ETV Bharat / state

ಹೋಂ ಶಾಪ್ 18 ಹೆಸರಲ್ಲಿ ಗೋಬಿ ಮಂಚೂರಿ ವ್ಯಾಪಾರಿಗೆ ದೋಖಾ ಮಾಡಲು ಯತ್ನ... ಕೊನೆಗೇನಾಯ್ತು?

author img

By

Published : Dec 22, 2019, 6:16 PM IST

ಆನ್​ಲೈನ್​ನಲ್ಲಿ ವಿವಿಧ ಆಮಿಷ ತೋರಿ ಮೋಸ ಮಾಡುತ್ತಾರೆ. ನಾವು ಸ್ವಲ್ಪ ಎಚ್ಚರ ವಹಿಸಿದರೆ ಮೋಸ ಹೋಗುವುದರಿಂದ ಬಚಾವ್ ಆಗಬಹುದು. ಇದಕ್ಕೆ ಶಿವಮೊಗ್ಗದಲ್ಲಿ ಒಂದು ನಿದರ್ಶನ ಲಭ್ಯವಾಗಿದೆ.

ದುಡ್ಡು ಕೊಟ್ರೇ ಬೀಳುತ್ತೆ ಪಂಗನಾಮ
ದುಡ್ಡು ಕೊಟ್ರೇ ಬೀಳುತ್ತೆ ಪಂಗನಾಮ

ಶಿವಮೊಗ್ಗ: ಆಧುನಿಕ ತಂತ್ರಜ್ಞಾನ ಬೆಳೆದಂತೆ ಮೋಸ ಮಾಡುವ ಹಾಗೂ ಮೋಸ ಹೋಗುವವರ ಸಂಖ್ಯೆ ಹೆಚ್ಚಳವಾಗುತ್ತಿದೆ. ಆನ್​ಲೈನ್​ನಲ್ಲಿ ವಿವಿಧ ಆಮಿಷ ತೋರಿ ಮೋಸ ಮಾಡುತ್ತಾರೆ. ನಾವು ಸ್ವಲ್ಪ ಎಚ್ಚರ ವಹಿಸಿದರೆ ಮೋಸ ಹೋಗುವುದರಿಂದ ಬಚಾವ್ ಆಗಬಹುದು. ಇದಕ್ಕೆ ಶಿವಮೊಗ್ಗದಲ್ಲಿ ಒಂದು ನಿದರ್ಶನ ಲಭ್ಯವಾಗಿದೆ.

ಶಿವಮೊಗ್ಗದ ಗೋಬಿ ಮಂಚೂರಿ ವ್ಯಾಪಾರಿ ದೇವರಾಜ್ ಅವರಿಗೆ ಆನ್​ಲೈನ್​ ಶಾಪ್ 18 ರಿಂದ ಒಂದು ಲೆಟರ್ ಬಂದಿತ್ತು. ಅದರಲ್ಲಿ ಒಂದು‌‌ ಸ್ಕ್ಯಾರ್ಚ್ ಕಾರ್ಡ್ ಕೂಡ ಇತ್ತು. ಈ ಕಾರ್ಡನ್ನು ಸ್ಕ್ಯಾರ್ಚ್ ಮಾಡಿದರೆ ಅದರಲ್ಲಿ ಇರುವ ಹಣವನ್ನು ನಿಮಗೆ ಕೊಡಲಾಗುತ್ತಿದೆ ಎಂದು ಹೇಳಲಾಗಿತ್ತು. ನಂತರದಲ್ಲಿ ಅದನ್ನು ನೋಡಿದಾಗ ಅದರಲ್ಲಿ ‌ ₹ 8.50 ಲಕ್ಷ ರೂ. ಬಂದಿತ್ತು. ನಂತರ ಒಂದು ಪೋನ್ ಕರೆ ಬಂದು, ನಿಮಗೆ ₹ 8.50 ಲಕ್ಷ ಬಂದಿದೆ. ನೀವು ನಮಗೆ ಟ್ಯಾಕ್ಸ್ ಹಣವಾಗಿ‌ ₹ 8 ಸಾವಿರ ನಮ್ಮ ಖಾತೆಗೆ ಹಾಕಿ ಎಂದು ಹೇಳಿದ್ದಾರೆ.

