ಶಿವಮೊಗ್ಗ: ಮಾರುತಿ ಓಮಿನಿ ಕಾರಿನಲ್ಲಿ ಅಂದಾಜು 3 ಲಕ್ಷ ರೂ. ಮೌಲ್ಯದ ಬೀಟೆ ತುಂಡುಗಳನ್ನು ಸಾಗಿಸುತ್ತಿರುವಾಗ ಅರಣ್ಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ, ಕಾರು ಸಮೇತ ಓರ್ವನನ್ನು ಬಂಧಿಸಿದ್ದಾರೆ.
ಕುಮದ್ವತಿ ಅರಣ್ಯ ವಿಭಾಗದಲ್ಲಿ ಹುಂಚ - ರಿಪ್ಪನಪೇಟೆ ಮಾರ್ಗದಲ್ಲಿ ಅಕ್ರಮವಾಗಿ ಬೀಟೆ ಮರ ಸಾಗಿಸುತ್ತಿರುವ ಖಚಿತ ಮಾಹಿತಿ ಮೇರೆಗೆ ಉಪ ವಲಯ ಅರಣ್ಯಾಧಿಕಾರಿ ಪರುಶುರಾಮ್ ನೇತೃತ್ವದಲ್ಲಿ ದಾಳಿ ನಡೆಸಿ, 1.5 ಮೀಟರ್ ಉದ್ದದ 15 ತುಂಡುಗಳನ್ನು ಮತ್ತು ಕಾರು ಚಾಲಕ ಪ್ರದೀಪ್ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಇನ್ನು ಪೊಲೀಸ್ ದಾಳಿ ವೇಳೆ ಪ್ರಶಾಂತ್, ಪ್ರಮೋದ್ ಹಾಗೂ ವಾಸು ಮೂವರು ಆರೋಪಿಗಳು ಪರಾರಿಯಾಗಿದ್ದು, ಇವರಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.