ETV Bharat / state

ಬಿಹಾರದ ಫಲಿತಾಂಶದ ಬಳಿಕ‌ ರಾಜ್ಯದಲ್ಲಿ‌ ಸಿಎಂ ಬದಲಾವಣೆ ಆಗಬಹುದು: ಸಿದ್ದರಾಮಯ್ಯ - ಯಡಿಯೂರಪ್ಪ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ

ಇಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಶಿವಮೊಗ್ಗ ಜಿಲ್ಲೆಗೆ ಭೇಟಿ ನೀಡಿದ್ರು. ಇದೇ ವೇಳೆ ಮಾಜಿ ಸಚಿವ ವಿನಯ್​ ಕುಲಕರ್ಣಿ ಬಂಧನ ಕುರಿತು ಪ್ರತಿಕ್ರಿಯಿಸಿದ ಅವರು , ವಿನಯ್ ಕುಲಕರ್ಣಿ ಬಂಧನ ರಾಜಕೀಯ ಪ್ರೇರಿತವಾಗಿದೆ ಎಂದು ಆರೋಪಿಸಿದ್ರು.

shimogha
ಸಿದ್ದರಾಮಯ್ಯ ಹೇಳಿಕೆ
author img

By

Published : Nov 8, 2020, 3:11 PM IST

ಶಿವಮೊಗ್ಗ: ಉಪ ಚುನಾವಣಾ ಸಮೀಕ್ಷೆ ಏನೇ ಬರಲಿ, ಜನ ಕಾಂಗ್ರೆಸ್ ಪರವಾಗಿಯೇ ಇರುತ್ತಾರೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸಿಎಂ ತವರು ಜಿಲ್ಲೆ ಶಿವಮೊಗ್ಗದಲ್ಲಿ ಹೇಳಿಕೆ ನೀಡಿದ್ದಾರೆ.

ಸಿದ್ದರಾಮಯ್ಯ ಹೇಳಿಕೆ

ಇಂದು ಖಾಸಗಿ ಕಾರ್ಯಕ್ರಮಕ್ಕೆ ಆಗಮಿಸಿದ ವೇಳೆ ಮಾತನಾಡಿದ ಅವರು, ಎರಡೂ ಉಪ ಚುನಾವಣೆಯ ಸಮೀಕ್ಷೆ ಏನೆ ಬರಲಿ ನಾನು ಎರಡು ಕಡೆ ನಾಲ್ಕು- ನಾಲ್ಕು ದಿನ ಚುನಾವಣಾ ಕ್ಯಾಂಪೇನ್ ನಡೆಸಿ ಬಂದಿದ್ದೇನೆ. ಉಪ ಚುನಾವಣೆಯ ಎರಡೂ‌‌ ಕಡೆ ಬಿಜೆಪಿಗರು ಹಣ ಹಂಚಿ ಪ್ರಚಾರ ನಡೆಸಿದ್ದಾರೆ ಎಂದು ಆರೋಪಿಸಿದ್ರು.

ಬಿಹಾರ ಚುನಾವಣೆ ಕುರಿತು ಪ್ರತಿಕ್ರಿಯೆ:
ಬಿಹಾರದ ಜನತೆ ಬದಲಾವಣೆ ಬಯಸಿದ್ದಾರೆ. ಯುವಕರು, ನಿರುದ್ಯೋಗಿಗಳು, ವಲಸಿಗರು ನಿತೀಶ್ ಕುಮಾರ್ ವಿರುದ್ಧವಾಗಿದ್ದಾರೆ. ಇದರಿಂದ ನಿತೀಶ್ ಕುಮಾರ್ ವಿರುದ್ದದ ಅಲೆ ಇದೆ ಎಂದರು.

ವಿನಯ್ ಕುಲಕರ್ಣಿ ಬಂಧನ ರಾಜಕೀಯ ಪ್ರೇರಿತ:

ಮಾಜಿ ಸಚಿವ ವಿನಯ್ ಕುಲಕರ್ಣಿ ಬಂಧನ ರಾಜಕೀಯ ಪ್ರೇರಿತವಾಗಿದೆ ಎಂದು ಸಿದ್ದರಾಮಯ್ಯ ಬಿಜೆಪಿ ವಿರುದ್ದ ಕಿಡಿಕಾರಿದ್ದಾರೆ. ಹಿಂದೆ ಪೊಲೀಸರು ವಿಚಾರಣೆ ನಡೆಸಿದಾಗ ಚಾರ್ಜ್ ಶೀಟ್ ನಲ್ಲಿ ಕುಲಕರ್ಣಿ‌ ಹೆಸರನ್ನು ಕುಟುಂಬಸ್ಥರು ಹೇಳಿರಲಿಲ್ಲ.‌ ಸಿಬಿಐಗೆ ವಹಿಸಿದ ಮೇಲೆ ಸುದೀರ್ಘ‌ ವಿಚಾರಣೆ ಮಾಡಿ,‌ ಅವರನ್ನು ಕೊಲೆ‌ ಕೇಸ್ ನಲ್ಲಿ‌‌ ಸಿಲುಕಿಸಿರಬಹುದು ಎಂಬ ಶಂಕೆ ಇದೆ. ಇದೆಲ್ಲಾ‌ ಕೇಂದ್ರ ಮಂತ್ರಿ ಪ್ರಹ್ಲಾದ್ ಜೋಷಿರವರ ಒತ್ತಡದಿಂದ ಮಾಡಿರಬಹುದು ಎಂಬ ಶಂಕೆ ವ್ಯಕ್ತಪಡಿಸಿದರು.