ದುಡ್ಡು ಕೊಟ್ರೇ ಬೀಳುತ್ತೆ ಪಂಗನಾಮ

ಆದರೆ ಇದರ ಬಗ್ಗೆ ಎಚ್ಚರವಹಿಸಿದ ದೇವರಾಜ್ ಹಣವನ್ನು ಹಾಕದೇ ವಾಪಸ್ ಬಂದಿದ್ದಾರೆ. ಬಳಿಕ ಪೊಲೀಸರಿಗೆ ಈ ಮಾಹಿತಿ ತಿಳಿಸಿದಾಗ ಅದು ನಕಲಿ ಎಂದು ಗೊತ್ತಾಗಿದೆ. ಕಳೆದ ಆರು ತಿಂಗಳ ಹಿಂದೆ ಆನ್​ಲೈನ್​ನ ಹೋಂ ಶಾಪ್ 18 ನಲ್ಲಿ ದೇವರಾಜ್, ₹ 4,500 ಕೊಟ್ಟು ಒಂದು‌ ಟ್ಯಾಬ್ ಖರೀದಿ ಮಾಡಿದ್ದರು. ಅದು ಕೇವಲ ಒಂದು ತಿಂಗಳು ಸಹ ಸರಿಯಾಗಿ ಕಾರ್ಯ ನಿರ್ವಹಿಸದೇ ಹಾಳಾಗಿ ಹೋಗಿದೆ. ಇದರಿಂದ ಒಮ್ಮೆ ಮೋಸ ಹೋದ ದೇವರಾಜ್, ಪೊಲೀಸರ ಸಲಹೆ ಮೇರೆಗೆ ಮೋಸ ಹೋಗುವುದರಿಂದ ಬಚಾವ್ ಆಗಿದ್ದಾರೆ.

Intro:ತಲೆ ಉಪಯೋಗಿಸಿ ಹಣ ಕಳೆದು ಕೊಳ್ಳುವುದರಿಂದ ಬಚಾವ್ ಆದ ವ್ಯಾಪಾರಿ..

