಾವತಿಯ ಜಿಂಕ್ ಲೈನ್ ನಿವಾಸಿ ಸಚಿನ್ ಎಂಬ ಪಾಗಲ್ ಪ್ರೇಮಿ ಫೇಸ್​​ಬುಕ್​​ನಲ್ಲಿ ಪರಿಚಯವಾದ ಯುವತಿಯನ್ನು ಲವ್ ಮಾಡುವಂತೆ ಒತ್ತಾಯಿಸಿದ್ದಾನೆ. ಯುವತಿ ನಿರಾಕರಿಸಿದ್ದಕ್ಕೆ ಕೋಪಗೊಂಡ ಸಚಿನ್ ಒಂದಲ್ಲ ನಾಲ್ಕು ನಕಲಿ ಇನ್​ಸ್ಟಾಗ್ರಾಂ ಹಾಗೂ ಫೇಸ್​ಬುಕ್ ಮಸೆಂಜರ್ ಕ್ರಿಯೇಟ್ ಮಾಡಿ ಯುವತಿಯ ಅಶ್ಲೀಲ ಫೋಟೋಗಳನ್ನು ಪೋಸ್ಟ್ ಮಾಡಿ ಕಿರುಕುಳ ನೀಡಿದ್ದನಂತೆ. ಈ ಕುರಿತು ಸಿಇಎನ್ ಪೊಲೀಸ್ ಠಾಣೆಯಲ್ಲಿ ಯುವತಿಯ ತಾಯಿ ದೂರು ದಾಖಲಿಸಿದ್ದರು.

ಸಚಿನ್ ಯುವತಿಯ ಸಂಬಂಧಿಕರಿಗೆ ಹಾಗೂ ಸ್ನೇಹಿತರಿಗೆ ಪೋಸ್ಟ್ ಮಾಡಿ ಯುವತಿಯ ಚಾರಿತ್ರ್ಯವಧೆ ಮಾಡುತ್ತಿದ್ದ. ನಕಲಿ ಅಕೌಂಟ್ ಹಿಂದೆ ಬಿದ್ದ ಸಿಇಎನ್​​ನ ಸಿಪಿಐ ಗುರುರಾಜ್ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಯು ತನ್ನನ್ನು ಪ್ರೀತಿಸಲು ಒಪ್ಪದ ಕಾರಣ ಆಕೆಗೆ ಕೆಟ್ಟ ಹೆಸರು ತರಬೇಕು ಎಂಬ ಉದ್ದೇಶದಿಂದ ನಾಲ್ಕು ನಕಲಿ‌ ಖಾತೆ ತೆರೆದಿರುವ ಬಗ್ಗೆ ಒಪ್ಪಿಕೊಂಡಿದ್ದು, ಈತನಿಂದ ಮೊಬೈಲ್​ನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.

ಆರೋಪಿಯನ್ನು ಪತ್ತೆ ಮಾಡಿದ ತಂಡದಲ್ಲಿ ಕೆ.ಟಿ. ಗುರುರಾಜ, ಎ.ಎಸ್.ಐ ಮಲ್ಲಿಕಾರ್ಜುನ, ಎಂ.ಎ. ರಹತಲಿ, ಮಂಜುನಾಥ & ಸಿಬ್ಬಂದಿ ಚಂದ್ರಶೇಖರ್, ನರಸಿಂಹ ಮೂರ್ತಿ, ನಾಗೇಶ್, ಚೂಡಾಮಣಿ, ಜಗದೀಶ್, ಪ್ರಕಾಶ್ ನಾಯ್ಕ ಅವರಿದ್ದರು. ಸಿಇಎನ್ ಅಪರಾಧ ಪೊಲೀಸ್ ಠಾಣಾ ಸಿಬ್ಬಂದಿಯವರ ಕಾರ್ಯವನ್ನು ಪೊಲೀಸ್ ಅಧೀಕ್ಷಕರು ಶ್ಲಾಘಿಸಿದ್ದಾರೆ.

Intro:ನಕಲಿ ಇನ್ ಸ್ಟಾಗ್ರಾಂ ಮತ್ತು ಪೇಸ್ ಬುಕ್ ಐಡಿಯಲ್ಲಿ‌ ಯುವತಿಯ ಅಶ್ಲೀಲ ಪೋಟೊ ಹಾಕುತ್ತಿದ್ದ ವ್ಯಕ್ತಿಯ ಬಂಧನ.

