ETV Bharat / state

ಶಿವಮೊಗ್ಗ: ಸೇತುವೆ ದಾಟುವಾಗ ಕೊಚ್ಚಿ ಹೋಗಿದ್ದ ವೃದ್ಧೆಯ ಶವ ಪತ್ತೆ - shimogha latest news

ನಿನ್ನೆ ಹಳ್ಳ ದಾಟುವ ವೇಳೆ ಕಾಲು ಜಾರಿ ನೀರಿನಲ್ಲಿ ಕೊಚ್ಚಿ ಹೋಗಿದ್ದ ಭದ್ರಾವತಿ ತಾಲೂಕು ಹೊಳೆಹೊನ್ನೂರು ಪಟ್ಟಣದ ವೃದ್ಧೆಯ ಶವ ಇಂದು ಪತ್ತೆಯಾಗಿದೆ.

found
ವೃದ್ಧೆಯ ಶವ ಪತ್ತೆ
author img

By

Published : Jul 25, 2021, 9:12 PM IST

ಶಿವಮೊಗ್ಗ: ಹಳ್ಳದ ನೀರಿನಲ್ಲಿ‌ ಕೊಚ್ಚಿ ಹೋಗಿದ್ದ ವೃದ್ಧೆಯ ಶವ ಪತ್ತೆಯಾಗಿದೆ. ನಿನ್ನೆ ಭದ್ರಾವತಿ ತಾಲೂಕು ಹೊಳೆಹೊನ್ನೂರು ಪಟ್ಟಣದ ಹಳ್ಳದಲ್ಲಿ ನಿನ್ನೆ ಅಗಸರ ಬೀದಿಯ ಹನುಮಕ್ಕ(70) ನೀರಿನಲ್ಲಿ ತೇಲಿ ಹೋಗಿದ್ದರು.

ಇದನ್ನೂ ಓದಿ: ಉತ್ತರ ಕನ್ನಡ ಜಿಲ್ಲೆಯ ಜನರ ಮೇಲೆ ವರುಣನ ಮುನಿಸು; ನೆರೆಗೆ ನಲುಗಿದ ಜನತೆ

ಹನುಮಕ್ಕ ಪಕ್ಕದ ಹೊಳೆಭೈರನಹಳ್ಳಿ ಗ್ರಾಮದ ತೋಟಕ್ಕೆ ಹೋಗಲು ಹಳ್ಳ ದಾಟುವಾಗ ನೀರು ಹೆಚ್ಚಾಗಿ ಕಿರು ಸೇತುವೆ ಮೇಲೆ ಹರಿದು, ಕಾಲು ಜಾರಿ ಹರಿಯುವ ನೀರಿನಲ್ಲಿ‌ ಕೊಚ್ಚಿ ಹೋಗಿದ್ದರು.

ನಿನ್ನೆ ಸಂಜೆ ನಡೆದ ಘಟನೆಯಾದ ಕಾರಣ ಸ್ವಲ್ಪ ಸಮಯ ಹುಡುಕಾಟ ನಡೆಸಿ, ಇಂದು ಹುಡುಕಾಟ ಮುಂದುವರೆಸಲಾಗಿತ್ತು. ಕೊಚ್ಚಿ ಹೋಗಿದ್ದ ಹನುಮಕ್ಕ‌ ಶವ ಸಂಜೆ ಪತ್ತೆಯಾಗಿದ್ದು, ಹಳ್ಳ ಹರಿಯುವ 100 ಮೀಟರ್ ದೂರದಲ್ಲಿ ದೊರೆತಿದೆ. ಶವ ಪತ್ತೆ ಕಾರ್ಯಾಚರಣೆ ವೇಳೆ ಭದ್ರಾವತಿ ತಹಶೀಲ್ದಾರ್ ಪ್ರದೀಪ್ ಹಾಗೂ ಹೊಳೆಹೂನ್ನೂರು ಪೊಲೀಸರು ಹಾಜರಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.