ಸಿಎಂ ಬದಲಾವಣೆಯ ಮಾಹಿತಿ‌ ಇದೆ:
ರಾಜ್ಯದಲ್ಲಿ‌ ಯಡಿಯೂರಪ್ಪ‌ರವರನ್ನು ಸಿಎಂ ಸ್ಥಾನದಿಂದ‌ ಬದಲಾಯಿಸಬೇಕಿದೆ ಎಂಬ‌ ಕೂಗು ಅದೇ ಪಕ್ಷದಲ್ಲಿ‌ ಇದೆ. ಬಿಹಾರದ ಫಲಿತಾಂಶದ ಬಳಿಕ‌ ರಾಜ್ಯದಲ್ಲಿ‌ ಸಿಎಂ ಬದಲಾವಣೆ ಆಗಬಹುದು ಎಂದರು.‌ ಬಿಜೆಪಿಯಲ್ಲಿ ಎರಡು ಮೂರು ಗುಂಪುಗಳಿವೆ. ಅವರು ಸಿಎಂ ಬದಲಾವಣೆ ಆಗಬೇಕು ಎಂದರು.‌ ಕೇಂದ್ರದವರು ಈ‌ ಸರ್ಕಾರದ ವಿರುದ್ದ ಭ್ರಷ್ಟಚಾರ ಆರೋಪದಡಿ ಸರ್ಕಾರ ಬದಲಾವಣೆ ಆಗುತ್ತದೆ ಎಂದರು.ಲವ್ ಜಿಹಾದ್ ಹಾಗೂ ಮತಾಂತರ ಕಾಯ್ದೆ ತರಲು ಬಿಜೆಪಿ ಸರ್ಕಾರ ಮುಂದಾಗಿದೆ ಎಂಬ ಕುರಿತು ಪ್ರತಿಕ್ರಿಯಿಸಿದ ಸಿದ್ದರಾಮಯ್ಯ ಇದು ಸಂವಿಧಾನ ವಿರೋಧಿ ಎಂದರು.

ಆಪರೇಷನ್ ಕಮಲ ಜನಕ ಯಡಿಯೂರಪ್ಪ:

ಆಪರೇಷನ್ ಕಮಲದ ಜನಕ ಯಡಿಯೂರಪ್ಪ, ಅವರಿಂದಲೇ ಆಪರೇಷನ್ ಕಮಲ‌ ನಡೆದಿದೆ. ಅವರಿಗೆ ಅಧಿಕಾರ ಬೇಕು ಅಂದ್ರೆ, ಎಲ್ಲಿ ಬೇಕಾದರೂ ಸಹ ಆಪರೇಷನ್ ಕಮಲ ನಡೆಸುತ್ತಾರೆ ಎಂದರು. ಅದು ಸ್ಥಳೀಯ ಸಂಸ್ಥೆಗೂ ಕಾಲಿಟ್ಟಿದ್ದಾರೆ ಎಂದರು. ಈ ವೇಳೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸುಂದರೇಶ್, ಮಾಜಿ‌ ಶಾಸಕ ಕೆ.ಬಿ.ಪ್ರಸನ್ನ ಕುಮಾರ್ ಸೇರಿ‌ ಕಾಂಗ್ರೆಸ್ ಕಾರ್ಯಕರ್ತರು ಹಾಜರಿದ್ದರು.

ಕಾಂಗ್ರೆಸ್ ಕಾರ್ಯಕರ್ತರಿಂದ ನೂಕು ನುಗ್ಗಲು

ಸಿದ್ದರಾಮಯ್ಯನವರು ಹೆಲಿಕ್ಯಾಪ್ಟರ್ ನಲ್ಲಿ ಬರುತ್ತಿದ್ದಂತೆಯೇ ಕಾಂಗ್ರೆಸ್ ಕಾರ್ಯಕರ್ತರಿಂದ ನೂಕು ನುಗ್ಗಲು ಉಂಟಾಯ್ತು. ಈ ವೇಳೆ ಪೊಲೀಸರು ಕಾರ್ಯಕರ್ತರನ್ನು ಹತೋಟಿಗೆ ತರಲು‌ ಹರ ಸಾಹಸ ಪಟ್ಟರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.