ಶಿವಮೊಗ್ಗ: ಆಧುನಿಕ ತಂತ್ರಜ್ಞಾನ ಬೆಳೆದಂತೆ ಮೋಸ ಮಾಡುವ ಹಾಗೂ ಮೋಸ ಹೋಗುವವರ ಸಂಖ್ಯೆ ಸಹ ಹೆಚ್ಚಳವಾಗುತ್ತಿದೆ. ಆನ್ ಲೈನ್ ನಲ್ಲಿ ವಿವಿಧ ಆಮಿಷ ತೋರಿ ಮೋಸ ಮಾಡುತ್ತಾರೆ. ನಾವು ಮೋಸ ಹೋಗುವ ಮುನ್ನಾ ಸ್ವಲ್ಪ ಎಚ್ಚರ ವಹಿಸಿದರೆ, ಮೋಸ ಹೋಗುವುದರಿಂದ ಬಚಾವ್ ಆಗಬಹುದು. ಇದಕ್ಕೆ ಶಿವಮೊಗ್ಗದಲ್ಲಿ ಒಂದು ನಿದರ್ಶನ ಲಭ್ಯವಾಗಿದೆ. ಶಿವಮೊಗ್ಗದ ಗೋಬಿ ಮಂಚೂರಿ ವ್ಯಾಪಾರಿಯಾದ ದೇವರಾಜ್ ರವರಿಗೆ ಅನ್ಲೈನ್ ಶಾಪ್ 18 ನಿಂದ ಒಂದು ಲೇಟರ್ ಬರುತ್ತದೆ. ಇದರಲ್ಲಿ ಒಂದು‌‌ ಸ್ಕ್ಯಾರ್ಚ್ ಕಾರ್ಡ್ ಇರುತ್ತದೆ. ಈ ಕಾರ್ಡ್ ನ್ನು ಸ್ಕ್ಯಾರ್ಚ್ ಮಾಡಿದರೆ ಅದರಲ್ಲಿ ಇರುವ ಹಣವನ್ನು ನಿಮಗೆ ಕೊಡಲಾಗುತ್ತಿದೆ ಎಂದು ಹೇಳಲಾಗಿತ್ತು.Body:ಈ ಕಾರ್ಡ್ ನಲ್ಲಿ‌ 8.50 ಲಕ್ಷ ರೂ ಬಂದಿತ್ತು. ನಂತ್ರ ಒಂದು ಪೋನ್ ಕಾಲ್ ಬರುತ್ತದೆ. ನಿಮಗೆ ಸ್ಕ್ಯಾರ್ಚ್ ಕಾರ್ಡ್ ನಲ್ಲಿ‌ ಎಷ್ಟು ಹಣ ಬಂದಿದೆ ಎಂದು ತಿಳಿದು ಕೊಳ್ಳುತ್ತಾರೆ. ನಿಮಗೆ 8.50 ಲಕ್ಷ ರೂ ಬಂದಿದೆ ಇದಕ್ಕೆ ನೀವು ನಮಗೆ ಟ್ಯಾಕ್ಸ್ ಹಣವಾಗಿ‌ 8 ಸಾವಿರ ರೂ ಗಳನ್ನು ನಮ್ಮ‌ ಖಾತೆಗೆ ಹಾಕಿ ಎಂದು ಹಿಂದಿಯಲ್ಲಿ ಮಾತನಾಡಿ, ಒಂದು‌ ಬ್ಯಾಂಕ್ ಅಕೌಂಟ್ ನಂಬರ್ ನೀಡುತ್ತಾರೆ. ಅಲ್ಲದೆ ನಿಮ್ಮ ಬ್ಯಾಂಕ್‌ ಖಾತೆ‌ ನಂಬರ್, ಆಧಾರ್, ಪಾನ್ ಕಾರ್ಡ್ ನಂಬರ್ ಅನ್ನು ಸ್ಕ್ಯಾರ್ಚ್ ಕಾರ್ಡ್ ಜೊತೆಗೆ ಒಂದು ಲೇಟರ್ ನಲ್ಲಿ ಕಳುಹಿಸಿ ಎಂದು ಪೋನ್ ನಲ್ಲಿ ತಿಳಿಸಿದ್ದಾರೆ.‌Conclusion:ಇವರ ಮೋಸದ ಜಾಲಕ್ಕೆ ಬಿಳಬೇಡಿ ಎಂದು‌ ಎಚ್ಚರಿಸಿದ್ದಾರೆ. ಇದರಿಂದ ಎಚ್ಚರಗೊಂಡ ದೇವರಾಜ್ ಅಕೌಂಟ್ ಗೆ ಹಣ ಹಾಕದೆ ವಾಪಸ್ ಬಂದಿದ್ದಾರೆ. ಇದರಿಂದ ದೇವರಾಜ್ ಹಣವನ್ನು ಉಳಿಸಿ ಕೊಂಡಿದ್ದಾರೆ. ದೇವರಾಜ್
ಕಳೆದ ಆರು ತಿಂಗಳ ಹಿಂದೆ ಆನ್ ಲೈನ್ ನ ಹೋಂ ಶಾಪ್ 18 ನಲ್ಲಿ ಒಂದು‌ ಟ್ಯಾಬ್ ಖರೀದಿ ಮಾಡಿದ್ದರು. ಈ ಟ್ಯಾಬ್ 4.500 ರೂ ಆಗಿದ್ದು , ಇದು ನಕಲಿ‌ ಟ್ಯಾಬ್ ಆಗಿದ್ದು, ಕೇವಲ ಒಂದು ತಿಂಗಳು ಸಹ ಇದು ಸರಿಯಾಗಿ ಕಾರ್ಯನಿರ್ವಹಿಸದೆ ಹಳಾಗಿ ಹೋಗಿದೆ. ಇದರಿಂದ ಒಮ್ಮೆ ಮೋಸ ಹೋದ ದೇವರಾಜ್ ಪೊಲೀಸರ ಸಲಹೆ ಮೇರೆಗೆ ಮೋಸ ಹೋಗುವುದರಿಂದ ಬಚಾವ್ ಆಗಿದ್ದಾರೆ. ದಯಮಾಡಿ ಯಾರು ಸಹ ಆನ್ ಲೈನ್ ಶಾಪಿಂಗ್ ಮಾಡಿ, ಅವರ ಮೋಸದ ಜಾಲಕ್ಕೆ ಬಿಳಬೇಡಿ ಎಂದು ದೇವರಾಜ್ ಹಾಗೂ ದೇವರಾಜ್ ಸಹೋದರಿ ರಾಜೇಶ್ವರಿ ವಿನಂತಿ ಮಾಡಿದ್ದಾರೆ.

ಬೈಟ್: ದೇವರಾಜ್. ಗೋಬಿ ವ್ಯಾಪಾರಿ.

2) ರಾಜೇಶ್ವರಿ. ದೇವರಾಜ್ ಸಹೋದರಿ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.