ಶಿವಮೊಗ್ಗ: ತನ್ನನ್ನು ಪ್ರೀತಿಸಲು‌ ನಿರಾಕರಿಸಿದ ಯುವತಿಯ ಅಶ್ಲೀಲ‌ ಪೋಟೊಗಳನ್ನು ನಕಲಿ ಇನ್ ಸ್ಟಾಗ್ರಾಂ ಮತ್ತು ಫೇಸ್ ಬುಕ್ ಕ್ರಿಯೇಟ್ ಮಾಡಿ ಪೋಸ್ಟ್ ಮಾಡುತ್ತಿದ್ದ ಪಾಗಲ್ ಪ್ರೇಮಿಯನ್ನು ಸಿ.ಇ.ಎನ್ ಪೊಲೀಸರು ಬಂಧಿಸಿ ಜೈಲು ಹಾದಿ ತೋರಿಸಿದ್ದಾರೆ. ಭದ್ರಾವತಿಯ ಜಿಂಕ್ ಲೈನ್ ನಿವಾಸಿ ಸಚಿನ್ ಎಂಬ ಪಾಗಲ್ ಪ್ರೇಮಿ ಫೇಸ್ ಬುಕ್ ನಲ್ಲಿ ಪರಿಚಯವಾದ ಯುವತಿಯನ್ನು ಲವ್ ಮಾಡುವಂತೆ ಒತ್ತಾಯಿಸಿದ್ದಾನೆ. ಇದಕ್ಕೆ ಯುವತಿ ನಿರಾಕರಿಸಿದಕ್ಕೆ ಕೋಪ ಕೊಂಡ ಸಚಿನ್ ಒಂದಲ್ಲ ನಾಲ್ಕು ನಕಲಿ ಇನ್ ಸ್ಟ್ರಾಗ್ರಾಂ ಹಾಗೂ ಫೇಸ್ ಬುಕ್ ಮೇಸೆಜರ್ ಕ್ರಿಯೆಟ್ ಮಾಡಿ ಯುವತಿಯ ಅಶ್ಲೀಲ ಪೋಟೋ ಗಳನ್ನು ಪೊಸ್ಟ್ ಮಾಡಿ ಕಿರುಕುಳ ನೀಡಿದ್ದನು. ಈ ಕುರಿತು ಸಿ.ಇ.ಎನ್ ಪೊಲೀಸ್ ಠಾಣೆಯಲ್ಲಿ ಯುವತಿಯ ತಾಯಿ ದೂರು ದಾಖಲಾಗಿತ್ತು. ಸಚಿನ್ ಯುವತಿಯ ಸಂಬಂಧಿಕರಿಗೆ ಹಾಗೂ ಸ್ನೇಹಿತರಿಗೆ ಪೊಸ್ಟ್ ಮಾಡಿ ಯುವತಿಯ ಚಾರಿತ್ರವಧೆ ಮಾಡುತ್ತಿದ್ದನು.Body:ಈ ಕುರಿತು ಸಿ.ಇ.ಎನ್ ಪೊಲೀಸ್ ಠಾಣೆಯಲ್ಲಿ ಯುವತಿಯ ತಾಯಿ ದೂರು ದಾಖಲಾಗಿತ್ತು. ಸಚಿನ್ ಯುವತಿಯ ಸಂಬಂಧಿಕರಿಗೆ ಹಾಗೂ ಸ್ನೇಹಿತರಿಗೆ ಪೊಸ್ಟ್ ಮಾಡಿ ಯುವತಿಯ ಚಾರಿತ್ರವಧೆ ಮಾಡುತ್ತಿದ್ದನು. ನಕಲಿ ಅಕೌಂಟ್ ಹಿಂದೆ ಬಿದ್ದ ಸಿ.ಇ.ಎನ್ ನ ಸಿಪಿಐ ಗುರುರಾಜ್ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿದ್ದಾರೆ.Conclusion:ಆರೋಪಿ ತನ್ನನ್ನು ಪ್ರೀತಿಸಲು ಒಪ್ಪದ ಕಾರಣ ಆಕೆಗೆ ಕೆಟ್ಟ ಹೆಸರು ತರಬೇಕು ಎಂಬ ಉದ್ದೇಶ ದಿಂದ ನಾಲ್ಕು ನಕಲಿ‌ ಖಾತೆ ತೆರೆದಿರುವ ಬಗ್ಗೆ ಒಪ್ಪಿ ಕೊಂಡಿದ್ದಾನೆ. ಈತನಿಂದ ಮೊಬೈಲ್ ನ್ನು ವಶಕ್ಕೆ ಪಡೆದು ಕೊಳ್ಳಲಾಗಿದೆ. ಈಗ ಕಾರವಾರದ ಸರ್ಕಾರಿ ಡಿಪ್ಲಮೊ ಕಾಲೇಜನ್ನು ಅರ್ಧಕ್ಕೆ ಬಿಟ್ಟಿದ್ದ‌ನು ಎನ್ನಲಾಗಿದೆ.
ಆರೋಪಿಯನ್ನು ಪತ್ತೆ ಮಾಡಿದ ತಂಡದಲ್ಲಿ ಕೆ.ಟಿ. ಗುರುರಾಜ, ಪಿ.ಐ., ಎ.ಎಸ್.ಐ ರವರಾದ ಮಲ್ಲಿಕಾರ್ಜುನ, MA ರಹತಲಿ, ಮಂಜುನಾಥ & ಸಿಬಂದಿಯವರಾದ ಚಂದ್ರಶೇಖರ್, ನರಸಿಂಹ ಮೂರ್ತಿ,ನಾಗೇಶ್,ಚೂಡಾಮಣಿ, ಜಗದೀಶ್, ಪ್ರಕಾಶ್ ನಾಯ್ಕ ರವರಿದ್ದರು.
ಸಿಇಎನ್ ಅಪರಾಧ ಪೋಲಿಸ್ ಠಾಣಾ ಸಿಬಂದಿಯವರ ಕಾರ್ಯವನ್ನು ಪೋಲೀಸ್ ಅಧೀಕ್ಷಕರು ಶ್ಲಾಘಿಸಿರುತ್ತಾರೆ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.